Slide
Slide
Slide
previous arrow
next arrow

ಚಂದ್ರಯಾನ-3 ಯಶಸ್ಸಿನಿಂದ ಭಾರತ ವಿಶ್ವಕ್ಕೆ ಮಾದರಿಯಾಗಿದೆ: ಸುನೀಲ್ ಪೈ

300x250 AD

ಗೋಕರ್ಣ: ಜಾಗತೀಕರಣದ ಸಂಭ್ರಮದಲ್ಲಿ ತಂತ್ರಜ್ಞಾನದ ವಿಜಯ ಪತಾಕೆ ಹಿಡಿದು ನಿಂತವರು ನಾವು. ತಾಂತ್ರಿಕ ಶಿಕ್ಷಣದಲ್ಲಿಂದು ಜಗತ್ತು ಬೆರಗಾಗುವಂತೆ ಮುನ್ನಡೆದವರು ನಾವು, ಚಂದ್ರಯಾನ 3 ಯಶಸ್ಸಿನಿಂದ ಭಾರತ ವಿಜ್ಞಾನದಲ್ಲಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಮಾದನಗೇರಿಯ ಮಹಾಲಸಾ ಸಿದ್ದಿವಿನಾಯಕ ಟೆಂಪಲ್ ಟ್ರಸ್ಟ್ನ ಧರ್ಮಾಧಿಕಾರಿ ಸುನೀಲ್ ಪೈ ನುಡಿದರು.

ಅವರು ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ಸಂಯುಕ್ತಾಶ್ರಯದಲ್ಲಿ ಹೈಸ್ಕೂಲಿನಲ್ಲಿ ನಡೆದ 2023-24ನೇ ಸಾಲಿನ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಿಚಾರಗೋಷ್ಟಿ, ವಿಜ್ಞಾನ ನಾಟಕ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹಿರೇಗುತ್ತಿ ಗ್ರಾಮ ಪಂಚಾಯತ ಅಧ್ಯಕ್ಷ ಶಾಂತಾ ಎನ್.ನಾಯಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತ ಮಂಡಳಿಯ ಅಧ್ಯಕ್ಷ ಹೊನ್ನಪ್ಪ ಎನ್.ನಾಯಕ, ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯನ್ನು ಉತ್ತೇಜಿಸಿ ಜ್ಞಾನದಾಹವನ್ನು ಇಂಗಿಸುವ ಹೊಸ ವಿಷಯಗಳನ್ನು, ಆವಿಷ್ಕಾರಗಳನ್ನು ಅನ್ವೇಷಿಸಿ ಅದನ್ನು ವಿವರಿಸುವ ನಿಟ್ಟಿನಲ್ಲಿ ಮಾದರಿಯ ರೂಪ ನೀಡುವ ಕಾರ್ಯಕ್ರಮ ವಿಜ್ಞಾನ ನಾಟಕ, ವಿಜ್ಞಾನ ವಿಚಾರಗೋಷ್ಟಿ, ವಿಜ್ಞಾನ ವಸ್ತು ಪ್ರದರ್ಶನವಾಗಿದೆ ಎಂದರು.

ವಿಜ್ಞಾನ ದೀಪ ಬೆಳಗಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ್ ಮಾತನಾಡಿ, ಜಗತ್ತಿನ ಪ್ರತಿ ಚರಾಚರಗಳ ಮೂಲ ವಿಜ್ಞಾನವೇ ಆಗಿದೆ. ಕಣ್ಣಿಗೆ ಕಾಣದ, ಅರಿವಿಗೆ ಬಾರದ, ಕೆಲವೊಮ್ಮೆ ಗೌಪ್ಯವಾಗಿರುವ ವಿಜ್ಞಾನದ ಒಳಹರವುಗಳನ್ನು ಅನಾವರಣ ಮಾಡಿದಾಗ ಮಾತ್ರ ಸತ್ಯಗ್ರಹಿತವಾಗುತ್ತದೆ. ವಿಜ್ಞಾನ ಎಂಬುವುದು ಜ್ಞಾನವಾಗಿ ವಿಸ್ತರಿಸುತ್ತದೆ ಎಂದರು.

300x250 AD

ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಜ್ಯ ಮತ್ತು ರಾಷ್ಟçಮಟ್ಟವನ್ನು ಪ್ರತಿನಿಧಿಸಿದ ಹೈಸ್ಕೂಲಿನ ಸಾಧಕ ವಿದ್ಯಾರ್ಥಿಗಳಾದ ಎಮ್.ಎಚ್.ನಿಶಾ, ಸಾನಿಕಾ ಜೆ.ನಾಯ್ಕ, ಸುವರ್ಣ ಭಂಡಾರಕರ್‌ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಚೈತನ್ಯ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸುವರ್ಣ ಭಂಡಾರಕರ್ ಸರ್ವರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ಶಿವಪ್ರಸಾದ ನಾಯಕ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿದ್ಯಾರ್ಥಿ ಪ್ರತಿನಿಧಿ ಪ್ರೀತಿ ನಾಯಕ ಸರ್ವರನ್ನೂ ವಂದಿಸಿದರು. ನಂತರ ವಿಜ್ಞಾನ ನಾಟಕ, ವಿಜ್ಞಾನ ವಿಚಾರಗೋಷ್ಟಿ, ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆದವು. ಹಿರೇಗುತ್ತಿ ಹೈಸ್ಕೂಲ್ ಶಿಕ್ಷಕ ವೃಂದದವರು, ನಿರ್ಣಾಯಕರು ಹಾಗೂ ಕುಮಟಾ ತಾಲೂಕಿನ ಹೈಸ್ಕೂಲ್ ಶಿಕ್ಷಕ ವೃಂದದವರು, ಊರ ನಾಗರಿಕರು, ಪಾಲಕ ವೃಂದದವರು, ವಿದ್ಯಾರ್ಥಿ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಾಲಾ ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ ಪ್ರಾಸ್ತಾವಿಕ ಮಾತನಾಡಿದರು. ಡಯಟ್ ಉಪನ್ಯಾಸಕ ಮುಕ್ತಾ ನಾಯಕ, ಆಡಳಿತ ಮಂಡಳಿ ಸದಸ್ಯ ಎನ್.ಟಿ.ನಾಯಕ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ತದಡಿ ಶಿಕ್ಷಕ ಉದ್ದಂಡ ಬಿ.ಗಾಂವಕರ, ಹಿರೇಗುತ್ತಿ ಕಾಲೇಜು ಪ್ರಭಾರ ಪ್ರಿನ್ಸಿಪಾಲ್ ನಾಗರಾಜ ಗಾಂವಕರ, ಶಿಕ್ಷಣ ಸಂಯೋಜಕ ಜಯಶ್ರೀ ಪಿ., ಡಯಟ್ ಉಪನ್ಯಾಸಕ ವೀಣಾ ನಾಯ್ಕ, ಸಿಆರ್‌ಪಿ ರೋಹಿದಾಸ ನಾಯ್ಕ ಉಪಸ್ಥಿತರಿದ್ದರು

Share This
300x250 AD
300x250 AD
300x250 AD
Back to top