Slide
Slide
Slide
previous arrow
next arrow

ಟಿಎಂಎಸ್’ಗೆ 1.11ಕೋಟಿ ನಿಕ್ಕಿ ಲಾಭ: ಸೆ.9ಕ್ಕೆ ವಾರ್ಷಿಕ ಸರ್ವ ಸಾಧಾರಣ ಸಭೆ

300x250 AD

ಶಿರಸಿ: ಸಂಘವು 39 ವರ್ಷಗಳನ್ನು ಪೂರ್ಣಗೊಳಿಸಿ 40ನೇ ವರ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾರ್ಚ 31ಕ್ಕೆ ಮುಗಿದ ಆರ್ಥಿಕ ವರ್ಷದಲ್ಲಿ ಈ ವರೆಗಿನ ಗರಿಷ್ಠ ದಾಖಲೆಯ 1.05 ಲಕ್ಷಕ್ಕೂ ಅಧಿಕ ಮಹಸೂಲು ವಿಕ್ರಿ ಆಗಿದ್ದು ರೂ. 3.11 ಕೋಟಿಗೂ ಮೀರಿದ ಲಾಭ ಗಳಿಸಿದ್ದು ಲಾಭದಲ್ಲಿ ಅನುವುಗಳನ್ನು ಕಲ್ಪಿಸಿ ರೂ.1.11 ಕೋಟಿ ನಿಕ್ಕಿ ಲಾಭವಾಗಿದೆ ಎಂದು ಟಿ.ಎಂ.ಎಸ್.ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು 2022-23ನೇ ಸಾಲಿನಲ್ಲಿ ಸಂಘದಲ್ಲಿ 24224 ಕ್ವಿಂಟಲ್ ಹಸಿ ಅಡಿಕೆ ವಿಕ್ರಿ ಸಹಿತ ಅಂತೂ 105743-32.000 ಕ್ವಿಂಟಲ್ ಮಹಸೂಲು ವಿಕ್ರಿಮಾಡಿದ್ದು ಸಂಘದ ವಹಿವಾಟು ರೂ.471.03 ಕೋಟಿ ಆಗಿದ್ದು ಹಾಗೂ ದುಡಿಯುವ ಬಂಡವಾಳ ರೂ.226.66 ಕೋಟಿಗೂ ಅಧಿಕವಾಗಿದೆ. ಸ್ವಂತ ಬಂಡವಾಳ ರೂ.48.22 ಕೋಟಿಗೂ ಹೆಚ್ಚಿಗೆಯಾಗಿದ್ದು, ಠೇವಣಿ ರೂ.92.52 ಕೋಟಿಗೂ ಅಧಿಕವಾಗಿದೆ. ನೇರ ಖರೀದಿ ವಿಭಾಗದಲ್ಲಿ 25451.48 ಕ್ವಿಂಟಲ್ ಅಡಿಕೆ ಹಾಗೂ ಕಾಳುಮೆಣಸು ಖರೀದಿಸಿದ್ದು ರೂ.88ಕೋಟಿ 12ಲಕ್ಷಗಳ ವ್ಯವಹಾರ ಮಾಡಲಾಗಿದೆ. ಕೃಷಿ ವಿಭಾಗದಲ್ಲಿ ಗೊಬ್ಬರ, ಕ್ರಿಮಿನಾಶಕ ಹಾಗೂ ಕೃಷಿ ಉಪಕರಣ ಸೇರಿ ರೂ. 13 ಕೋಟಿ 29 ಲಕ್ಷಗಳ ವಿಕ್ರಿ ವ್ಯವಹಾರ ಮಾಡಲಾಗಿದೆ. ಬನವಾಸಿ ಶಾಖೆಯಲ್ಲೂ ಸಹ ರೂ.7 ಕೋಟಿ 24 ಲಕ್ಷಗಳ ವಿಕ್ರಿ ವ್ಯವಹಾರ ಮಾಡಲಾಗಿದೆ. ದಾಸನಕೊಪ್ಪ ಶಾಖೆಯಲ್ಲಿ 4 ಕೋಟಿ 72 ಲಕ್ಷದ ವಿಕ್ರಿ ವ್ಯವಹಾರ ಮಾಡಲಾಗಿದೆ. ‘’ಸುಪರ್‌ಮಾರ್ಟ’’ ವಿಭಾಗದಲ್ಲಿ ರೂ.9ಕೋಟಿ 38 ಲಕ್ಷಗಳಷ್ಟು ವ್ಯವಹಾರವಾಗಿದೆ. 2022-2023ರಲ್ಲಿ ಗಳಿಸಿದ ಲಾಭದಲ್ಲಿ ಸದಸ್ಯರಿಗೆ ಹಾಗೂ ಸದಸ್ಯ ಸಂಘಗಳಿಗೆ ವಿಕ್ರಿ ಪ್ರೋತ್ಸಾಹಧನವಾಗಿ ರೂ.1,17,09,372.00 ನೀಡಿದ್ದು ಉಪನಿಯಮದಲ್ಲಿರುವ ಅವಕಾಶದಂತೆ ನಿಧಿಗಳಿಗೆ ಅನುವು ಮಾಡಿದ ಬಳಿಕ ನಿಕ್ಕೀ ಲಾಭ ರೂ.1,11,23,878ಗಳಷ್ಟು ಆಗಿದೆ ಎಂದು ತಿಳಿಸಿದ್ದಾರೆ.

