Slide
Slide
Slide
previous arrow
next arrow

ಟ್ರಸ್ಟ್’ಗಳು ಬದುಕಿನಲ್ಲಿ ಭರವಸೆ ಮೂಡಿಸುವ ಕಾರ್ಯ ಮಾಡಬೇಕು; ಶಿವಾನಂದ ಶೆಟ್ಟಿ

300x250 AD

ಶಿರಸಿ: ನೊಂದವರಿಗೆ ಸಾಂತ್ವನ ನೀಡಿ ಬದುಕಿನಲ್ಲಿ ಭರವಸೆ ಮೂಡಿಸುವ ಕಾರ್ಯವನ್ನು ಟ್ರಸ್ಟಗಳು ನಿರ್ವಹಿಸಬೇಕಾಗಿದೆ ಎಂದು ಮಾರಿಗುಡಿ ದೇವಾಲಯದ ಧರ್ಮದರ್ಶಿ ಶಿವಾನಂದ ಶೆಟ್ಟಿ ಹೇಳಿದರು.

ಅವರು ವಿವೇಕಾನಂದ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಕವಿ ವಿಮಲಾ ಭಾಗ್ವತರ ಸಮನ್ವಯ ಚಾರಿಟೆಬಲ್ ಟ್ರಸ್ಟ ಉದ್ಘಾಟಿಸಿ ಶುಭ ಕೋರಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಡೀನ್ ಸಾಹಿತಿ ಪ್ರೋ. ಡಾ| ಜಿ.ಎ.ಹೆಗಡೆ ಸೋಂದಾ, ನಮ್ಮ ದೇಶದಲ್ಲಿ 10,00,153 ನೋಂದಾಯಿತ ಟ್ರಸ್ಟಗಳು ಇದ್ದು ಅವು ವಿವಿಧ ಆಯಾಮಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಸಮಾಜ ಮುಖೀ ಚಿಂತನೆಗೆ ಸಾಕ್ಷಿಯಾಗಿದೆ. ಮಳೆಯ ಹನಿ ಹಳ್ಳವಾಗಿ ಹೊಳೆಯಾಗಿ, ನದಿಯಾಗಿ, ಹರಿದು ಸಮುದ್ರ ಸೇರಿ ಪುನಃ ಆವಿಯಾಗಿ ಹನಿಗೊಂಡಂತೆ ಸಮಾಜದಿಂದ ಪಡೆದಿದ್ದನ್ನು ಸಮಾಜದ ಸತ್ಪಾತ್ರರಿಗೆ ಹಿಂತಿರುಗಿಸುವ ಸೇವಾ ಪ್ರಕ್ರಿಯೆ ಟ್ರಸ್ಟಗಳ ಮೂಲಕ ನಡೆಯುತ್ತಿದೆ ಎಂದು ರೋಚಕವಾಗಿ ತಿಳಿಸಿ ಸಮನ್ವಯ ಟ್ರಸ್ಟಿಗೆ ಶುಭ ಕೋರಿ ಆಶಯಗಳು ಈಡೇರಲಿ ಎಂದರು.

ಹೊಸತನದ ಹೊಸ ವಿಚಾರಧಾರೆಯೊಂದಿಗೆ ಅರ್ಹ ಸತ್ಪಾತ್ರರಿಗೆ ಮಾತ್ರ ಸಹಾಯ ನೀಡಿ ಸೇವಾ ಕ್ಷೇತ್ರಕ್ಕೆ ಘನತೆ ತರುವ ಕಾರ್ಯ ಸಮನ್ವಯ ಟ್ರಸ್ಟನಿಂದಾಗಲೀ ಎಂದು ಮಾರ್ಮಿಕವಾಗಿ ನುಡಿದರು. ಮತ್ತೊರ್ವ ಮುಖ್ಯ ಅತಿಥಿ ಶಿಕ್ಷಣಾಧಿಕಾರಿ ಎನ್. ಆರ್. ಹೆಗಡೆ ಸಮಾಜದಲ್ಲಿ ಸಂಸ್ಕಾರ ತರಲು ಇಂತಹ ಸಂಸ್ಥೆಯ ಅಗತ್ಯವಿದ್ದು ಹಿರಿಯರೇ ಆ ಕಾರ್ಯವನ್ನು ಮಾಡಲು ಮುಂದಾಗಿದ್ದಾರೆ ಎಂದರು. ಗೌರವ ಉಪಸ್ಥಿತಿಯಲ್ಲಿ ಹಿರಿಯ ಸಾಹಿತಿ ಡಿ.ಎಸ್. ನಾಯ್ಕ ಮಾತನಾಡಿ ಹಿರಿಯರೇ ಅನುಭವಗಳೇ ಇಂತಹ ಸೇವಾ ಕಾರ್ಯಕ್ಕೆ ಪ್ರೇರಣೆ ನೀಡಿ ಸಮಾಜದಲ್ಲಿ ಸಂಚಲನ ನೀಡುತ್ತದೆ ಎಂದರು. ಕವಿ ಕೃಷ್ಣ ಪದಕಿ ಶುಭ ಹಾರೈಸಿ ಸಹನೆ ದಕ್ಷತೆ ಮತ್ತು ಮಾತ್ರ‍್ಯ ರಹಿತರಾಗಿ ದುಡಿದಾಗ ಯಶ ಕಟ್ಟಿಟ್ಟ ಬುತ್ತಿ ಎಂದರು.

