Slide
Slide
Slide
previous arrow
next arrow

ಈಡಿಗ ಸಮಾಜದವರು ರಾಜಕೀಯವಾಗಿ ತಳಮಟ್ಟದಿಂದಲೇ ಸಂಘಟನಾತ್ಮಕವಾಗಿ ಬೆಳೆಯಬೇಕು: ಡಿ.ಜಿ.ನಾಯ್ಕ

300x250 AD

ಅಂಕೋಲಾ: ಈಡಿಗ ಸಮಾಜದವರು ರಾಜಕೀಯವಾಗಿ ತಳಮಟ್ಟದಿಂದಲೇ ಸಂಘಟನಾತ್ಮಕವಾಗಿ ಬೆಳೆಯಬೇಕು. ಎಸ್. ಬಂಗಾರಪ್ಪ ಅವರ ಕಾಲಘಟ್ಟದಲ್ಲಿ ಕನಿಷ್ಟ 10 ಶಾಸಕರಿಗಿಂತ ಹೆಚ್ಚಿರುತ್ತಿದ್ದರು. ಆದರೆ ಈಗ ಗಣನೀಯವಾಗಿ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ 4ನೇ ಸಂಖ್ಯೆಯಲ್ಲಿರುವ ಈಡಿಗರು ರಾಜಕೀಯವಾಗಿ ಬೆಳೆಯಬೇಕಾದ ಅನಿವಾರ್ಯತೆ ಇದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ ಅಧ್ಯಕ್ಷ ಡಿ.ಜಿ.ನಾಯ್ಕ ಹೇಳಿದರು.

ಪಟ್ಟಣದ ಪಿ.ಎಂ.ಹೈಸ್ಕೂಲ್ ರೈತ ಭವನದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯವರು ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾದವರಿಗೆ ಸನ್ಮಾನಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ಸಮಾಜದ ಮೇಲೆ ಗೌರವವನ್ನು ಹೊಂದಿ ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದರು. ಗೌರವಾಧ್ಯಕ್ಷ ಮಾದೇವ ಎಂ. ನಾಯ್ಕ ಮಾತನಾಡಿ, ತಾಲೂಕಿನ 21 ಗ್ರಾಮ ಪಂಚಾಯಿತಿಗಳ ಪೈಕಿ ಈಡಿಗ ಸಮುದಾಯದ ಇಬ್ಬರು ಮಾತ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಅಧ್ಯಕ್ಷರಾಗುವುದು ಕೂಡ ಪ್ರಸ್ತುತ ಕಾಲಘಟ್ಟದಲ್ಲಿ ಹರಸಾಹಸ ಪಡಬೇಕಾಗಿದೆ ಎಂದರು.

300x250 AD

ಈ ಸಂದರ್ಭದಲ್ಲಿ ಸಗಡಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರವಣಕುಮಾರ ಮುಕುಂದ ನಾಯ್ಕ, ಹೊನ್ನೆಬೈಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟ್ರಮಣ ಕೋನಪ್ಪ ನಾಯ್ಕ ಸನ್ಮಾನಿಸಲಾಯಿತು. ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಉಪಾಧ್ಯಕ್ಷರಾದ ಸಂಜಯ ಆರ್. ನಾಯ್ಕ, ರಮೇಶ ಎನ್. ನಾಯ್ಕ ಬೊಬ್ರುವಾಡ ಮಾತನಾಡಿದರು.
ಯುವ ಅಧ್ಯಕ್ಷ ಮಂಜುನಾಥ ಕೆ. ನಾಯ್ಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾಗರಾಜ ಎಂ. ನಿರ್ವಹಿಸಿದರು. ರಮೇಶ ಎಸ್. ನಾಯ್ಕ ತೆಂಕಣಕೇರಿ ವಂದಿಸಿದರು. ಪದಾಧಿಕಾರಿಗಳಾದ ಉಮೇಶ ನಾಯ್ಕ, ಮಂಜುಳಾ ನಾಯ್ಕ, ಲೀಲಾವತಿ ನಾಯ್ಕ, ರಾಘವೇಂದ್ರ ನಾಯ್ಕ ಕೊಂಡಳ್ಳಿ, ಶ್ರೀಪಾದ ನಾಯ್ಕ ಇತರರಿದ್ದರು.

Share This
300x250 AD
300x250 AD
300x250 AD
Back to top