• Slide
  Slide
  Slide
  previous arrow
  next arrow
 • ಸಂಘ ಮನೆಯಂಗಳದಲ್ಲಿ ನೀಡಿದ ಗೌರವ ಅವಿಸ್ಮರಣೀಯ: ಪುಷ್ಪಾ ಆಚಾರಿ

  300x250 AD

  ಅಂಕೋಲಾ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಡವದಲ್ಲಿ ವಯೋನಿವೃತ್ತಿ ಹೊಂದಿದ ಪುಷ್ಪಾ ಜಿ.ಆಚಾರಿಯವರನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ವತಿಯಿಂದ ಸನ್ಮಾನಿಸಿ, ಗೌರವಿಸಿ ಬೀಳ್ಕೊಡಲಾಯಿತು.

  ಸನ್ಮಾನ ಸ್ವೀಕರಿಸಿ ಮಾತನಾಡಿದ ಪುಷ್ಪಾ ಜಿ.ಆಚಾರಿ, ಶಿಕ್ಷಕ ವೃತ್ತಿ ಅತೀ ಪವಿತ್ರವಾದ ವೃತ್ತಿ ವೈಯಕ್ತಿಕ ಸಮಸ್ಯೆಗಳ ನಡುವೆ ನಿಷ್ಠೆಯಿಂದ ಕೆಲಸ ನಿರ್ವಹಿಸಿದ ಆತ್ಮತೃಪ್ತಿ ನನಗಿದೆ. ನನ್ನ ಸಂಘ ಮನೆಯಂಗಳಕ್ಕೆ ಬಂದು ಗೌರವಿಸಿ ಬೀಳ್ಕೊಟ್ಟಿರುವುದು ನನಗೆ ಅತೀವ ಸಂತಸ ತಂದಿದೆ. ಇದು ನನ್ನ ಜೀವನದಲ್ಲಿ ಅವಿಸ್ಮರಣೀಯವಾದ ಸಂಗತಿಯಾಗಿದೆ ಎಂದರು.
  ತಾಲೂಕು ಶಾಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ.ನಾಯಕ ಹೊಸ್ಕೇರಿ, ಶಿಕ್ಷಕಿ ಪುಷ್ಪಾ ಆಚಾರಿ ಅವರು ಅತ್ಯಂತ ಸರಳ ಹಾಗೂ ಸಂಪನ್ನ ವ್ಯಕ್ತಿತ್ವವನ್ನು ಹೊಂದಿದವರು. ಅವರ ಕಾಯಕ ನಿಷ್ಠೆ ಎಲ್ಲರಿಗೂ ಮಾದರಿಯಾದುದು. ಪರಮ ಶ್ರೇಷ್ಠವಾದ ಬೋಧನಾ ವೃತ್ತಿಯನ್ನು ಆಯ್ದುಕೊಂಡು ವೃತ್ತಿ ಜೀವನ ಪೂರ್ತಿ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಪಣವಾಗಿಸಿಕೊಂಡು ಸಾರ್ಥಕ ಭಾವದಿಂದ ವಯೋ ನಿವೃತ್ತಿ ಹೊಂದುತ್ತಿರುವ ಈ ಸುಸಮಯದಲ್ಲಿ ಸಂಘ ಆತ್ಮೀಯವಾಗಿ ಗೌರವಿಸಿ ಬೀಳ್ಕೊಡುತ್ತಿದೆ ಎಂದರು.

  300x250 AD

  ಸoಘದ ಸದಸ್ಯ ಶೇಖರ ಗಾಂವಕರ, ಸಹೋದರಿ ಲತಾ ಜಿ. ಆಚಾರಿ ಅಭಿನಂದಿಸಿ ಮಾತನಾಡಿದರು. ಸಂಘದ ಉಪಾಧ್ಯಕ್ಷೆ ಭಾರತಿ ಬಿ.ನಾಯಕ, ಸದಸ್ಯರಾದ ಲಕ್ಷ್ಮಿ ಎನ್.ನಾಯಕ, ವೆಂಕಮ್ಮ ಬಿಂದೇಶ ನಾಯಕ, ಶೋಭಾ ಎಸ್.ನಾಯಕ, ಆನಂದು ವಿ.ನಾಯ್ಕ, ಸಂಜೀವ ಆರ್.ನಾಯಕ, ಶಿಕ್ಷಕರಾದ ವೇಲಾಯುಧ ನಾಯರ, ಪುಷ್ಪಾ ನಾಯಕರ ಕುಟುಂಬಸ್ಥರಾದ ದಿವಾಕರ ಆಚಾರಿ, ಲಕ್ಷ್ಮಿ ಗಣಪತಿ ಆಚಾರಿ, ಶಿಲ್ಪಾ ಆಚಾರಿ, ಆರಾಧ್ಯ, ಶರತ, ಶೋಭಾ, ನೇತ್ರಾ, ರಾಜೇಶ, ರಾಜೇಶ್ವರಿ, ಸರೋಜಾ ಸ್ವಾತಿ, ಅಕ್ಷತಾ ಮುಂತಾದವರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್.ನಾಯಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸದಸ್ಯ ದಿವಾಕರ ದೇವನಮನೆ ವಂದಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top