• Slide
    Slide
    Slide
    previous arrow
    next arrow
  • ಪ್ರತಿಭಾ ಕಾರಂಜಿ: ಲಯನ್ಸ್ ಪ್ರಾಥಮಿಕ ವಿದ್ಯಾರ್ಥಿಗಳ ಸಾಧನೆ

    300x250 AD


    ಶಿರಸಿ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಸರಕಾರಿ ಪ್ರಾಥಮಿಕ ಶಾಲೆ ನಂ 3 ಶಿರಸಿ ಇಲ್ಲಿ ನಡೆದ 2023-24ನೇ ಸಾಲಿನ ಕ್ಲಸ್ಟರ್ ಮಟ್ಟದ  ಪ್ರತಿಭಾ ಕಾರಂಜಿಯಲ್ಲಿ ಶಿರಸಿ ಲಯನ್ಸ್   ಕಿರಿಯ ಮತ್ತು ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆಗೈದಿದ್ದಾರೆ.

    27 ಸ್ಪರ್ಧೆಗಳಲ್ಲಿ ಭಾಗವಹಿಸಿದ ಲಯನ್ಸ್ ವಿದ್ಯಾರ್ಥಿಗಳು 21 ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದು,10 ಪ್ರಥಮ ಬಹುಮಾನ 6 ದ್ವಿತೀಯ ಬಹುಮಾನ 5 ತೃತೀಯ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ.

    ಕಿರಿಯರ ವಿಭಾಗದಲ್ಲಿ ಚಿತ್ರಕಲೆಯಲ್ಲಿ ನಿಶ್ಚಿತ್ ಭಟ್ ,ಸಂಸ್ಕೃತ ಧಾರ್ಮಿಕ ಪಠಣದಲ್ಲಿ ವಿಧಾತ ಡಿ. ಬಿ., ಭಕ್ತಿ ಗೀತೆಯಲ್ಲಿ ಸಂವಿಧಾ ಜಿ ಹೆಗಡೆ, ಕಥೆ ಹೇಳುವುದರಲ್ಲಿ ಸಾನ್ವಿ ಹೆಗಡೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕ್ಲೇ ಮಾಡ್ಲಿಂಗ್ ಪ್ರಣವ್ ಗಿರೀಶ್ ಮಡಿವಾಳ ದ್ವಿತೀಯ ಸ್ಥಾನ, ಕನ್ನಡ ಕಂಠಪಾಠದಲ್ಲಿ ಚೈತನ್ಯ ಜಿ ಹೆಗಡೆ ಲಘು ಸಂಗೀತದಲ್ಲಿ ಮಾನ್ವಿ ನಾಯ್ಕ,ಅಭಿನಯ ಗೀತೆಯಲ್ಲಿ ನೇಹಾ ಎನ್ ಹೆಗಡೆ ತೃತಿಯ ಸ್ಥಾನ ಗಳಿಸಿದ್ದಾರೆ.

    300x250 AD

    ಇನ್ನು ಹಿರಿಯರ ವಿಭಾಗದಲ್ಲಿ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಲಾವಣ್ಯ ಹೆಗಡೆ, ಕವನ ವಾಚನದಲ್ಲಿ ಅಂಶಿಕಾ ಹೆಗಡೆ, ಕಥೆ ಹೇಳುವುದರಲ್ಲಿ ಕಲ್ಯಾಣ ಭಟ್ ,ಮಿಮಿಕ್ರಿಯಲ್ಲಿ ಅನಿತಾ  ಭಟ್, ಅರೇಬಿಕ್ ಧಾರ್ಮಿಕ ಪಠಣದಲ್ಲಿ ಪೂರ್ಖಾನ್ ಮೂಡಿ, ಆಶುಭಾಷಣದಲ್ಲಿ ಪ್ರಥಮ ಹೆಗಡೆ ಪ್ರಥಮ ಸ್ಥಾನಪಡೆದಿದ್ದಾರೆ. ಅಭಿನಯ ಗೀತೆಯಲ್ಲಿ ಅಂಶಿಕಾ ಹೆಗಡೆ ,ಕನ್ನಡ ಕಂಠಪಾಠದಲ್ಲಿ  ಮತ್ತು ಭಕ್ತಿ ಗೀತೆಯಲ್ಲಿ ಚಿನ್ಮಯ್ ಕೆರೆಗದ್ದೆ , ಲಘು ಸಂಗೀತದಲ್ಲಿ ಕಲ್ಯಾಣ್ ಭಟ್,  ಚಿತ್ರಕಲೆಯಲ್ಲಿ ಸಿಂಚನ ಮುರುಡೇಶ್ವರ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಹಾಗೂ ಕ್ಲೇ  ಮಾಡ್ಲಿಂಗ್ ಅಮೃತಾ ಜೆ ಮರ‍್ಡೇಶ್ವರ ,ಹಿಂದಿ ಕಂಠಪಾಠ ಅನುಷ್ಕಾ ಎ. ನಾಯ್ಕ್ ತೃತಿಯ ಸ್ಥಾನ ಗಳಿಸಿದ್ದಾರೆ.

    ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿಗಳು, ಸಾಧಕ ವಿದ್ಯಾರ್ಥಿಗಳನ್ನು ಮತ್ತು ಅವರ ಪಾಲಕರನ್ನು, ಮಾರ್ಗದರ್ಶಿಸಿದ  ಶಿಕ್ಷಕರನ್ನು ತುಂಬು ಹೃದಯದಿಂದ ಅಭಿನಂದಿಸಿದೆ. ಸಾಧನೆಗೈದ ವಿದ್ಯಾರ್ಥಿಗಳಿಗೆ, ಈ ಸಾಧನೆಗೆ ಸಹಕರಿಸಿದ ಪಾಲಕರಿಗೆ, ತರಬೇತಿ ನೀಡಿದ ಸಹ ಶಿಕ್ಷಕರಿಗೆ, ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top