Slide
Slide
Slide
previous arrow
next arrow

ವಿದ್ಯಾರ್ಥಿಗಳ ಬದುಕಿನಲ್ಲಿ ನೈತಿಕ ಮೌಲ್ಯ ತುಂಬಬೇಕಿದೆ: ವಿಠ್ಠಲ ಗಾಂವಕಾರ

300x250 AD

ಅಂಕೋಲಾ: ಇಂದಿನ ವಿದ್ಯಾರ್ಥಿಗಳು ಕೇವಲ ವಿದ್ಯಾವಂತರಾದರೆ ಸಾಲದು. ಅವರು ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ನೈತಿಕ ಮೌಲ್ಯಗಳನ್ನು ಅರಿಯುವ ಅವಶ್ಯಕತೆಯಿದೆ. ವಿದ್ಯಾರ್ಥಿಗಳ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನು ತುಂಬುವ ಮಹತ್ವದ ಕಾರ್ಯವನ್ನು ಶಿಕ್ಷಕ ಸಮುದಾಯ ಮಾಡುತ್ತಲಿದೆ ಎಂದು ಸಾಹಿತಿ ವಿಠ್ಠಲ ಗಾಂವಕಾರ ಹೇಳಿದರು.

ದೇಶ ನಿರ್ಮಾಣದಲ್ಲಿ ಯುವಜನರ ಪಾತ್ರ ಮಹತ್ವವಾದುದು ಅವರನ್ನು ಸರಿ ದಾರಿಯಲ್ಲಿ ನಡೆಸುವ ಮಹತ್ತರ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದರು. ಅವರು ಅಂಕೋಲಾ ಲಾಯನ್ಸ್ ಕ್ಲಬ್ ಕರಾವಳಿ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

300x250 AD

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಸಾತು ಗೌಡ, ಗೋವಿಂದರಾಯ ನಾಯಕ ಹಾಗೂ ರಫೀಕ ಶೇಖರನ್ನು ಲಾಯನ್ಸ್ನ ಪರವಾಗಿ ಮಾನಪತ್ರ ನೀಡಿ ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕ್ಲಬ್‌ನ ಅಧ್ಯಕ್ಷ ಮಂಜುನಾಥ ಹರಿಕಂತ್ರ ವಹಿಸಿದ್ದರು. ಎಸ್.ಆರ್.ಉಡುಪಿ ಸ್ವಾಗತಿಸಿದರೆ, ಅರುಂಧೇಕರ ಧ್ವಜವಂದನಾ ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ಶೆಟ್ಟಿ, ಶ್ರೀನಿವಾಸ ನಾಯಕ, ಗಣೇಶ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಗಣಪತಿ ತಾಂಡೇಲ ವಂದಿಸಿದರು. ಮಹಾಂತೇಶ ರೇವಡಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಲಾಯನ್ಸ್ ಸದಸ್ಯರಾದ ಚೈನ್‌ಸಿಂಗ ಚೌಹಾನ್, ಶಂಕರ ಹುಲಸ್ವಾರ, ಗಣಪತಿ ನಾಯಕ ಶೀಳ್ಯ, ಡಾ.ಕರುಣಾಕರ, ಓಂಪ್ರಕಾಶ ಪಟೇಲ, ದೇವಾನಂದ ಗಾಂವಕರ, ಸಂತೋಷ ಸಾಮಂತ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top