• Slide
    Slide
    Slide
    previous arrow
    next arrow
  • ಹೆಮ್ಮೆಯ ಟಿಎಸ್ಎಸ್ ವಿರುದ್ಧ ಅಪಪ್ರಚಾರ ಸಹಿಸಲ್ಲ; ಸದಸ್ಯರ ಆಕ್ರೋಶ

    300x250 AD

    ಶಿರಸಿ: ಈಗಿನ ಆಡಳಿತ ಮಂಡಳಿ ಹಾಗೂ ಪ್ರಧಾನ ವ್ಯವಸ್ಥಾಪಕರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಸಂಸ್ಥೆಯ ಬಗ್ಗೆ ಅಪಪ್ರಚಾರ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಮಾತೃ ಸಂಸ್ಥೆಗೆ ನೋವಾದರೆ‌ ನಾವು ನಿಷ್ಠಾವಂತ ಸದಸ್ಯರು ಸಹಿಸಲು ಸಾಧ್ಯವಿಲ್ಲ ಎಂದು ಟಿಎಸ್ಎಸ್ ಹಿರಿಯ ಸದಸ್ಯರ ಪರವಾಗಿ ನಾರಾಯಣ ಪರಮೇಶ್ವರ ಹೆಗಡೆ ಉಳ್ಳಾಲಗದ್ದೆ ಪ್ರತಿಪಾದಿಸಿದರು.

    ಶುಕ್ರವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ, ರಾಮಕೃಷ್ಣ ಹೆಗಡೆ ಕಡವೆ ಅವರ ನೇತೃತ್ವದಲ್ಲಿ ಸಂಸ್ಥೆ ಸುಭದ್ರವಾಗಿದೆ. ಕೆಲ ಪಟ್ಟಭದ್ರರು ಮಾತ್ರ ಅಪಪ್ರಚಾರ ಮಾಡುತ್ತಿದ್ದಾರೆ. ಅಗ್ಗದ ಪ್ರಚಾರ ನಡೆಸಿ ಮತದಾರರ ದಿಕ್ಕು ತಪ್ಪಿಸುತ್ತಿದ್ದಾರೆ‌ ಎಂದ ಅವರು, ಕೆಲವರು ಮಾತೃ ಸಂಸ್ಥೆ ಬಗ್ಗೆ ಅವಹೇಳನ ಮಾತುಗಳ‌ನ್ನು ಹಂಚುತ್ತಿದ್ದಾರೆ. ಈ ಸಂಸ್ಥೆಯಿಂದ ನಾವೆಲ್ಲ, ನಮ್ಮಂತೆ ಸಾವಿರಾರು ಕುಟುಂಬಗಳು ಜೀವನ ಕಟ್ಟುಕೊಂಡಿವೆ. ಕೆಲವರ ಹೇಳಿಕೆಗೆ ಮಾನಸಿಕ ನೊಂದು ಮತದಾರರ ಸದಸ್ಯರಲ್ಲಿ ಗೊಂದಲ ಆಗಬಾರದು ಎಂದು ಮಾಧ್ಯಮಗಳ ಎದುರು ಬಂದಿದ್ದಾಗಿ ತಿಳಿಸಿದರು. ಕೆಲವರು ಸುಳ್ಳು ಆರೋಪ ಮಾಡುತ್ತಲೇ ಮತ ಯಾಚನೆಗೆ ಕರ ಪತ್ರ ನೀಡಿ ಮನವಿ‌ ಮಾಡುತ್ತಿದ್ದಾರೆ. ಅದು ಸತ್ಯಕ್ಕೆ ದೂರ, ವಾಸ್ತವಿಕ ವಿಚಾರವಲ್ಲ.

    ಟಿಎಸ್ಎಸ್ ಕಾರ್ಯಾಧ್ಯಕ್ಷರಾದ ರಾಮಕೃಷ್ಣ ಹೆಗಡೆ ಅವರು ದುರ್ಬಲರು ಅಲ್ಲ‌‌. ಕಳೆದ ಮೂರು ವರ್ಷದಲ್ಲಿ ಆದ ಪ್ರಗತಿ ನೋಡಿದರೆ ಅರ್ಥ ಆಗುತ್ತದೆ. ನಷ್ಟದಲ್ಲಿದ್ದ ಟಿ.ಆರ್.ಸಿ. ಸಂಸ್ಥೆಯನ್ನು ಅವರು ಅಧ್ಯಕ್ಷರಾದ ಮೇಲೆ ಒಂದು ಕೋಟಿ ಲಾಭದೆಡೆಗೆ ಕೊಂಡೊಯ್ದಿದ್ದಾರೆ ಎಂದೂ ಪ್ರತಿಪಾದಿಸಿದರು.
    ಈ ವೇಳೆ ದತ್ತಾತ್ರಯ ‌ಕೃಷ್ಣ ಹೆಗಡೆ, ಕಮಲಾಕರ ನಾಯ್ಕ ಹಾರ್ಸಿಕಟ್ಟಾ, ಮಹಾಬಲೇಶ್ವರ ಗೋಳಿಕೊಪ್ಪ, ಶಶಿಧರ ಹೆಗಡೆ ಹಳದೋಟ, ರಮೇಶ ನಾಯ್ಕ, ಕೃಷ್ಣಮೂರ್ತಿ ಗುಡಿಗಾರ ಇತರರು ಇದ್ದರು.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top