ಸಂಘದ 2022-23ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಚಾರ್ಟರ್ಡ ಅಕೌಂಟಂಟ್ ಕುಮಾರ ಶಿರಸಿ ಇವರು ಕೈಗೊಂಡಿದ್ದು ಅಡಿಟ್ ವರ್ಗೀಕರಣ “ಅ” ವರ್ಗದಲ್ಲಿ ಮುಂದುವರಿದಿರುತ್ತದೆ. 2022-23ನೇ ಸಾಲಿನ ಲಾಭದಲ್ಲಿ ಸದಸ್ಯರಿಗೆ ಶೇ.15% ಡಿವಿಡೆಂಡ್ ಹಂಚಿಕೆ ಮಾಡಲು ಆಡಳಿತ ಮಂಡಳಿಯು ನಿರ್ಣಯಿಸಿದೆ ಎಂದು ಮಾಹಿತಿ ನೀಡಿದ್ದಾರೆ.

300x250 AD

ಕಳೆದ ಮೂವತ್ತೊಂಬತ್ತು ವರ್ಷಗಳಿಂದ ನಿರಂತರ ರೈತರ ಏಳ್ಗೆಗೆ ಕೆಲಸ ಮಾಡುತ್ತಿರುವ ಶಿರಸಿ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ.,ಶಿರಸಿ ಪ್ರಸಕ್ತ ಸಾಲಿನಲ್ಲಿ 1.11 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಅಗತ್ಯವಾದ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ, ಸಂಘದಲ್ಲಿ ಉತ್ತಮ ಗೋದಾಮಿನ ವ್ಯವಸ್ಥೆ ಇದ್ದು, 40-45 ಸಾವಿರ ಕ್ವಿಂಟಾಲ್ ಅಡಿಕೆ ಶಿಲ್ಕು ಇಡಲು ಅವಕಾಶ ಇದ್ದು, ಸದಸ್ಯರ ಅಡಿಕೆ, ಕಾಳುಮೆಣಸು ಶಿಲ್ಕಿಗೆ ಯಾವುದೇ ಶುಲ್ಕ ನೀಡಬೇಕಾಗಿಲ್ಲ. ಸಂಸ್ಥೆ 39 ವರ್ಷ ಪೂರ್ಣಗೊಳಿಸಿ 40ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಆರೋಗ್ಯ ಸುರಕ್ಷಾ ಯೋಜನೆ ರೈತರ ಸಂಕಷ್ಟಕ್ಕೆ ನೆರವಾಗಿದೆ. 429 ಸದಸ್ಯರ ಅನಾರೋಗ್ಯದ ಸಂದರ್ಭದಲ್ಲಿ ಸಂಸ್ಥೆ ನೆರವಾಗಿದ್ದು ಅವರ ಆಸ್ಪತ್ರೆ ಖರ್ಚು-ವೆಚ್ಚಗಳ ಬಾಬ್ತು ರೂ. 85,86,800.00 ಧನ ಸಹಾಯವನ್ನು ಸದಸ್ಯರ “ಆರೋಗ್ಯ ಸುರಕ್ಷಾ ಯೋಜನೆ”ಯಡಿಯಲ್ಲಿ ನೀಡಲಾಗಿದೆ. ಈ ಯೋಜನೆಗೆ ಸಂಘದ ಸ್ವಂತ ಬಂಡವಾಳದಿಂದ ಧನ ಸಹಾಯ ನೀಡಲಾಗಿದ್ದು ಯಾವುದೇ ಸರಕಾರದ ಸೌಲಭ್ಯ, ಸಹಕಾರ ಇಲ್ಲದೇ ಧನ ಸಹಾಯ ನೀಡಲಾಗಿದೆ.
