• Slide
    Slide
    Slide
    previous arrow
    next arrow
  • ಅಂಕೋಲಾದಲ್ಲಿ ಹೆಚ್ಚಾಗುತ್ತಿದೆ ನಕಲಿ ನೋಟುಗಳ ಹಾವಳಿ

    300x250 AD

    ಅಂಕೋಲಾ: ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಲು ಹೊರಟಿರುವ 500 ರೂ. ಮುಖಬೆಲೆಯ ನಕಲಿ ನೋಟುಗಳು ಪಟ್ಟಣದಲ್ಲಿ ಸಂಚಲನವನ್ನೇ ಮೂಡಿಸಿದೆ. ನಕಲಿ ನೋಟುಗಳ ಹಾವಳಿ ಸಣ್ಣ ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ನಾಗರಿಕರು ಆತಂಕಕ್ಕೆ ಒಳಗಾಗುವಂತಾಗಿದೆ.
    ನಕಲಿ ನೋಟುಗಳನ್ನು ಚಲಾವಣೆ ಮಾಡುವ ಒಂದು ತಂಡವೇ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದ್ದು, ಹೆಚ್ಚಾಗಿ ಅಂಕೋಲಾದ ಶನಿವಾರದ ಸಂತೆಯಲ್ಲಿ ಖೋಟಾ ನೋಟು ತನ್ನ ಕರಾಳ ಮುಖ ಪ್ರದರ್ಶಿಸುತ್ತಲಿದೆ. 500 ರೂ. ಮುಖಬೆಲೆಯ ನೋಟುಗಳನ್ನಷ್ಟೇ ಆಯ್ದ ಕೆಲವು ವ್ಯಕ್ತಿಗಳಿಗೆ ಕೊಟ್ಟು ಜನದಟ್ಟಣೆ ಇರುವ ವ್ಯಾಪಾರ ಕೇಂದ್ರಗಳಲ್ಲಿ ವಸ್ತುಗಳನ್ನು ಖರೀದಿಸುವುದು ನೋಟು ವಿನಿಮಯ ಮಾಡಿಕೊಳ್ಳಲಾಗುತ್ತಿದೆ.

    ಕೆಲವು ಕಡೆ ಅಸಲಿ ನೋಟಿನ ಜತೆಗೆ ನಕಲಿ ನೋಟುಗಳನ್ನು ಸೇರಿಸಿ ಕೊಡುವುದು ಮತ್ತು ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳ ಬಳಿ ವಸ್ತುಗಳನ್ನು ಖರೀದಿಸಿ ಕಲರ್ ಪ್ರಿಂಟ್ ನೋಟುಗಳನ್ನು ಕೊಟ್ಟು ಹೋಗುತ್ತಿದ್ದಾರೆ. ಅಸಲಿ ನೋಟನ್ನು ಕಲರ್ ಪ್ರಿಂಟ್ ಮಾಡಿ ನೋಟಿನ ಮಧ್ಯಭಾಗದಲ್ಲಿ ಬರುವ ಆರ್‌ಬಿಐ ಗೆರೆಯನ್ನು ಮಾರ್ಕರ್ ಪೆನ್‌ಬಳಸಿ ಗೆರೆ ಎಳೆಯಲಾಗಿದೆ. ಆದರೆ, ಈ ನಕಲಿ ನೋಟಿಗೆ ಬಳಸಲಾಗಿರುವ ಪೇಪರ್ ತೆಳುವಾಗಿದ್ದು, ಕೈಯಲ್ಲಿ ಮುದುರಿದರೆ ಸಂಪೂರ್ಣವಾಗಿ ಪೇಪರ್ ಉಂಡೆಯಾಗುತ್ತದೆ. ಅಲ್ಲದೆ ಈ ನೋಟುಗಳು ಸಾರ್ವಜನಿಕರ ಕೈನಿಂದ ಕೈಗೆ ಚಲಾವಣೆಯಾಗುತ್ತಿದ್ದಂತೆ ಬಣ್ಣವೆಲ್ಲಾ ಮಾಸಿ ಬೇಗನೆ ಹರಿದು ಹೋಗುತ್ತದೆ. ಇದರಿಂದ ಪ್ರತಿದಿನ ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಸುವ ಪೆಟ್ರೋಲ್ ಬಂಕ್ ಹಾಗೂ ಇತರ ವ್ಯಾಪಾರಿಗಳು ಬ್ಯಾಂಕ್‌ಗಳಿಗೆ ಹಣ ಕಟ್ಟಲು ಹೋದಾಗ ನೋಟು ಎಣಿಕೆ ಯಂತ್ರಕ್ಕೆ ಹಾಕಿದಾಗ ನಕಲಿ ನೋಟುಗಳು ಬೇರ್ಪಡುತ್ತವೆ.
    ಇವುಗಳನ್ನು ಬ್ಯಾಂಕ್ ಸಿಬ್ಬಂದಿ ಹಣ ಕಟ್ಟಿದ ಗ್ರಾಹಕನಿಗೆ ವಾಪಸ್ ಕೊಡದೆ ಹರಿದು ಬಿಸಾಡುತ್ತಾರೆ. ಇಂತಹ ಬಹಳಷ್ಟು ಸನ್ನಿವೇಶಗಳು ಪಟ್ಟಣದಲ್ಲಿ ಪ್ರತಿನಿತ್ಯ ಸಾರ್ವಜನಿಕ ವಲಯದಲ್ಲಿ ಕಾಣಸಿಗುತ್ತಿದ್ದು, ಸಾರ್ವಜನಿಕರು ಯಾವುದು ನಕಲಿ, ಅಸಲಿ ನೋಟು ಎಂದು ಗೊತ್ತಾಗದೆ ಪೇಚಿಗೆ ಸಿಲುಕುವಂತಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top