Slide
Slide
Slide
previous arrow
next arrow

ಸ್ವಾತಂತ್ರ್ಯ ದಿನಾಚರಣೆ: ಬೊಮ್ಮಯ್ಯ ಮಾಸ್ತರರಿಗೆ ಸನ್ಮಾನ

300x250 AD


ಅಂಕೋಲಾ: ಸಮರ್ಪಣ ವಿಶ್ರಾಂತ ಶಿಕ್ಷಕರ ಬಳಗದಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ 96 ವರ್ಷದ ಹಿರಿಯ ಶಿಕ್ಷಕ ಬೊಮ್ಮಯ್ಯ ಮಾಸ್ತರ ತೆಂಕಣಕೇರಿ ಇವರನ್ನು ಅವರ ಮನೆಯಂಗಳದಲ್ಲಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸುತ್ತ ಬೊಮ್ಮಯ್ಯ ಮಾಸ್ತರರು ತಮ್ಮ ಸೇವೆಯ ಎಲ್ಲ ಶಾಲೆಗಳ ವಿವರಗಳನ್ನು ದಿನಾಂಕ ಸಹಿತ ಹೇಳುವ ರೀತಿ ಅವರ ನೆನಪಿನ ಶಕ್ತಿಗೊಂದು ಸವಾಲಿನಂತಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ನಾಯಕ ವಹಿಸಿದ್ದು, ಶಿಕ್ಷಕರಾದ ಎಲ್.ವಿ.ಗೌಡ ಮತ್ತು ರಘುವೀರ ಎನ್. ನಾಯಕ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿದರು. ಕಾರ್ಯದರ್ಶಿ ರಮೇಶ ಬಿ. ನಾಯಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬೀರಣ್ಣ ಎಸ್. ನಾಯಕ ಪಾಂಡುರಂಗ ಬಿ. ನಾಯಕ, ಹೊನ್ನಪ್ಪ ಎನ್. ನಾಯಕ ಮಾತನಾಡಿದರು. ಗಣಪತಿ ಟಿ. ನಾಯಕ, ಅಚ್ಚುತ ಆರ್. ನಾಯಕ, ನಾರಾಯಣ ಎಲ್. ನಾಯಕ ಸೂರ್ವೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ನಾಗೇಶ ಬಿ. ನಾಯಕ ಕಾರ್ಯಕ್ರಮ ನಿರೂಪಿಸಿದರು. ಗೋಪಾಲ ಆರ್. ನಾಯಕ ಬಾಸಗೋಡ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top