ಕಾಳು ಮೆಣಸು ಬೆಳೆಸಿ ಲಕ್ಷಾಧೀಶರಾಗಿರಿ ಎಂಬ ಆಂದೋಲನ ಕೂಡ ಫಲ ನೀಡಿದ್ದು, ಸಂಘದಲ್ಲಿ 2022-23ರಲ್ಲಿ 2,156 ಕ್ವಿಂಟಾಲ್ ಕಾಳು ಮೆಣಸು ವಿಕ್ರಿಯಾಗಿದ್ದು, ಈ ಬಾರಿ ಕಾಳು ಮೆಣಸಿಗೂ ಉತ್ತಮ ಧಾರಣೆ ಬರುತ್ತಿದೆ. ಅಡಿಕೆ ತೋಟದಲ್ಲಿ ರೈತರು ಉಪ ಬೆಳೆಗೆ ಆದ್ಯತೆ ನೀಡಬೇಕಿದ್ದು, ಕಾಫಿ ಬೆಳೆ ಬೆಳೆಯಲೂ ರೈತರು ಯೋಚಿಸಬಹುದಾಗಿದೆ. ಅಡಿಕೆ ತೋಟಕ್ಕೆ ಎಲೆ ಚುಕ್ಕೆ ರೋಗ ಬರುತ್ತಿದ್ದು ಇದರಿಂದ ಅಡಿಕೆ ಬೆಳೆಗಾರರಿಗೆ ಆರ್ಥಿಕವಾಗಿ ಬಹಳ ತೊಂದರೆಗೆ ಸಿಲಕಬಹುದಾಗಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ನಿಧಿ ಸ್ಥಾಪಿಸಬಹುದಾದ ಆಶಯವನ್ನೂ ಹೊಂದಿದ್ದೇವೆ. ಅಡಿಕೆ, ಕಾಳುಮೆಣಸು, ಹಸಿ ಅಡಿಕೆ ಸೇರಿ ಈ ವರ್ಷ ಸಂಘದಲ್ಲಿ ದಾಖಲೆಯ 1,05,743 ಕ್ವಿಂಟಲ್ ಮಹಸೂಲು ವಿಕ್ರಿಯಾಗಿದ್ದು ಸಂಸ್ಥೆಯ ಇತಿಹಾಸದಲ್ಲಿ ದಾಖಲಾಗಿದೆ. ಸಂಘದ ವಹಿವಾಟು ರೂ. 471,02,50,199.00 ಆಗಿದೆ. ಸಂಘವು ಲಾಭ ಗಳಿಕೆಯಲ್ಲೂ ಉತ್ತಮವಾಗಿದ್ದು, ಸ್ವಂತ ಬಂಡವಾಳ 48.22 ಕೋ.ರೂ. ಆಗಿದೆ, ಸಂಘದಲ್ಲಿ ಒಟ್ಟೂ 17,107 ಸದಸ್ಯರಿದ್ದು, ಸಂಘದಲ್ಲಿ ಸದಸ್ಯರ ಅನುಕೂಲಕ್ಕಾಗಿ ಸೂಪರ್ ಮಾರುಕಟ್ಟೆ ಸೌಲಭ್ಯ ಒದಗಿಸಲಾಗಿದೆ. ಕೃಷಿ ವಿಭಾಗ ಕೂಡ ಉತ್ತಮ ಸೇವೆ ನೀಡುತ್ತಿದ್ದು, ಪಶು ಆಹಾರ, ಭೂ ಸುರಕ್ಷಾ ಗೊಬ್ಬರ ತಯಾರಿಸಿ ವಿಕ್ರಿ ಮಾಡಲಾಗುತ್ತಿದೆ.
