Slide
Slide
Slide
previous arrow
next arrow

ಕುಮಟಾದಲ್ಲಿ ಬಿಳಿ ಹೆಬ್ಬಾವು ಪ್ರತ್ಯಕ್ಷ: ಉರಗ ತಜ್ಞ ಪವನ್‌ರಿಂದ ರಕ್ಷಣೆ

300x250 AD

ಕುಮಟಾ: ತಾಲೂಕಿನ ಹೆಗಡೆ ಗ್ರಾಮದ ಗಾಂಧಿನಗರದ ದೇವಿ ಮುಕ್ರಿ ಎನ್ನುವವರ ಮನೆಯ ಅಂಗಳದಲ್ಲಿ ಬಿಳಿ ಹೆಬ್ಬಾವು ಕಾಣಿಸಿದ್ದು, ಸಮೀಪದ ಮನೆಯ ಆರ್‌ಟಿಓ ಆಫೀಸ್ ಹೋಮ್‌ಗಾರ್ಡ್ ಗಣೇಶ್ ಮುಕ್ರಿಯವರ ಕರೆಯ ಮೇರೆಗೆ ಪವನ್ ನಾಯ್ಕ ರಾತ್ರಿ 12 ಘಂಟೆಗೆ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ್ದಾರೆ.

ಕಳೆದ ವರ್ಷವಷ್ಟೇ ಮಿರ್ಜಾನ್‌ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿದ್ದು, ರಾತ್ರಿಯ ವೇಳೆ ಪವನ್ ನಾಯ್ಕ ಹೋಗಿ ರಕ್ಷಣೆ ಮಾಡಿದ್ದು ರಾಷ್ಟ್ರಾದ್ಯಂತ ವೈರಲ್ ಆಗಿತ್ತು. ಈಗ ಬಹುತೇಕ 3 ಪಟ್ಟು ದೊಡ್ಡ ಗಾತ್ರದ ಹೆಬ್ಬಾವು ಹೆಗಡೆಯಲ್ಲಿ ಕಾಣಿಸಿದ್ದು, ಭಯಬೀತರಾಗಿ ನೂರಾರು ಜನ ನೆರೆದಿದ್ದರು. ಇಂತಹ ಹಾವು ಕರ್ನಾಟಕದಲ್ಲೇ ಮೂರನೇ ಬಾರಿ ರಕ್ಷಣೆಯಾಗಿದ್ದು, ಅದರಲ್ಲಿ 2 ಬಾರಿ ಕುಮಟಾದಲ್ಲೇ ರಕ್ಷಣೆಯಾಗಿದ್ದು ವಿಶೇಷವಾಗಿದೆ. ಈ ಮೂಲಕ ಭಾರತದಲ್ಲೇ ಅತೀದೊಡ್ಡ ಬಿಳಿ ಹೆಬ್ಬಾವಿನ ರಕ್ಷಣೆಯ ಕೀರ್ತಿಯೂ ಪವನ್ ನಾಯ್ಕ ಅವರಿಗೆ ಸಿಕಿದೆ.
ಬೆಳಿಗ್ಗೆ ಈ ಹೆಬ್ಬಾವನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದ್ದು, ಮೈಮೇಲೆ ಸಣ್ಣ ಪುಟ್ಡ ಗಾಯಗಳಿರುವುದರಿಂದ ಮೈಸೂರ್ ಝೂಗೆ ಕಳುಹಿಸಲಾಗಿದೆ. ಡಿಎಫ್‌ಓ ರವಿಶಂಕರ್, ಎಸಿಎಫ್ ಜಿ.ಲೋಹಿತ್, ಆರ್‌ಎಫ್‌ಓ ಎಸ್.ಟಿ.ಪಟಗಾರ್, ಡಿಆರ್‌ಎಫ್‌ಓ ಹೂವಣ್ಣ ಗೌಡ ಸ್ಥಳದಲ್ಲಿದ್ದರು. ಹಾವಿನ ಛಾಯಾಗ್ರಹಣವನ್ನು ಛಾಯಾಗ್ರಾಹಕ ಗೋಪಿ ಜೊಲಿಯವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top