300x250 AD

ಸಾಹಿತಿ ಎಸ್. ಎಸ್. ಭಟ್, ಶುಭ ಹಾರೈಸಿ ಈ ಟ್ರಸ್ಟಿಗೆ ಆರ್ಥಿಕ ಸಂಪನ್ಮೂಲಗಳು ಕಾಲ ಕಾಲಕ್ಕೆ ಒದಗಿ ಬಂದು ಬಾಳಿ ಬೆಳಗಲಿ ಎಂದರು. ಡಾ|| ಬಿ.ಎಚ್. ಶ್ರೀಧರರ ಕವನವನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಹಿರಿಯ ಸಾಹಿತಿ ಜಗದೀಶ ಭಂಡಾರಿ ಶುಭ ಕೋರಿದರು. ಸ್ಪಂದನ ವೇದಿಕೆಯ ರಾಜ್ಯಾಧ್ಯಕ್ಷೆ ಹಾಸನದ ಕಲಾವತಿ ಮಧುಸೂಧನ ರವರು ಮಹಿಳಾ ಸಬಲೀಕರಣದ ಹಿನ್ನೆಲೆಯಲ್ಲಿ ಈ ಟ್ರಸ್ಟಿಗೆ ಕಾರ್ಯಕೈಗೊಳ್ಳಲು ಉತ್ತಮ ಅವಕಾಶಗಳಿವೆ ಆ ನಿಟ್ಟಿನಲ್ಲಿ ಮುನ್ನಡೆಯಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಭಾಗೀರಥಿ ಹೆಗಡೆ ಸಮಾಜದಲ್ಲಿ ಧಕ್ಷತೆಯಿಂದ ಕೆಲಸ ಮಾಡುವ ಸಂಸ್ಥೆಗಳಿಗೆ ಸದಾ ಸ್ವಾಗತವಿದೆ ಅವುಗಳ ಅಗತ್ಯವೂ ಇದೆ ಎಂದು ಸಂತಸ ಹಂಚಿಕೊಂಡರು. ಟ್ರಸ್ಟ್ ಸಂಸ್ಥಾಪಕಿ ವಿಮಲಾ ಭಾಗ್ವತ ತಮ್ಮ ಆರಂಭಿಕ ಪ್ರಸ್ತಾವನೆಯಲ್ಲಿ ಸಮಾಜಕ್ಕೆ ತನ್ನಿಂದಾದ ಕಿಂಚಿತ್ ಕೊಡುಗೆ ನೀಡಿ ಸಮಾಜದ ಋಣ ತೀರಿಸಲು ಈ ಸಂಸ್ಥೆಯನ್ನು ಸ್ಥಾಪಿಸಿದ್ದೇನೆ. ಈ ನಿಟ್ಟಿನಲ್ಲಿ ಕಾಯಾ-ವಾಚಾ-ಮನಸಾ ದುಡಿಯುತ್ತೇನೆ ಎಂದು ವಿನಮ್ರರಾಗಿ ನುಡಿದರು. ಉಷಾ ಭಟ್ ಸ್ವಾಗತಿಸಿದರೆ ರಾಜಲಕ್ಷ್ಮಿ ಹೆಗಡೆ ಬೊಮ್ಮನಳ್ಳಿ ಸೊಗಸಾಗಿ ಕಾರ್ಯಕ್ರಮ ನಿರ್ವಹಿಸಿದರು. ಸ್ಪಂದನಾ ವೇದಿಕೆ ಪುಟ್ಟಗವಾಯಿ ಟ್ರಸ್ಟ ಮತ್ತು ಸಮನ್ವಯ ಟ್ರಸ್ಟ್ ಜೊತೆ ಸೇರಿ ಈ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಮಲಾ ಭಾಗ್ವತ ವಂದನಾರ್ಪಣೆ ಗೈದರು.

Share This
300x250 AD
300x250 AD
300x250 AD
Back to top