Slide
Slide
Slide
previous arrow
next arrow

ಸರ್ಕಾರಿ ಕಚೇರಿಗಳಿಗೆ ಶಾಸಕ ಆರ್.ವಿ.ಡಿ. ಭೇಟಿ: ಪರಿಶೀಲನೆ

300x250 AD

ಹಳಿಯಾಳ: ಶಾಸಕ ಆರ್.ವಿ.ದೇಶಪಾಂಡೆ ಇತ್ತೀಚೆಗೆ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿ ತಿರುಗಾಡುತ್ತಿದ್ದು, ದಿನಕ್ಕೊಂದು ಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸೋಮವಾರ ಹಠಾತ್ತನೇ ತಹಶಿಲ್ದಾರರ ಕಛೇರಿಗೆ ಭೇಟಿ ನೀಡಿ ಎಲ್ಲ ಸಿಬ್ಬಂದಿಗಳು ಅವರವರ ಸ್ಥಾನದಲ್ಲಿರದೇ ಸಾಕಷ್ಟು ಕಡತಗಳನ್ನು ವಿಲೇವಾರಿ ಮಾಡದೇ ಇರುವದನ್ನು ಮತ್ತು ಕೆಲ ಸಿಬ್ಬಂದಿ ರಜಾ ಅರ್ಜಿ ಬರೆದು ಮಂಜೂರಾತಿ ತೆಗೆದುಕೊಳ್ಳದೇ ನಿಯಮ ಬಾಹಿರವಾಗಿ ರಜೆಯಲ್ಲಿರುವದನ್ನು ಮತ್ತು ಕೆಲ ಸಿಬ್ಬಂದಿ ಸಾರ್ವಜನಿಕರ ಜೊತೆಯಲ್ಲಿ ಉಡಾಫೆಯಿಂದ ವರ್ತಿಸಿರುವ ದೂರನ್ನು ಪರಿಗಣಿಸಿ ಸಂಬoಧಿಸಿದ ಸಿಬ್ಬಂದಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

300x250 AD

ಹಳಿಯಾಳ ಮತ ಕ್ಷೇತ್ರ ತಡವಾಗಿಯಾದರೂ ಸರಿಯಾದ ಆಡಳಿತದ ಹಳಿಗೆ ಮರಳುವತ್ತ ನಿರ್ಧರಿಸಿದ್ದು ಉತ್ತಮ ಬೆಳವಣಿಗೆಯಾಗಿದೆ ಎಂದು ಇವೆಲ್ಲ ಘಟನೆಗಳನ್ನು ನೋಡುತ್ತಿರುವ ಜನತೆ ಅಂದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ದೇಮಾನಿ ಶಿರೋಜಿ ಶಾಸಕರಿಗೆ ಜೊತೆ ನೀಡಿದರು.

Share This
300x250 AD
300x250 AD
300x250 AD
Back to top