Slide
Slide
Slide
previous arrow
next arrow

ಅಪಘಾತಗೊಂಡ ಕಾರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯ!!

300x250 AD

ಅಂಕೋಲಾ: ರಸ್ತೆಯಲ್ಲಿ ಅಫಘಾತಗೊಂಡ ಕಾರೊಂದರಲ್ಲಿ ಲಕ್ಷಾಂತರ ರೂಪಾಯಿಯ ಅಕ್ರಮ ಗೋವಾ ಸರಾಯಿ ಪತ್ತೆಯಾದ ಘಟನೆ ಮಂಗಳವಾರ ತಡರಾತ್ರಿ ಸುಂಕಸಾಳದ ಕೋಟೆಪಾಲ ಕ್ರಾಸ್ ಬಳಿ ನಡೆದಿದೆ. ಕಾರಿನಲ್ಲಿ 1.33 ಲಕ್ಷ ರೂ. ಮೌಲ್ಯದ ಅಕ್ರಮ ಗೋವಾ ಸರಾಯಿ ಪತ್ತೆಯಾಗಿದ್ದು, ಕಾರು ಚಾಲಕ ಹಾಗೂ ಮಾಲಕ ನಾಪತ್ತೆಯಾಗಿದ್ದಾರೆ. ಗೋವಾ ಸರಾಯಿಯನ್ನು ಎಲ್ಲಿಂದಲೊ ತುಂಬಿಕೊoಡು, ಮಾರಾಟ ಮಾಡುವ ಉದ್ದೇಶದಿಂದ ಯಲ್ಲಾಪುರ ಕಡೆಗೆ ಸಾಗಿಸುತ್ತಿದ್ದಾಗ ಚಾಲಕನ ಅತಿ ವೇಗದ ಚಾಲನೆಯಿಂದಾಗಿ ರಸ್ತೆಯ ಬದಿಯ ಚರಂಡಿಗೆ ಕಾರು ಉರುಳಿ ಬಿದ್ದಿದೆ.

ಅಪಘಾತಗೊಂಡ ಕಾರ್ ಜಖಂಗೊ0ಡಿದ್ದರಿ0ದ ಕಾರು ಪುನಃ ರಸ್ತೆಗೆ ಬರಲಾಗಿರಲಿಲ್ಲ. ಎಲ್ಲಿ ತಮ್ಮ ಅಕ್ರಮ ಚಟುವಟಿಕೆ ಬಯಲಾಗುತ್ತದೆಯೋ ಎಂಬ ಭಯಕ್ಕೆ ಹೆದರಿ ಚಾಲಕ ಕಾರನ್ನು ಅಲ್ಲಿಯೆ ಬಿಟ್ಟು ಪರಾರಿಯಾಗಿದ್ದಾನೆ. ಅಂಕೋಲಾ ಪೊಲೀಸರಿಗೆ ಸುಂಕಸಾಳದ ಬಳಿ ಕಾರ ಅಪಘಾತಗೊಂಡಿದೆ ಎಂಬ ಮಾಹಿತಿ ಬಂದಿದ್ದರಿ0ದ ಪಿಎಸೈ ಜಯಶ್ರೀ ಪ್ರಭಾಕರ ತಮ್ಮ ಸಿಬ್ಬಂದಿಗಳ ಜೊತೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಗೋವಾ ಸರಾಯಿ ಇರುವುದು ಕಂಡುಬ0ದಿದೆ. ವಾಹನದ ಮಾಲಕನ ಪತ್ತೆಗೆ ಪೊಲೀಸರು ಮುಂದಾಗಿದ್ದು, ಪಿಎಸೈ ಸುನೀಲ ಹುಲ್ಲೊಳ್ಳಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top