Slide
Slide
Slide
previous arrow
next arrow

ಆಸ್ಪತ್ರೆ ಸಮಸ್ಯೆ ಬಗೆಹರಿಸಲು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

300x250 AD

ಹಳಿಯಾಳ: ತಾಲ್ಲೂಕು ಆಸ್ಪತ್ರೆಯಲ್ಲಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಕೆಂಪು ಸೇನೆ) ಆಶ್ರಯದಡಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ತಾಲ್ಲೂಕು ಆಸ್ಪತ್ರೆಯಲ್ಲಿ ಗುಣಮಟ್ಟದ ಔಷಧಿ ಮಾತ್ರೆಗಳು ವಿತರಣೆಯಾಗಬೇಕು. ನುರಿತ ಹೆರಿಗೆ ವೈದ್ಯರು ಹಾಗೂ ಮಕ್ಕಳ ವೈದ್ಯರನ್ನು ನೇಮಕ ಮಾಡಬೇಕು. ಸಣ್ಣಪುಟ್ಟ ವಿಷಯಕ್ಕೆ ರೋಗಿಗಳನ್ನು ಧಾರವಾಡ ಸಿವಿಲ್ ಆಸ್ಪತ್ರೆಗೆ ಶಿಫಾರಸ್ಸು ಮಾಡಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಯಲ್ಲಾಪುರ ನಾಕಾದಿಂದ ತಾಲ್ಲೂಕು ಆಸ್ಪತ್ರೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ದಲಿತ ಸಂಘಷÀð ಸಮಿತಿ (ಕೆಂಪು ಸೇನೆ)ಯ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ವಿ.ಬಿ.ರಾಮಚಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅನ್ನಪೂರ್ಣಾ ವಸ್ತ್ರದ ಕೆಂಪು ಸೇನೆಯು ಮನವಿ ಸಲ್ಲಿಸಿದರು. ಸಂಘದ ರಾಜ್ಯ ಉಪಾಧ್ಯಕ್ಷ ಸಿ.ಕೆ.ರವೀಂದ್ರನಾಥ, ಸಂಘಟನೆಯ ರಾಜ್ಯ ಕಾರ್ಯದರ್ಶಿ ವೀರಭದ್ರಗೌಡ, ರಾಜ್ಯ ಖಜಾಂಚಿ ಸುಬ್ಬಣ್ಣ, ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ ಮುರಳಿ, ಸಂಘದ ಮುಖಂಡರುಗಳಾದ ಚಂದ್ರಕಾoತ ಕಲಬಾವಿ, ಶಕೀಲ್ ಚೌಕಿದಾರ, ಗಣೇಶ್ ಅಂಬೋಲಿ, ರಾಜು ಕುರುಬರ, ನಾರಾಯಣ ಬೋಗುರ್ಕರ್, ಶಿವಾಜಿ ಮಂಗೇಶ್ವರ್, ಮೀನಾಕ್ಷಿ ಇರ್ಲಾ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಮೊದಲಾದವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top