ಬೆಂಗಳೂರು: ಜರ್ಮನಿಯ ಸಚಿವ ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಯುಪಿಐ ಬಳಸಿ ತರಕಾರಿ ಖರೀದಿಸಿ ಸುದ್ದಿ ಮಾಡಿದ್ದಾರೆ.
ಜಿ20 ಸಭೆಗಾಗಿ ಬೆಂಗಳೂರಿಗೆ ಆಗಮಿಸಿರುವ ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಬೆಂಗಳೂರು ನಗರದ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಖರೀದಿಸಿದರು ಮತ್ತು ಮಾರುಕಟ್ಟೆಯಲ್ಲಿ ಸುತ್ತಾಡಿ ವ್ಯಾಪಾರ ವಹಿವಾಟು ಹೇಗೆ ನಡೆಯುತ್ತದೆ ಎಂಬುದನ್ನು ಗಮನಿಸಿದರು. ನಂತರ ತಾವು ಕೂಡ ಮೆಣಸಿನಕಾಯಿ ಖರೀದಿ ಮಾಡಿದರು.ಭಾನುವಾರ ಮಡಿವಾಳ ಮಾರುಕಟ್ಟೆಗೆ ಭೇಟಿ ನೀಡಿದ್ದ ಜರ್ಮನಿ ಸಚಿವ 1 ಕೆಜಿ ಮೆಣಸಿನಕಾಯಿ ಖರೀದಿಸಿದರು.
ಯುಪಿಐ ಮೂಲಕ ಹಣ ಪಾವತಿ ಮಾಡಿ ಭಾರತದ ಡಿಜಿಟಲ್ ವ್ಯಾಪಾರಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಈ ಬಗ್ಗೆ ಟ್ವೀಟ್ ಮಾಡಿ ಡಿಜಿಟಲ್ ಇಂಡಿಯಾ ಬಗ್ಗೆ ಜರ್ಮನಿ ರಾಯಭಾರ ಕಚೇರಿ ಪ್ರಶಂಸೆ ವ್ಯಕ್ತಪಡಿಸಿದೆ. ತಮ್ಮ ಸಚಿವರು ಭಾರತದ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಖರೀದಿಸುತ್ತಿರುವ ಫೋಟೋ ಕೂಡ ಹಂಚಿಕೊಂಡಿದೆ.