ಯಲ್ಲಾಪುರ: ಶ್ರೀಕೃಷ್ಣ ಜನ್ಮಾಷ್ಠಮಿಯ ನಿಮಿತ್ತ ಸುಜ್ಞಾನ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-2023ರ ಫಲಿತಾಂಶವನ್ನ ತಾಲೂಕಿನ ಪುರಾಣ ಪ್ರಸಿದ್ಧ ಅಣಲಗಾರ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರಕಟಿಸಲಾಯಿತು.
ಸ್ಪರ್ಧೆಯಲ್ಲಿ ವೈಷ್ಣವಿ ಹೆಗಡೆ ಶಿರಸಿ ಪ್ರಥಮ, ಶ್ರೇಯಸ್ ಹೆಗಡೆ ಯಲ್ಲಾಪುರ ದ್ವಿತೀಯ, ಜತೀನ್ ಗೌಡ ಕಾರವಾರ ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಹತ್ತು ಸಮಾಧಾನಕರ ಬಹುಮಾನಗಳಿಗಾಗಿ ಧಾತ್ರಿ ಭಟ್ ಕುಮಟಾ, ನಿನಾದ ಮಲವಳ್ಳಿ, ಹನೀಷಾ ಗೌಡ ಗುಳ್ಳಾಪುರ, ಸ್ಮೃತಿ ಭಟ್ ಬಾರೆ, ಮೋಹಿತ್ ಎಸ್ ಸಿದ್ದಾಪುರ, ರಿಶಿ ದೇಸಾಯಿ ಜೋಯ್ಡಾ, ಬ್ರಾಹ್ಮಿ ಕವಡಿಕೆರೆ, ಅನೀಶ್ ಆರ್ ಗಾಂವ್ಕಾರ್, ಹರ್ಷ ನಾಯ್ಕ, ತೇಜಸ್ ಟಿ.ಬದ್ನೇಪಾಲ್‌ರನ್ನು ಆಯ್ಕೆ ಮಾಡಲಾಗಿದೆ.
ಈ ಸ್ಪರ್ಧೆಯ ನಿರ್ಣಾಯಕರಾಗಿ ನಿವೃತ್ತ ತಹಸೀಲ್ದಾರ್ ಡಿ.ಜಿ.ಹೆಗಡೆ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಘಟಕದ ಅಧ್ಯಕ್ಷ ಜಿ.ಎಸ್.ಗಾಂವ್ಕಾರ್, ಪತ್ತಾರ್ ಫೋಟೋ ಸ್ಟುಡಿಯೋ ಮಾಲೀಕರಾದ ಗಣೇಶ ಪತ್ತಾರ್ ಕಾರ್ಯನಿರ್ವಹಿಸಿದ್ದರು.
ಪ್ರಥಮ, ದ್ವಿತೀಯ, ತೃತೀಯ ಸ್ಥಾನ ವಿಜೇತರಿಗೆ ನಗದು ಬಹುಮಾನ, ಪಾರಿತೋಷಕ, ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು ಹಾಗೂ ಸಮಾಧಾನಕರ ಬಹುಮಾನ ವಿಜೇತರಿಗೆ ಪಾರಿತೋಷಕ, ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು. ಬಹುಮಾನ ವಿತರಣಾ ಸಮಾರಂಭದ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಫೌಂಡೇಶನ್ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಆರ್.ಭಟ್ ಬಿದ್ರೇಪಾಲ್, ಹಿರಿಯರಾದ ರಾಮಕೃಷ್ಣ ಭಟ್ ಬಿದ್ರೇಪಾಲ್, ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್, ಪ್ರಮುಖರಾದ ಪ್ರಕಾಶ ಶೇಟ್, ಸುಬ್ಬಣ್ಣ ಕಂಚ್ಗಲ್, ಡಾ.ಪ್ರತೀಕ್ಷಾ ಶೇಟ್, ಮಹಾಬಲೇಶ್ವರ ಭಾಗ್ವತ್ ಗುಡ್ನಮನೆ ಮುಂತಾದವರು ಇದ್ದರು.