ಶಿರಸಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿರಸಿ ಇಖ್ರಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಿರಸಿ ಇವರ ಆಶ್ರಯದಲ್ಲಿ ನಡೆದ ನಗರ ಉತ್ತರ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆದಿದ್ದು ನಗರದ ಲಯನ್ಸ್ ಪ್ರೌಢಶಾಲಾ ವಿದ್ಯಾರ್ಥಿಗಳು ಬಹುತೇಕ ಎಲ್ಲಾ ಕ್ರೀಡೆಯಲ್ಲಿ ಪಾಲ್ಗೊಂಡು ಸಾಕಷ್ಟು ಬಹುಮಾನಗಳನ್ನು ತಮ್ಮದಾಗಿಸಿಕೊಂಡು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ವೈಯಕ್ತಿಕವಾಗಿ 18 ವಿದ್ಯಾರ್ಥಿಗಳು ಬೇರೆ ಬೇರೆ ವಿಭಾಗದಲ್ಲಿ ಬಹುಮಾನ ಗಳಿಸಿದ್ದರೆ ಎಂಟು ಗುಂಪು ಆಟಗಳಲ್ಲಿ ಬಹುಮಾನ ಗಳಿಸಿದ್ದಾರೆ.
ಎಂಟನೇ ತರಗತಿಯ ಕುಮಾರಿ ತನುಶ್ರೀ ಟಿ. ಉದ್ದ ಜಿಗಿತ, ಎತ್ತರ ಜಿಗಿತದಲ್ಲಿ ಪ್ರಥಮ ಮತ್ತು ಹರ್ಡಲ್ಸನಲ್ಲಿ ತೃತೀಯ, 10ನೇ ತರಗತಿಯ ವಂದನಾ ಎತ್ತರ ಜಿಗಿತ ದ್ವಿತೀಯ, ಎಂಟನೇ ತರಗತಿಯ ಯೋಗಿತಾ ವಿ. ಮೋದಿ 3000 ಮೀಟರ್ ಓಟದಲ್ಲಿ ತೃತೀಯ, ಪ್ರಾರ್ಥನಾ ಪ್ರಸನ್ನ ಹೆಗಡೆ ಗುಂಡು ಎಸೆತದಲ್ಲಿ ಪ್ರಥಮ, ಭರ್ಜಿ ಎಸೆತದಲ್ಲಿ ದ್ವಿತೀಯ, ಸಂತೋಷಿ ಪಟಗಾರ ಚದುರಂಗದಲ್ಲಿ ದ್ವಿತೀಯ, ವಿಭವ್ ಭಾಗವತ್ ಭರ್ಜಿ ಎಸೆತದಲ್ಲಿ ದ್ವಿತೀಯ, ಚಿನ್ಮಯ್ ಎತ್ತರ ಜಿಗಿತದಲ್ಲಿ ದ್ವಿತೀಯ, ಉದ್ದ ಜಿಗಿತ ತೃತೀಯ, ಟ್ರಿಪ್ಪಲ್ ಜಂಪ್’ನಲ್ಲಿ ತೃತೀಯ, ಜೀವಿತ್ ಎತ್ತರ ಜಿಗಿತದಲ್ಲಿ ತೃತೀಯ, ಧನುಷ್ ನಾಯ್ಕ 1000 ಮೀ.ಓಟದಲ್ಲಿ ತೃತೀಯ, ಬಾಲಕೃಷ್ಣ (10th) 3000 ಮೀಟರ್ ಓಟದಲ್ಲಿ ಪ್ರಥಮ, ನಾಗರಾಜ್ NB ಯೋಗಾಸನದಲ್ಲಿ ಪ್ರಥಮ, ಪ್ರಸನ್ನ .ಹೆಗಡೆ ಚದುರಂಗದಲ್ಲಿ ಪ್ರಥಮ, ಶ್ರೇಯಸ್ ಮ್ಯಾಗೇರಿ ಗುಂಡುಎಸೆತದಲ್ಲಿ ತೃತೀಯ, ಶ್ರೀಶ 400mtr. ಓಟದಲ್ಲಿ ದ್ವಿತೀಯ, ಹಾಗೂ ಗುಂಪು ಆಟಗಳಲ್ಲಿ ಗಂಡು ಮಕ್ಕಳ ಕಬ್ಬಡಿ ಪ್ರಥಮ, ವಾಲಿಬಾಲ್ ದ್ವಿತೀಯ, ರಿಲೇಯಲ್ಲಿ ದ್ವಿತೀಯ, ಕೋಕೋ ಮತ್ತು ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ, ಹೆಣ್ಣು ಮಕ್ಕಳು ಕಬ್ಬಡಿ ದ್ವಿತೀಯ, ಥ್ರೋ ಬಾಲ್ ದ್ವಿತೀಯ, ಕೋ ಕೋ ದ್ವಿತೀಯ, ವಾಲಿಬಾಲ್ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಹಕರಿಸಿದ ಪಾಲಕರಿಗೆ, ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ನಾಗರಾಜ್ ಜೋಗಳೇಕರ್ ಮತ್ತು ಇನ್ನುಳಿದ ತರಬೇತುದಾರಿಗೆ ಸಹ ಶಿಕ್ಷಕರಿಗೆ , ಶಾಲೆಯ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.