• Slide
  Slide
  Slide
  previous arrow
  next arrow
 • ಆ.24ಕ್ಕೆ ನೆಮ್ಮದಿಯಲ್ಲಿ ‘ಕ್ಯಾನ್ಸರ್ ಜಾಗೃತಿ’ ಕಾರ್ಯಾಗಾರ

  300x250 AD

  ಶಿರಸಿ: ಪ್ರಜ್ವಲ ಟ್ರಸ್ಟ್ ವತಿಯಿಂದ ಆ.24 ಗುರುವಾರ, ಬೆಳಿಗ್ಗೆ 10 ಘಂಟೆಯಿಂದ ಇಲ್ಲಿನ ಸಾಮ್ರಾಟ್ ಹೊಟೆಲ್ ಎದುರಿನ ನೆಮ್ಮದಿ ಆವರಣದಲ್ಲಿ ‘ಕ್ಯಾನ್ಸರ್ ಜಾಗೃತಿ’ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

  ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕ್ಯಾನ್ಸರ್ ರೋಗಿಗಳ ಆಪ್ತ ಸಮಾಲೋಚಕಿ, ಹಿರಿಯ ಪತ್ರಕರ್ತೆ ಶ್ರೀಮತಿ ಕೃಷ್ಣಿ ಶಿರೂರ್ ಆಗಮಿಸಲಿದ್ದು, ಕ್ಯಾನ್ಸರ್, ಮನೋಪಾಸ್, ಬಿಪಿ, ಶುಗರ್ ಹೀಗೆ ದಿನನಿತ್ಯ ಬಂದು ಕಾಡುವ ಹಲವಾರು ಖಾಯಿಲೆಗಳ ಬಗ್ಗೆ ಆಪ್ತ ಸಮಾಲೋಚನೆ ಹಾಗೂ ವಿಶೇಷ ರೀತಿಯ ಮುದ್ರಾ ಯೋಗ ಚಿಕಿತ್ಸಾ ವಿಧಾನಗಳನ್ನು ತಿಳಿಸಿಕೊಡಲಿದ್ದಾರೆ.

  ಧಾತ್ರಿ ಆಯುರ್ವೇದ ಕೇಂದ್ರದ ಡಾ.ವಿನಾಯಕ ಹೆಬ್ಬಾರ್, ಲಯನ್ಸ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಲ.ರವಿ ನಾಯ್ಕ್, ವಿ.ಪಿ.ಹೆಗಡೆ ವೈಶಾಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

  300x250 AD

  ಇದೇ ಕಾರ್ಯಾಗಾರವು ಅದೇ ದಿನ ಮಧ್ಯಾಹ್ನ 3 ಘಂಟೆಯಿಂದ ಕೆರೆಕೈ, ಹಳದೋಟದ ಗಣಪತಿ ದೇವಸ್ಥಾನದಲ್ಲಿ ನಡೆಯಲಿದ್ದು, ಜನರ ಒಳಿತಿಗಾಗಿ ಹಮ್ಮಿಕೊಂಡ ಉಚಿತ ಕಾರ್ಯಗಾರಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಘಟಕರು ಕೋರಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top