ಯಲ್ಲಾಪುರ: ಇಲ್ಲಿನ ಎಪಿಎಂಸಿಯ ಅಡಿಕೆ ಭವನದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕಾಂದೂ ರವರ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾ ಮಟ್ಟದ ಜುಲೈ ತಿಂಗಳ ಪ್ರಗತಿ ಪರಿಶೀಲನಾ ಸಭೆಯ ಜರುಗಿತು.
ಸಭೆಯಲ್ಲಿ ಸಿಬ್ಬಂದಿ ವೇತನ ಪಾವತಿ, ಸ್ವಚ್ಛ ಭಾರತ ಮಿಷನ್‌ಡಿ ವೈಯಕ್ತಿಕ ಹಾಗೂ ಸಮುದಾಯ ಶೌಚಾಲಯ, ಘನ ತ್ಯಾಜ್ಯ ವಿಲೇವಾರಿ ಘಟಕ, ಶೌಚ ತ್ಯಾಜ್ಯ ನಿರ್ವಹಣೆ, ಬೂದು ನೀರು ನಿರ್ವಹಣಾ ಘಟಕ ಎಂಆರ್‌ಎಫ್ ಘಟಕ ನಿರ್ಮಾಣ, ನಿರ್ಮಾಣ, ಮಹಾತ್ಮಗಾಂಧಿ ನರೇಗಾದಡಿ ಮಾನವ ದಿನಗಳ ಸೃಜನೆ, ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಹೆಚ್ಚಳ, ಕೂಸಿನ ಮನೆ ಸ್ಥಾಪನೆ, ಎನ್‌ಆರ್‌ಎಲ್‌ಎಂ ವರ್ಕ್ ಶೆಡ್ ಸೇರಿದಂತೆ ಮಾದರಿ ಕಾಮಗಾರಿಗಳ ಸಮರ್ಪಕ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲಿಸಿದರು.
ಜೊತೆಗೆ ವಸತಿ ಯೋಜನೆಯಲ್ಲಿ ಈವರೆಗೆ ಪ್ರಾರಂಭವಾಗದೇ ಇರುವ ಮನೆಗಳ ನಿರ್ಮಾಣದ ಮಾಹಿತಿ ಕ್ರೋಢೀಕರಣ, ಮಂಜೂರಿ ಇರುವ ವಿವಿಧ ಹಂತಗಳ ಮನೆಗಳನ್ನು ಆದ್ಯತೆಯ ಮೇರೆಗೆ ಮುಕ್ತಾಯಗೊಳಿಸುವ ಕುರಿತು ಕ್ರಮ ವಹಿಸಲು ಸೂಚಿಸಿದರು. ತೆರಿಗೆ ಪರಿಷ್ಕರಣೆ ಹಾಗೂ ಸಂಗ್ರಹಣೆ, ಪಿಒಎಸ್ ಮತ್ತು ಜೆಜೆಎಂ ಪ್ರಗತಿ ಬಗ್ಗೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ನ ಆಡಳಿತ ಶಾಖೆಯ ಉಪ ಕಾರ್ಯದರ್ಶಿಗಳಾದ ನಾಗೇಶ ರಾಯ್ಕರ್, ಮುಖ್ಯ ಯೋಜನಾಧಿಕಾರಾದ ವಿನೋದ ಅಣ್ವೇಕರ, ಲೆಕ್ಕಾಧಿಕಾರಿಗಳಾದ ಆನಂದ ಹಬಿಬ್, ಯೋಜನಾ ನಿರ್ದೇಶಕರು(ಡಿಆರ್‌ಡಿಎ) ಕರೀಂ ಅಸದಿ, ಅಭಿವೃದ್ಧಿ ಶಾಖೆಯ ಸಹಾಯಕ ಕಾರ್ಯದರ್ಶಿ ಜೆ.ಆರ್. ಭಟ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲಾ ತಾಲೂಕಿನ ಆರ್‌ಡಬ್ಯ್ಲೂಎಸ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಎಲ್ಲಾ ತಾಲೂಕಿನ ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರುಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.