ಯಲ್ಲಾಪುರ: ಮಾನವೀಯ ಮೌಲ್ಯಗಳನ್ನು ಸಮಾಜ ಬೆಳೆಸುವ ಮೂಲಕ ಸಾರ್ಥಕತೆಯ ಸೇವೆ ಮಾಡುವವನೇ ನಿಜವಾದ ಮನುಷ್ಯತ್ವ ಉಳ್ಳವನಾಗಿರುತ್ತಾನೆ. ಸವಾಲುಗಳನ್ನು ಗೆಲ್ಲುವವನೇ ಜನಮನ್ನಣೆ ಗಳಿಸುವ ಜನಪ್ರತಿನಿಧಿ ಎಂದೆನಿಸಲು ಸಾಧ್ಯ ಎಂದು ರಾಜ್ಯ ಈಡಿಗ ಸಮುದಾಯದ ಮುಖಂಡ ದೇವರಾಯ ನಾಯ್ಕ ಹೇಳಿದರು.
ತಾಲೂಕಿನ ವಜ್ರಳ್ಳಿ ಪಂಚಾಯಿತಿ ವ್ಯಾಪ್ತಿಯ ಹೊನ್ನಗದ್ದೆಯ ಶ್ರೀವೀರಭದ್ರ ದೇವಸ್ಥಾನ ಆವರಣದಲ್ಲಿ ವಜ್ರಳ್ಳಿ ಪಂಚಾಯತದ ಅಧ್ಯಕ್ಷರಾಗಿ ಆಯ್ಕೆಯಾದ ಭಗೀರಥ ನಾಯಕ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿ, ಜನಸೇವೆ ಮಾಡಲು ಯೋಗ ಕೂಡಿ ಬರಬೇಕು. ಅವಕಾಶಗಳನ್ನು ಬಳಸಿಕೊಳ್ಳುವ, ಬೆಳೆಯುವ ಸಂಕಲ್ಪದಿಂದ ಸಮಾಜದ ಜೊತೆ ನಾವೂ ಬೆಳೆಯಬಹುದು. ನಾಯಕನಾಗಿ ಬೆಳೆಯಬೇಕಾದರೆ ಜನಪರವಾದ ಕೆಲಸ ಮಾಡಬೇಕು. ಪ್ರತಿ ಕಾಲಘಟ್ಟದಲ್ಲಿಯೂ ಬದಲಾವಣೆಗಳಿರುತ್ತದೆ ಎಂದರು.
ಈಡಿಗ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಡಾ.ನಾಗೇಶ ನಾಯಕ ಕತಗಾಲ, ಭಗೀರಥ ವೀಣಾ ದಂಪತಿಗಳನ್ನು ಸನ್ಮಾನಿಸಿ ನಮ್ಮ ಸಮಾಜದ ಪ್ರಣವಾನಂದ ಸ್ವಾಮೀಜಿಗಳ ಆಶಯದಂತೆ ಜಾತಿ ಬಾಂಧವರನ್ನು ಅಭಿನಂದಿಸುತ್ತಿದ್ದೇವೆ ಎಂದರು. ಡಿ.ಜಿ.ಭಟ್ ದುಂಡಿ ಭಗೀರಥ ಅವರ ಕುರಿತು ಪರಿಚಯಿಸಿ, ಶ್ರೀ ವೀರಭದ್ರನ ಮಹಿಮೆ ಕುರಿತು ವಿವರಿಸಿದರು. ಆರ್.ಜಿ.ಭಟ್ ದುಂಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ವಿಜಯಕುಮಾರ ನಾಯಕ, ಸಹ ಕಾರ್ಯದರ್ಶಿ ಕುಮಾರ ನಾಯಕ, ಸಂಚಾಲಕ ಭಾಸ್ಕರ ನಾಯಕ, ಬೆನೆತ್ ಸಿದ್ದಿ ಹಾಜರಿದ್ದರು. ಹೊನ್ನಗದ್ದೆ ಊರ ನಾಗರಿಕರಾದ ನಾರಾಯಣ ಭಟ್ ದುಂಢಿ, ರಮೇಶ ಅಂಬಿಗ, ವಿನು ನಾಯಕ, ಆದರ್ಶ ಗಾಂವ್ಕರ, ಗಿರೀಶ್ ನಾಯಕ ಹೊಸತೋಟ ಮುಂತಾದವರು ಇದ್ದರು.