Slide
Slide
Slide
previous arrow
next arrow

ಶಿಕ್ಷಕರ ದಿನಾಚರಣೆ: ಬೆಳಸೆ ಶಾಲಾ ಶಿಕ್ಷಕರಿಗೆ ಸನ್ಮಾನ

300x250 AD

ಅಂಕೋಲಾ: ತಾಲೂಕು ಮೂಲದ, ದುಬೈನಲ್ಲಿ ನೆಲೆಸಿರುವ ರಫೀಕ್ ಶೇಖ್ ಹಾಗೂ ರೂಬಿ ಶೇಖ್ ದಂಪತಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ತಾಲೂಕಿನ ಬೆಳಸೆ ನಂ.2 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಸಿಬ್ಬಂದಿಯನ್ನ ಸನ್ಮಾನಿಸಿ ಗೌರವಿಸಿದರು.
ಈ ದಂಪತಿ ಹಲವಾರು ವರ್ಷಗಳಿಂದ ಶಾಲೆಗೆ ಕಪಾಟು, ಕುರ್ಚಿ, ಮಕ್ಕಳಿಗೆ ಸ್ಕೂಲ್‌ಬ್ಯಾಗ್, ಛತ್ರಿ ಹೀಗೆ ತಮ್ಮ ತಂದೆಯವರ ಹೆಸರಿನಲ್ಲಿ ಕೊಡುತ್ತಲೇ ಬಂದಿದ್ದಾರೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ತಮ್ಮ ಶಿಕ್ಷಕರ ನೆನಪಿನಲ್ಲಿ ಶಾಲೆಯ ಶಿಕ್ಷಕರಾದ ರೇಣುಕಾ ರಮಾನಂದ ಹಾಗೂ ಸವಿತಾ ಗುನಗಾ, ಅಡುಗೆ ಹಾಗೂ ಅಂಗನವಾಡಿ ಸಿಬ್ಬಂದಿಯನ್ನ ಸನ್ಮಾನಿಸಿ ಗೌರವಿಸಿದರು.
ಮಕ್ಕಳ ಜೊತೆ ಪ್ರಾರ್ಥನಾ ಅವಧಿಯಲ್ಲಿ ನಾಡಗೀತೆ ಹಾಗೂ ರಾಷ್ಟ್ರಗೀತೆಯನ್ನು ಹಾಡಿ ಖುಷಿಪಟ್ಟ ದಂಪತಿ, ಶಿಕ್ಷಕರ ದಿನಾಚರಣೆಯ ಮಹತ್ವದ ಜೊತೆಗೆ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಪುಲೆ ಅವರ ಕುರಿತಾಗಿ ಮಕ್ಕಳಿಗೆ ತಿಳಿಸಿಕೊಟ್ಟರು. ವಿದ್ಯಾರ್ಥಿಗಳಿಗಾಗಿ ದುಬೈನಿಂದ ತಂದಿದ್ದ ಸಿಹಿತಿನಿಸುಗಳನ್ನು ಹಂಚಿದರು. ಶಾಲೆಯ ಪರವಾಗಿ ಶಿಕ್ಷಕರೂ ಸಹ ಅವರನ್ನು ಸನ್ಮಾನಿಸಿ ಗೌರವಿಸಿದರು.

300x250 AD
Share This
300x250 AD
300x250 AD
300x250 AD
Back to top