ಬನವಾಸಿ ಶಾಖೆಯಲ್ಲಿ 62.06 ಲ.ರೂ, ದಾಸನಕೊಪ್ಪ ಶಾಖೆಯಲ್ಲಿ 51.26 ಲ.ರೂ. ಲಾಭವಾಗಿದೆ. ಸುಪರ್ ಮಾರುಕಟ್ಟೆಯಲ್ಲಿ 4.53 ಲ.ರೂ. ನಿಕ್ಕೀ ಲಾಭವಾಗಿದೆ. ಸುಪರ್ ಮಾರುಕಟ್ಟೆಯ ವ್ಯವಹಾರವನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದು, ಬನವಾಸಿ ಶಾಖೆಯಲ್ಲಿ ಸುಪರ್ ಮಾರ್ಟ ವಿಭಾಗ ಪ್ರಾರಂಭಿಸಲಾಗಿದೆ. ಸಭಾಭವನ, ಗುದಾಮ, ಸುಪರ್ ಮಾರ್ಟ್ ಕಟ್ಟಡಗಳು ಸೇರಿ 18.78 ಕೋ.ರೂ. ಕಟ್ಟಡದ್ದೇ ಮೌಲ್ಯವಾಗಿದೆ. ಸದಸ್ಯರಿಗೆ ವಿಕ್ರಿ ಮೇಲೆ ಸಾಗಾಟ ಪ್ರೋತ್ಸಾಹಧನ ನೀಡಲಾಗುತ್ತಿದ್ದು, 2022-23ನೇ ಸಾಲಿನಲ್ಲಿ ರೂ. 61.05 ಲಕ್ಷ ರಿಬೇಟ್ ಸದಸ್ಯರ ಖಾತೆಗೆ ಜಮಾ ಆಗಿದೆ. ಸಂಘದಲ್ಲಿ ವಿಕ್ರಿ ಮಾಡುವ ಸದಸ್ಯ ಸಂಘ ಸಂಸ್ಥೆಗಳಿಗೆ ವಿಕ್ರೀ ರಿಬೇಟ್ ನಿಡುತ್ತಿದ್ದು 2022-23ನೆ ಸಾಲಿನಲ್ಲಿ ರೂ.56.04 ಲಕ್ಷ ಪ್ರೋತ್ಸಾಹ ಧನವಾಗಿ ಪಾವತಿಸಲಾಗಿದೆ. 2022-23ನೇ ಸಾಲಿನಲ್ಲಿ ಸಂಘವು ನೀಡಿದ ಒಟ್ಟೂ ಮಹಸೂಲು ವಿಕ್ರಿ ಪ್ರೋತ್ಸಾಹಧನ ರಕಂ ರೂ.1,17,09,372.00ಗಳಷ್ಟಾಗಿದೆ. ಈ ಬಾರಿ ಸಂಘದಲ್ಲಿ ದಾಖಲೆಯ 1.05 ಲಕ್ಷಕ್ಕೂ ಅಧಿಕ ಮಹಸೂಲು ವಿಕ್ರಿ ಆಗಿದ್ದರಿಂದ ಸದಸ್ಯರಿಗೆ ಹೆಚ್ಚಿನ ಪ್ರೋತ್ಸಾಹದ ರಿಬೇಟ್ ನೀಡಲು ನಿರ್ದರಿಸಿದ್ದು ಸಂಘದ ಶೇರು ಸದಸ್ಯರಿಗೆ ವಾರ್ಷಿಕ ಸರ್ವಸಾಧಾರಣ ಸಭೆಯ ಕಾಲಕ್ಕೆ ಒಂದು ನೆನಪಿನ ಕಾಣಿಕೆಯಾಗಿ ಬ್ಯಾಗ್ ನೀಡಲು ನಿರ್ಣಯಿಸಿದ್ದು, ನೇರವಾಗಿ ಅಥವಾ ಪ್ರಾಥಮಿಕ ಸಂಘದ ಮೂಲಕ 6 ಕ್ವಿಂಟಲ್ ಹಾಗೂ ಹೆಚ್ಚಿನ ಪ್ರಮಾಣದ ಮಹಸೂಲು ವಿಕ್ರಿಮಾಡಿದ ಎಲ್ಲ ನಾಮಿನಲ್ ಮೆಂಬರರಿಗೆ ಹಾಗೂ ಶೇರು ಸದಸ್ಯರಿಗೆ ಒಂದು ಗೋಡೆ ಗಡಿಯಾರ ನೀಡಲು ನಿರ್ಣಯಿಸಲಾಗಿದೆ.
