ಅಂಕೋಲಾ: ತಾಲೂಕಾ ಅರಣ್ಯವಾಸಿಗಳ ಸಭೆಯನ್ನು ಸೆ.5, ಮಂಗಳವಾರ ಸಂಜೆ 4 ಗಂಟೆಗೆ ಅಂಕೋಲಾ ತಾಲೂಕಿನ, ಅಚವೆ ಸಭಾಂಗಣದಲ್ಲಿ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕರಾದ ಜಿ.ಎಮ್ ಶೆಟ್ಟಿ ಅಚವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯವಾಸಿಗಳಿಗೆ ಗುರುತಿನ ಪತ್ರ(ಐಡಿ ಕಾರ್ಡ)ವಿತರಿಸುವುದು, ಬೆಂಗಳೂರಿನಲ್ಲಿ ಸೆ.14 ರಂದು ನಡೆಯುವ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದಲ್ಲಿನ ಪೋಟೋ ಪ್ರದರ್ಶನದ ಕುರಿತು ಚರ್ಚಿಸುವುದು, ಅರಣ್ಯ ಹಕ್ಕು ಮಂಜೂರಿ ಕುರಿತು ರಾಜ್ಯ ಸರಕಾರದ ಸಂಬಂಧಿಸಿದ ಹಿರಿಯ ಸಚಿವರೊಂದಿಗೆ ಸಂವಾದ ಏರ್ಪಡಿಸುವ ಕುರಿತು, ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಉಸ್ತುವಾರಿ ಸಚಿವ ಮಂಕಾಳ ವೈದ್ಯರೊಂದಿಗೆ ಚರ್ಚಿಸುವ ಸಭೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಉಪಸ್ಥಿತರಿರುವರೆಂದು ಅವರು ಹೆಳಿದ್ದಾರೆ.