ಶಿರಸಿ: ಇಲ್ಲಿನ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಕಳೆದ 2 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಲಂಭೋದರ ಪಟಗಾರ ಬುಧವಾರ ನಿವೃತ್ತಿಯಾಗಿದ್ದಾರೆ.
ಕುಮಟಾ ತಾಲೂಕಿನ ಹೆಗಡೆ ಗ್ರಾಮದ ನರಿಬೊಳೆಯ ನಿವಾಸಿಯಾದ ಇವರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ 25-06-1992 ರಲ್ಲಿ ಅಗ್ನಿಶಾಮಕನಾಗಿ ಸೇರಿಕೊಂಡು, 25-06-1992 ರಿಂದ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ 6 ತಿಂಗಳ ಬುನಾದಿ ತರಬೇತಿ ಮುಗಿಸಿ ತಮ್ಮ ಅಪೂರ್ವ ಸೇವೆಯನ್ನು ಅಗ್ನಿಶಾಮಕನಾಗಿ 01-01-1993 ರಿಂದ ಪಾಂಡೇಶ್ವರ ಅಗ್ನಿಶಾಮಕ ಠಾಣೆ, 03-07-2000 ರಿಂದ ಕುಂದಾಪುರ ಅಗ್ನಿಶಾಮಕ ಠಾಣೆ, 05-05-2007 ರಿಂದ ಕುಮಟಾ ಅಗ್ನಿಶಾಮಕ ಠಾಣೆ, 18-05-2009 ರಿಂದ ಪ್ರಮುಖ ಅಗ್ನಿಶಾಮಕರಾಗಿ ಪದೊನ್ನತಿ ಹೊಂದಿ ಕಾರವಾರ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ, 2011 ರಿಂದ ಮರಳಿ ಕುಮಟಾ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೊನ್ನತಿ ಹೊಂದಿ ಪ್ರಸ್ತುತ 2 ವರ್ಷದಿಂದ ಶಿರಸಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ, ಆ.30 ರಂದು ನಿವೃತ್ತಿಯಾಗಿದ್ದಾರೆ.
ಇವರ ಉತ್ತಮ ಸೇವೆಗಾಗಿ ಇಲಾಖೆಯ ಮುಖ್ಯಸ್ಥ ಐಜಿ ಅವರಿಂದ ಪ್ರಶಂಸಣಾ ಪತ್ರ ಹಾಗೂ ಹಲವು ಬಾರಿ ನಗದು ಪುರಸ್ಕಾರ ಮತ್ತು 2009ರಲ್ಲಿ “ಮುಖ್ಯಮಂತ್ರಿ ಪದಕ”ಕ್ಕೆ ಭಾಜನರಾಗಿದ್ದಾರೆ. ಸುಧೀರ್ಘ ಸುಮಾರು 31 ವರ್ಷಗಳ ಕರ್ತವ್ಯ ನಿರ್ವಹಿಸಿ, ಬುಧವಾರ ನಿವೃತ್ತಿಯಾಗಿದ್ದಾರೆ. ಇವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಂಜುನಾಥ ಸಾಲಿ ಹಾರೈಸಿದ್ದಾರೆ.