ಅಡಿಕೆ ಬೆಳೆಗಾರರು ಹೈನುಗಾರಿಕೆಯಿಂದ ದೂರವಾಗುತ್ತಿದ್ದು ಕೃಷಿ – ಹೈನುಗಾರಿಕೆ ಒಂದಕ್ಕೊಂದು ಪೂರಕವಾಗಿದೆ. ಆದರೆ, ಅನೇಕರು ಡೇರಿಯಿಂದ ಹಾಲು ತರುತ್ತಿದ್ದು ಇದರ ಪರಿಣಾಮ ರೈತರ ಬೆಳೆಗಳಿಗೆ ಗುಣಮಟ್ಟದ ಗೊಬ್ಬರ ಇಲ್ಲದ ಸ್ಥಿತಿ ನಿರ್ಮಾಣ ಆಗಿದೆ. ಇದು ಸಮಸ್ಯೆ ಆಗಬಾರದು ಎಂದು “ಟಿ.ಎಂ.ಎಸ್ ಭೂ ಸುರಕ್ಷಾ ಗೊಬ್ಬರ” ಕೂಡ ತಯಾರಿಸುತ್ತಿದ್ದು ಒಳ್ಳೆಯ ಸ್ಪಂದನೆ ರೈತರಿಂದ ಇದೆ. ಸಂಘದ ಸದಸ್ಯರು, ಸದಸ್ಯ ಸಂಘಗಳು, ವರ್ತಕರು, ಗ್ರಾಹಕರು, ಆಡಳಿತ ಮಂಡಳಿ ಸದಸ್ಯರು ಹೀಗೆ ಎಲ್ಲರೂ ಸಂಘದ ಏಳ್ಗಿಗೆ ಉತ್ತಮ ಸಹಕಾರ ನೀಡಿದ್ದು, ಸಂಘದ ಸಿಬಂದಿಗಳೂ ಸಂಘದ ಏಳ್ಗೆಗೆ ಶ್ರಮಿಸುತ್ತಿದ್ದು ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆರ್ಥಿಕವಾಗಿ ಸದೃಡವಾಗಿದೆ ಎಂದು ತಿಳಿಸಿದ್ದಾರೆ.

ಸೆ:09 ಶನಿವಾರ ಮಧ್ಯಾಹ್ನ 3.30ಕ್ಕೆ ಸಂಘದ ಸೇಲ್‌ಯಾರ್ಡನಲ್ಲಿ 2022-23ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ಜರುಗಲಿದ್ದು, ಸಭೆಯ ಬಳಿಕ ನೂತನ ಶಾಸಕರಾದ ಭೀಮಣ್ಣ ನಾಯ್ಕ ಹಾಗೂ ಯಲ್ಲಾಪುರ ಶಾಸಕರಾದ ಶಿವರಾಮ ಹೆಬ್ಬಾರ್ ಅವರನ್ನು ಅಭಿನಂದಿಸಲಾಗುತ್ತಿದ್ದು, ಅದೇ ದಿನ ಸಂಜೆ 6:15ಕ್ಕೆ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಕಾರ್ತವೀರ್ಯಾರ್ಜುನ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಿರುದ್ಧ ಹೆಗಡೆ, ಪ್ರಸನ್ನ ಭಟ್ಟ, ಮುಮ್ಮೇಳದಲ್ಲಿ ಕೊಂಡದಕುಳಿ, ತೋಟಿಮನೆ, ನೀಲ್ಕೋಡ್, ಚಪ್ಪರಮನೆ, ಕುಂಕಿಪಾಲ, ಹುಳ್ಸೆಮಕ್ಕಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top