ಶಿರಸಿ : ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಸಮಿತಿಗೆ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಅಧ್ಯಕ್ಷರಾಗಿ ಕಾರವಾರದ ಪ್ರದೀಪ ಎಸ್. ಗುನಗಿ, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಭಟ್ಕಳದ ತಿರುಮಲ ಎಚ್. ನಾಯ್ಕ, ಜಿಲ್ಲಾ ಉಪಾಧ್ಯಕ್ಷರುಗಳಾಗಿ ಮುಂಡಗೋಡ ತಾಲೂಕಿನ ಪಾಳಾದ ಚೆನ್ನವೀರ ಜಿ. ಹೀರೂರು, ಸಿದ್ದಾಪುರದ ಸುಬ್ರಾಯ ಜಿ. ನಾಯ್ಕ, ಜಿಲ್ಲಾ ಕಾರ್ಯದರ್ಶಿಯಾಗಿ ಗುಡ್ನಾಪುರ ರಾಘವೇಂದ್ರ ನಾಯ್ಕ, ಜಿಲ್ಲಾ ಸಹಕಾರ್ಯದರ್ಶಿಯಾಗಿ ಯಲ್ಲಾಪುರದ ಅನಂತ ಎಂ. ಹೆಗಡೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಹಳಿಯಾಳದ ವಿಶ್ವನಾಥ ಬೋದಪ್ಪನವರ ಹಾಗೂ ಶಿರಸಿಯ ರವೀಂದ್ರ ಎಲ್. ಭಟ್ ಇವರುಗಳು ಆಯ್ಕೆಯಾಗಿದ್ದಾರೆ ಎಂದು ನಿಕಟಪೂರ್ವ ಜಿಲ್ಲಾಧ್ಯಕ್ಷ ಮೋಹನ ಮಡಿವಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.