• Slide
    Slide
    Slide
    previous arrow
    next arrow
  • ಪರಿಪೂರ್ಣ ಜ್ಞಾನದ ಶಿಕ್ಷಣ ಮಕ್ಕಳಿಗೆ ಲಭಿಸಬೇಕು: ಪಿ.ಬಸವರಾಜ್

    300x250 AD

    ಶಿರಸಿ: ಕೇವಲ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವಿಕೆ ಮಾತ್ರ ಗುಣಮಟ್ಟದ ಶಿಕ್ಷಣ ಎನಿಸಿಕೊಳ್ಳುವುದಿಲ್ಲ. ಪರಿಪೂರ್ಣ ಜ್ಞಾನದ ಶಿಕ್ಷಣ ಮಕ್ಕಳಿಗೆ ಸಿಗಬೇಕು. ಯಾವುದೇ ಭಾಷೆಯ ಮಾಧ್ಯಮದಲ್ಲಿ ಸಾಧನೆ ಮಾಡಬಹುದಾದರೂ, ಇಂಗ್ಲೀಷ್ ನಿರ್ಲಕ್ಷ್ಯಿಸದೇ ಅದರಲ್ಲಿಯೂ ಪರಿಪೂರ್ಣತೆ ಸಾಧಿಸಬೇಕು ಎಂದು ಶಿರಸಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕ ಪಿ. ಬಸವರಾಜ ಹೇಳಿದರು.

    ಚಿರಂತನ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಾಜಿ ಕಾಲೇಜ್ ಆಯೋಜಿಸಿದ್ದ ಓಲಂಪಿಯಾಡ್ ಕಾಂಪಿಟೇಶನ್ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಮಂಗಳವಾರ ಪ್ರಶಸ್ತಿಪತ್ರ, ಫಲಕ, ಗೌರವಧನ ವಿತರಿಸಿ ಅವರು ಮಾತನಾಡಿದರು.
    ಶಿಕ್ಷಣವನ್ನು ನಾವು ಎರಡು ಆಯಾಮದಲ್ಲಿ ನೋಡುತ್ತೇವೆ. ಸಾಮಾನ್ಯ, ವೃತ್ತಿ ಶಿಕ್ಷಣ ಎರಡೂ ಇಂದಿನ ಅಗತ್ಯವಾಗಿದೆ. ಪ್ರಾಥಮಿಕ ಶಿಕ್ಷಣ ಮುಗಿದ ಬಳಿಕ ಮುಂದೇನು ಎಂಬ ಪ್ರಶ್ನೆ ಪಾಲಕರಲ್ಲಿ ಮೂಡುತ್ತೇವೆ. ವಿದ್ಯಾರ್ಥಿಯ ಸಾಮರ್ಥಕ್ಕೆ ಮೀರಿದ ಶಿಕ್ಷಣ ನೀಡುವಿಕೆ ಸಹ ಗೊಂದಲಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಯ ಆಸಕ್ತಿ ಆಧರಿಸಿ ಶಿಕ್ಷಣ ನೀಡಿದರೆ ಪ್ರಗತಿ ಸಾಧ್ಯ ಎಂದರು.
    ವೃತ್ತಿ ಶಿಕ್ಷಣ ಕ್ಷೇತ್ರದಲ್ಲಿ ಅವಕಾಶ ಜಾಸ್ತಿ ಇದೆ. ಸಾರ್ವಜನಿಕರಿಗೆ ಗೊತ್ತಿರದೇ ಇರುವ ಅನೇಕ ಕೋರ್ಸ್ ಇವೆ. ಮುಂದಿನ ಶಿಕ್ಷಣ ನಮ್ಮ ಆಯ್ಕೆ ಗಿಂತ ಮಕ್ಕಳ ಆಯ್ಕೆ ಅತಿ ಪ್ರಮುಖ. ವಿದ್ಯಾರ್ಥಿಗಳ ಆಲೋಚನೆಗೆ ಪೂರಕವಾಗಿ ಕಾರ್ಯ ನಿರ್ವಹಿಸೋಣ ಎಂದರು.
    ವೈಜ್ಙಾನಿಕ ಮನೋಭಾವ ಬೆಳೆಸಲು ಒಲಂಪಿಯಾಡ್ ಪರೀಕ್ಷೆ ಅತ್ಯಗತ್ಯ. ಇದು ಮಕ್ಕಳಲ್ಲಿ ವೈಜ್ಙಾನಿಕ ಮನೋಭಾವನೆ ಬೆಳೆಸುವ ಮೊದಲ ಹಂತವಾಗುತ್ತದೆ. ಸಾಮಾಜಿಕ ಜವಾಬ್ದಾರಿ ಶಿಕ್ಷಣ ಕ್ಷೇತ್ರದಲ್ಲಿ ಜಾಸ್ತಿ ಇದೆ. ಸರ್ಕಾರದ ಸೌಲಭ್ಯವನ್ನು ನಿಗದಿತ ಸಮಯದಲ್ಲಿ ತಲುಪಿಸಬೇಕು ಎಂದರು.
    ಈ ವೇಳೆ ಚಿರಂತನ ಸಂಸ್ಥೆ ಪ್ರಮುಖರಾದ ಆಕಾಶ್, ಕಲ್ಪನಾ, ಮಾಲಾ, ನೇಹಾ ಇತರರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top