Slide
Slide
Slide
previous arrow
next arrow

ಏಪ್ರಿಲ್‌, ಮೇ, ಜೂನ್ ತಿಂಗಳ ಹಾಲಿನ ಪ್ರೋತ್ಸಾಹಧನ ಜಮಾ: ಸುರೇಶ್ಚಂದ್ರ ಕೆಶಿನ್ಮನೆ

300x250 AD

ಶಿರಸಿ: ಏಪ್ರಿಲ್‌, ಮೇ ಮತ್ತು ಜೂನ್-2023 ನೇ ಮಾಹೆಗಳ ಮೂರು ತಿಂಗಳಿನ ರೂ.5 ಪ್ರೋತ್ಸಾಹಧನವು ಸೆ.2, ಶನಿವಾರದಂದು ಜಮಾ ಆಗಿದೆ ಎಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನಿರ್ದೇಶಕರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದರು.

ಈ ಕುರಿತು ಹೇಳಿಕೆ ನೀಡಿದ ಅವರು 2022-2023 ನೇ ಸಾಲಿನ ಮಾರ್ಚ್‌-2023 ನೇ ಮಾಹೆ ಹಾಗೂ 2023-2024 ನೇ ಸಾಲಿನ ಏಪ್ರಿಲ್‌,ಮೇ ಮತ್ತು ಜೂನ್-2023 ನೇ ಮಾಹೆಗಳ ವರೆಗಿನ ಬಾಕಿ ಇರುವ ರೂ.5 ಪ್ರೋತ್ಸಾಹಧನವನ್ನು ಜಿಲ್ಲೆಯ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಮಾಡುವ ಬಗ್ಗೆ ಕೆಲ ದಿನಗಳ ಹಿಂದೆಯಷ್ಟೇ ಪತ್ರಿಕಾ ಹಾಗೂ ಸುದ್ದಿ ಮಾಧ್ಯಮಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು, ಈಗ ಮಾರ್ಚ್‌-2023 ನೇ ಮಾಹೆಯನ್ನು ಹೊರತು ಪಡಿಸಿ ಏಪ್ರಿಲ್‌,ಮೇ ಮತ್ತು ಜೂನ್-2023 ನೇ ಮಾಹೆಗಳ ರೂ.5 ಪ್ರೋತ್ಸಾಹಧನ ರಾಜ್ಯ ಸರ್ಕಾರದಿಂದ ಜಿಲ್ಲೆಯ ಹಾಲು ಹಾಲು ಉತ್ಪಾದಕರ ರೈತರ ಖಾತೆಗೆ ಜಮಾ ಆದಂತಾಗಿದೆ ಎಂದರು.ನಿಗದಿತ ಸಮಯಕ್ಕೆ ಸರಿಯಾಗಿ ಹಾಲು ಉತ್ಪಾದಕ ರೈತರ ಖಾತೆಗೆ ಹಾಲಿನ ಪ್ರೋತ್ಸಾಹಧನ ಜಮಾ ಮಾಡಿದ ರಾಜ್ಯ ಸರ್ಕಾರಕ್ಕೆ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

300x250 AD

ಮಾರ್ಚ್‌, ಜುಲೈ-2023 ನೇ ಮಾಹೆಗಳ ರೂ.5 ಪ್ರೋತ್ಸಾಹಧನ ಕೂಡ ಶ್ರೀಘ್ರವೇ ರಾಜ್ಯ ಸರ್ಕಾರದಿಂದ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಆಗುವ ನೀರಿಕ್ಷೆಯಿದೆ ಎಂದರು. ಏಪ್ರಿಲ್‌,ಮೇ ಮತ್ತು ಜೂನ್-2023 ನೇ ಮಾಹೆಗಳ ರೂ. 5 ಪ್ರೋತ್ಸಾಹಧನ ಜಮಾ ಆಗದ ಹಾಲು ಉತ್ಪಾದಕ ರೈತರು ಕೂಡಲೇ ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದರು.

Share This
300x250 AD
300x250 AD
300x250 AD
Back to top