ಕಾರವಾರ: ಜನಶಕ್ತಿ ವೇದಿಕೆಯಿಂದ ನಗರದ ಆಶಾನಿಕೇತನ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯಲ್ಲಿ ಹಾಲು, ಸಮೋಸಾ, ಲಡ್ಡುಗಳನ್ನ ವಿತರಿಸುವ ಮೂಲಕ ನಾಗರ ಪಂಚಮಿಯನ್ನ ವಿಶೇಷವಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ.ರಾಯ್ಕರ್, ನಾಗರಹಾವು ಹಾಲು ಕುಡಿಯುವುದಿಲ್ಲವೆಂದು ತಿಳಿದಿದ್ದರೂ ನಾಗರ ಪಂಚಮಿಯoದು ಹೀಗೆ ಕಲ್ಲಿನ ಮೂರ್ತಿಗಳಿಗೆ ಹಾಲೆರೆದು ಅದನ್ನು ವ್ಯರ್ಥ ಮಾಡಲಾಗುತ್ತಿದೆ. ಅದರ ಬದಲು ಬಡವರು, ಹಸಿದ ಮಕ್ಕಳಿಗೆ ನೀಡುವ ಮೂಲಕ ಹಬ್ಬವನ್ನ ಸಾರ್ಥಗೊಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜನಶಕ್ತಿ ವೇದಿಕೆಯ ಕಾರ್ಯ ಶ್ಲಾಘನೀಯ ಎಂದರು.
ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ದೇವರಿಲ್ಲ ಎಂಬುದನ್ನೂ ನಾನು ಒಪ್ಪುವುದಿಲ್ಲ. ದೇವರು ಎಲ್ಲೆಡೆ ಇದ್ದಾನೆ; ಈ ಮಕ್ಕಳಲ್ಲೂ ದೇವರಿದ್ದಾನೆ. ಹಾಗಿದ್ದರೂ ಕಲ್ಲಿನ ಮೂರ್ತಿಗಳಿಗೇ ನಾವು ಹಾಲನ್ನೆರದು ಅದು ಚರಂಡಿಗೆ ಹರಿದು ಹೋಗುವವರೆಗೆ ವ್ಯರ್ಥ ಮಾಡುತ್ತಿದ್ದೇವೆ. ಅದನ್ನು ಹೀಗೆ ಪ್ರತಿವರ್ಷ ಇಂಥ ಮಕ್ಕಳಿಗೆ ವಿತರಿಸುವ ಮೂಲಕ ನಾನು ಸಾರ್ಥಕತೆಯನ್ನ ಕಾಣುತ್ತಿದ್ದೇನೆ. ಸತೀಶ್ ಜಾರಕಿಹೊಳಿಯವರು ಮೂಢನಂಬಿಕೆಗಳನ್ನ ತೊಡದು ಹಾಕುವ ನಿಟ್ಟಿನಲ್ಲಿ ಇಂಥ ವಿದಾಯಕ ಕಾರ್ಯಕ್ರಮಗಳನ್ನ ಮಾಡುತ್ತಿದ್ದರು. ಈ ಕಾರ್ಯಕ್ರಮಕ್ಕೂ ನನಗೆ ಅವರೇ ಪ್ರೇರಣೆ ಎಂದರು.
ವಕೀಲರಾದ ಸಪ್ನಾ ಗುನಗಿ, ಶಾಲೆಯ ಮೇಲ್ವಿಚಾರಕಿ ಸಿಸ್ಟರ್ ಲೈನೆಟ್, ವೇದಿಕೆಯ ಸದಸ್ಯರಾದ ರಾಮಾ ನಾಯ್ಕ, ಬಾಬು ಶೇಖ್, ರಮೇಶ್ ಗುನಗಿ, ಖೈರುನ್ನಿಸಾ ಶೇಖ್, ಸುರೇಶ್ ನಾಯ್ಕ, ಶಿವಾನಂದ್ ನಾಯ್ಕ್, ಇದಿನ್ ಅಲ್ಫ್ಯಾನ್ಸೋ, ಫಕೀರಪ್ಪ ಭಂಡಾರಿ, ಚಂದ್ರಕಾAತ್ ನಾಯ್ಕ, ಸೂರಜ್ ಕುರೂಮಕರ್, ಅಲ್ತಾಫ್ ಶೇಖ್, ಸಿ.ಎನ್.ನಾಯ್ಕ, ಸುಗಂಧಾ ನಾಯ್ಕ್, ವಿನಯಾ ಪ್ರಭಾ, ಮಾಧವ ನಾಯಕ ಅವರ ಪುತ್ರಿಯರಾದ ಮಧುರಾ ನಾಯಕ, ಯಶಸ್ವಿನಿ ನಾಯಕ, ಸಿಸ್ಟರ್ ಪೂಜಾ, ಸಿಸ್ಟರ್ ವಿಜಯಾ, ಸಿಸ್ಟರ್ ಅಮಿಶಾ, ಶಿಕ್ಷಕಿಯರಾದ ಪುಷ್ಪಾ, ಶಿಕ್ಷಕಿ ಜಾನಕಿ, ಹತ್ತನೇ ತರಗತಿಯ ವಿದ್ಯಾರ್ಥಿನಿ ಕೃತಿಕಾ, ಅಡುಗೆ ಸಿಬ್ಬಂದಿ ಶೀಲಾ, ಮಂಗಲಾ ಹಾಗೂ ಇತರರು ಇದ್ದರು.