• Slide
  Slide
  Slide
  previous arrow
  next arrow
 • ಸ್ಪರ್ಧಾ ಮನೋಭಾವನೆ ಬೆಳೆಯಲು ಪಠ್ಯೇತರ ಚಟುವಟಿಕೆ ಅಗತ್ಯತೆ: ಪ್ರೊ. ಕೆ.ಎನ್. ಹೊಸಮನಿ

  300x250 AD

  ಶಿರಸಿ: ಭಾರತ ಸೇವಾದಳ ಶತಮಾನೋತ್ಸವ ಆಚರಣೆ ಅಂಗವಾಗಿ ಸೆ.2 ಶನಿವಾರದಂದು ಶಿರಸಿಯ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ತಾಲೂಕಾ ಸಮಿತಿ ಶಿರಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಶಾಖಾ ನಾಯಕರಿಗೆ ಹಾಗೂ ಸ್ವಯಂ ಸೇವಕರಿಗಾಗಿ ನಡೆಸಿದ ಪ್ರಬಂಧ, ದೇಶಭಕ್ತಿಗೀತೆ, ಕ್ರೀಡಾ ಸ್ಪರ್ಧೆಗಳ ಕಾರ್ಯಕ್ರಮವನ್ನು ಜಿಲ್ಲಾ ಕಾರ್ಯದರ್ಶಿಗಳಾದ ಪ್ರೊ. ಕೆ.ಎನ್. ಹೊಸಮನಿ ಇವರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

  ನಂತರ ಮಾತನಾಡಿದ ಅವರು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಅಗತ್ಯತೆ ಇದೆ. ಸ್ಪರ್ಧಾ ಮನೋಭಾವನೆ ಬೆಳೆಯಲು ಇಂತಹ ಕಾರ್ಯಕ್ರಮ ಅವಶ್ಯಕವಾಗಿದೆ. ಎಂದು ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಭಾರತ ಸೇವಾದಳ ತಾಲೂಕಾ ಅಧ್ಯಕ್ಷರಾದ ಅಶೋಕ ಬಜಂತ್ರಿ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕಾ ಕೋಶಾಧ್ಯಕ್ಷ ಕುಮಾರ ನಾಯ್ಕ್, ಸದಸ್ಯ ಕೆ. ಎನ್. ನಾಯ್ಕ, ನಿವೃತ್ತ ಶಾಖಾ ನಾಯಕ ಎಸ್. ಆರ್. ಭಟ್, ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ಉಪಸ್ಥಿರಿದ್ದರು. ಮಕ್ಕಳಿಗೆ ದೇಶಭಕ್ತಿ ಗೀತೆ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ವಿಷಯ – ಶಾಲಾ ಶಿಕ್ಷಣದಲ್ಲಿ ಸೇವಾದಳದ ಪಾತ್ರ ಹಾಗೂ ಶಿಕ್ಷಕರಿಗೆ ಗುಂಡು ಎಸೆತ, ಸಂಗೀತ ಖುರ್ಚಿ, ಪ್ರಬಂಧ ವಿಷಯ -ಪ್ರಸ್ತುತ ಶೈಕ್ಷಣಿಕ ಸಂದರ್ಭದಲ್ಲಿ ಶಿಕ್ಷಕರ ಪಾತ್ರ. ಈ ಎಲ್ಲ ವಿಷಯಗಳ ಕುರಿತು ಸ್ಪರ್ಧೆ ನಡೆಸಲಾಯಿತು. ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸರ್ವೆಶ್ವರ ಶೆಟ್ಟಿ ಸರ್ವರನ್ನು ಸ್ವಾಗತಿಸಿದರೆ, ರಾಮಚಂದ್ರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ಎನ್. ಹೆಗಡೆ ನಿರ್ವಹಿಸಿದರೆ, ಎಚ್. ರಾಜಪ್ಪ ವಂದಿಸಿದರು. ಶ್ರೀಮತಿ ಸಾವಿತ್ರಿ ಭಟ್ ಸಹಕರಿಸಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top