ಹೊನ್ನಾವರ: ತಾಲೂಕಾ ಅರಣ್ಯವಾಸಿಗಳ ಸಭೆಯನ್ನು ಸೆ.2, ಶನಿವಾರ ಮುಂಜಾನೆ 10 ಗಂಟೆಗೆ ಹೊನ್ನಾವರ ಪ್ರಭಾತನಗರದ ಮೂಡಗಣಪತಿ ದೇವಸ್ಥಾನ ಆವರಣದಲ್ಲಿ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವಿಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯವಾಸಿಗಳಿಗೆ ಗುರುತಿನ ಪತ್ರ(ಐಡಿ ಕಾರ್ಡ)ವಿತರಿಸುವುದು, ಬೆಂಗಳೂರಿನಲ್ಲಿ ಸೆ.14ರಂದು ನಡೆಯುವ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದಲ್ಲಿನ ಪೋಟೋ ಪ್ರದರ್ಶನದ ಕುರಿತು ಚರ್ಚಿಸುವುದು, ಅರಣ್ಯ ಹಕ್ಕು ಮಂಜೂರಿ ಕುರಿತು ರಾಜ್ಯ ಸರಕಾರದ ಸಂಬಂಧಿಸಿದ ಹಿರಿಯ ಸಚಿವರೊಂದಿಗೆ ಸಂವಾದ ಏರ್ಪಡಿಸುವ ಕುರಿತು, ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಉಸ್ತುವಾರಿ ಸಚಿವ ಮಂಕಾಳ ವೈದ್ಯರೊಂದಿಗೆ ಚರ್ಚಿಸುವ ಕುರಿತು ಸಭೆಯಲ್ಲಿ ತಿಳಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ್ ಅಧ್ಯಕ್ಷತೆಯಲ್ಲಿ ಜರಗುವ ಸಭೆಗೆ ಆಸಕ್ತರು ಆಗಮಿಸಬೇಕಾಗಿ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ಕೋರಿದ್ದಾರೆ.