Slide
Slide
Slide
previous arrow
next arrow

‘ಸಮರ್ಪಣಾ’ ವಿಶ್ರಾಂತ ಶಿಕ್ಷಕ ಬಳಗದಿಂದ ವೃಕ್ಷಮಾತೆಗೆ ಸನ್ಮಾನ

300x250 AD

ಅಂಕೋಲಾ: ‘ಸಮರ್ಪಣಾ’ ವಿಶ್ರಾಂತ ಶಿಕ್ಷಕ ಬಳಗವು ತಾಲೂಕಿನ ಹೊನ್ನಳ್ಳಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ತುಳಸಿ ಗೌಡರನ್ನು ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಕಿರುಕಾಣಿಕೆ ನೀಡಿ ಗೌರವಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿಶ್ರಾಂತ ಶಿಕ್ಷಕ ಲಕ್ಷ್ಮಣ ವಿ.ಗೌಡರು ಮಾತಾಡಿ, ಉತ್ತರ ಕನ್ನಡಕ್ಕೆ ದೊರೆತ ಮೂರು ಪದ್ಮಶ್ರೀ ಪ್ರಶಸ್ತಿಗಳಲ್ಲಿ ತುಳಸಜ್ಜಿಗೂ ದೊರೆತದ್ದು ಹೆಚ್ಚು ಮೌಲ್ಯಯುತವಾದದ್ದು. ಗಿಡನೆಟ್ಟು ರಕ್ಷಿಸಿ ಪರಿಸರ ಕಾಳಜಿ ಮೆರೆದ ಅವರ ಸಾಧನೆ ಶ್ಲಾಘನೀಯ ಎಂದು ತಮ್ಮ ಸಂತಸ ಹಂಚಿಕೊ0ಡರು.

300x250 AD


ಕಾರ್ಯಕ್ರಮವು ಸಾತು ಗೌಡರ ಸ್ವಾಗತ ಮಾತಿನೊಂದಿಗೆ ಪ್ರಾರಂಭವಾಯಿತು. ‘ಸಮರ್ಪಣಾ’ ನಿವೃತ್ತ ಶಿಕ್ಷಕರ ಬಳಗದ ಕುರಿತು ದೇವರಾಯ ನಾಯಕರು ಪ್ರಾಸ್ತಾವಿಕ ಮಾತಾಡಿದರು. ಮುಖ್ಯ ಅತಿಥಿಗಳಾಗಿ ಅಗಸೂರು ಗ್ರಾಮ ಪಂಚಾಯತದ ಅಧ್ಯಕ್ಷೆ ನಿರ್ಮಲಾ ನಾಯಕ, ಉಪಾಧ್ಯಕ್ಷ ಯಶವಂತ ಗೌಡ ಮತ್ತು ಸದಸ್ಯೆ ಶೋಭಾ ಗೌಡ ಆಗಮಿಸಿ ವಿಶ್ರಾಂತ ಶಿಕ್ಷಕರು ಮಾಡುವ ಕಾರ್ಯದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳು ಹಾಗೂ ವಿಶ್ರಾಂತ ಶಿಕ್ಷಕ ಬಳಗವೆಲ್ಲಾ ಸೇರಿ ಗಿಡಬೆಳೆಸಿ ಪರಿಸರ ರಕ್ಷಣೆಯಲ್ಲಿ ಅಪರಿಮಿತ ಸೇವೆಸಲ್ಲಿಸಿ ಪದ್ಮಶ್ರೀ ಪ್ರಶಸ್ತಿ ಪಡೆದ ಡಾ.ತುಳಸಜ್ಜಿಯನ್ನು ಫಲಪುಷ್ಪ ನೀಡಿ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನದ ಬಗ್ಗೆ ಸಂತಸ ವ್ಯಕ್ತಪಡಿಸಿದ ವೃಕ್ಷಮಾತೆ ಪ್ರತಿಯೊಬ್ಬರೂ ಗಿಡನೆಟ್ಟು ರಕ್ಷಿಸುವ ಕೆಲಸ ಮಾಡಬೇಕೆಂದು ಕರೆನೀಡಿದರು.
ಸನ್ಮಾನಿತರ ಕುರಿತು ವಿಶ್ರಾಂತ ಶಿಕ್ಷಕ ಗಣಪತಿ ಟಿ.ನಾಯಕ, ವಿಶ್ರಾಂತ ಶಿಕ್ಷಕರಾದ ಪಾಂಡುರoಗ ನಾಯಕ ಮತ್ತು ಬೀರಣ್ಣ ನಾಯಕ ತಮ್ಮ ಮನದಾಳದ ಮೆಚ್ಚುಗೆಯ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಬಳಗದ ನಾಗೇಶ ನಾಯಕ, ಪಾಂಡುರ0ಗ ಶೇಟ್, ಅಚ್ಚುತ ನಾಯಕ, ಪ್ರಮೋದ್ ಗೌಡ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ರಮೇಶ್ ನಾಯಕ ಆಭಾರ ಮನ್ನಿಸಿದರೆ, ನಿವೃತ್ತ ಶಿಕ್ಷಕ ಗೋಪಾಲ ನಾಯಕ ಕಾರ್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top