Slide
Slide
Slide
previous arrow
next arrow

ಭಗವದ್ಗೀತೆ ಪುಸ್ತಕ ಮನೆಯಲ್ಲಿದ್ದರೆ ಯಾವುದೇ ದುಷ್ಟ ಶಕ್ತಿ ಬರದು: ಸ್ವರ್ಣವಲ್ಲೀ ಶ್ರೀ

300x250 AD

ಶಿರಸಿ: ಪ್ರತಿನಿತ್ಯ ಭಗವದ್ಗೀತೆಯ ಪಾರಾಯಣದ ಜೊತೆಗೆ ಯೋಗ, ಪ್ರಾಣಾಯಾಮ ಮಾಡಿದರೆ ಹಿಂದಿನ ಎಲ್ಲ ಪಾಪಗಳು ಕರಗುತ್ತವೆ. ಹೊಸ ಪಾಪಗಳೂ ಹುಟ್ಟುವದಿಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜಗದ್ಗುರು ಶಂಕರಾಚಾರ‍್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನುಡಿದರು.

ಅವರು ಚಾತುರ್ಮಾಸ್ಯದ ಅವಧಿಯಲ್ಲಿ ಸ್ವರ್ಣವಲ್ಲೀಯಲ್ಲಿ ಚಾತುರ್ಮಾಸ್ಯ ವೃತಾಚರಣೆ ಸಂಕಲ್ಪಿತ ಶ್ರೀಗಳ ಗುರುಪಾದ ಸೇವೆ ಸಲ್ಲಿಸಿದ ಮಂಜುಗುಣಿ ಸೀಮೆಯ ಶೀಷ್ಯರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ಎಲ್ಲ ಆಚಾರ‍್ಯರುಗಳು ಸ್ವಾಧ್ಯಾಯ ಅಪ್ಪಿ ತಪ್ಪಿಯೂ ಬಿಡಬೇಡ ಎಂದಿದ್ದಾರೆ. ದಿನವೂ ವೇದದ ಅಧ್ಯಯನ ಮಾಡಬೇಕು ಎಂಬುದು ಅದರ ಅರ್ಥ. ಗುರುಕುಲದ ಅಧ್ಯಯನ ಬೇರೆ, ಮನೆಗೆ ಬಂದ ಬಳಿಕವೂ ಬದುಕಿರುವ ತನಕ ಓದುತ್ತಿರಬೇಕು ಎಂಬುದು ಆಚಾರ‍್ಯರ ಸೂಚನೆ. ಆದರೆ, ವೇದ ಎಲ್ಲರೂ ಓದಿಲ್ಲ. ಅವರಿಗೆ ಸ್ವಾಧ್ಯಾಯ ಪ್ರಯೋಜನ ಸಿಗಲು ಹಾಗೂ ಅವರಿಗೋಸ್ಕರವೇ ಭಗವದ್ಗೀತೆಯನ್ನು ಭಗವಂತ ನೀಡಿದ್ದಾನೆ ಎಂದರು.

300x250 AD

ಇಡೀ ಮಹಾ ಭಾರತ ಕೂಡ ವೇದದ ಭಾಗವಾಗಿ ಅದಕ್ಕೋಸ್ಕರವೇ ಬಂದಿದೆ ಎನ್ನುತ್ತಾರೆ. ಇಡೀ ಮಹಾ ಭಾರತ ಕೂಡ ವೇದಗಳ ಪರ‍್ಯಾಯವಾಗಿ ಕೊಡುತ್ತದೆ. ಅದರ ಮಧ್ಯದಲ್ಲಿ ಇರುವದೇ ಗೀತೆ ಎಂದ ಶ್ರೀಗಳು, ಈ ಗೀತೆಯಿರುವ ಪುಟ್ಟ ಗ್ರಂಥ ಓದಲು ಎಲ್ಲರಿಗೂ ಸಾಧ್ಯವಿದೆ. ಗೀತೆ ಪಾರಾಯಣ ಮಾಡಿದರೆ ಸ್ವಾಧ್ಯಾಯವೂ ಹೌದು. ಶ್ರದ್ಧಶೆಯಿಂದ ಭಗವದ್ಗೀತೆ ಓದಿದರೆ ವೇದ ಓದಿದ ಫಲ ಸಿಗುತ್ತದೆ ಎಂದರು.
ಗೀತೆಯ ಅಧ್ಯಾಯಕ್ಕೆ ಮಹತ್ವ ಇದೆ. ಗೀತೆಯ ಅರ್ಥ ತಿಳಿದು ಓದಿದರೆ ಪ್ರಶಸ್ತ. ಅರ್ಥ ಗೊತ್ತಿಲ್ಲದೇ ಓದಿದರೂ ಪ್ರಯೋಜನವಿದೆ. ಗೀತಾಸ್ವಾಧ್ಯಾಯವನ್ನು ತಿಲಕರು, ವಿನೋಬಾ ಬಾವೆ, ಗಾಂಧೀಜಿ ಅವರು ಸಮಯ ಸಿಕ್ಕಾಗ ಓದುತ್ತಿದ್ದರು. ಗೀತೆಯ ಪುಸ್ತಕ ಸಣ್ಣದಿದ್ದರೂ ಒಳಗೆ ಪ್ರವೇಶ ಮಾಡಿದರೆ ಅಲ್ಲೊಂದು ಪ್ರಪಂಚ ಇದೆ. ಗೀತೆ ತಾಯಿ ಅಂದಿದ್ದರು ಗಾಂಧೀಜಿ ಎಂದೂ ಉಲ್ಲೇಖಿಸಿದರು.
ಈ ವೇಳೆ ರತ್ನಾಕರ ಹೆಗಡೆ ಚಿಕ್ಕಡಿ, ರಾಮಚಂದ್ರ ಹೆಗಡೆ ಕಲ್ಲಾರೆಮನೆ, ಶ್ರೀಕಾಂತ ಹೆಗಡೆ ಅತ್ತಿಕಾರಗದ್ದೆ ಇತರರು ಇದ್ದರು.

Share This
300x250 AD
300x250 AD
300x250 AD
Back to top