ಕುಮಟಾ: ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ ಸರಸ್ವತಿ ಪದವಿಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳು 2022-23 ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ಕುಮಟಾ ತಾಲ್ಲೂಕಿಗೆ ಎರಡು ವಿಭಾಗದಲ್ಲಿ ಮೊದಲ ಮೂರು ಸ್ಥಾನ ಗಳಿಸಿದಕ್ಕಾಗಿ ಮಣಕಿ ಮೈದಾನದಲ್ಲಿ ತಾಲ್ಲೂಕಾ ಆಡಳಿತದಿಂದ ನಡೆದ 77 ನೇ ಸ್ವಾತಂತ್ರ್ಯೋತ್ಸವ ಆಚರಣಾ ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಟ್ಟರು.
ವಿಜ್ಞಾನ ವಿಭಾಗದಲ್ಲಿ ಕು. ರಂಜನಾ ಮಡಿವಾಳ ರಾಜ್ಯಕ್ಕೆ 9ನೇ ಸ್ಥಾನ ಮತ್ತು ತಾಲ್ಲೂಕಿಗೆ ಪ್ರಥಮ ಸ್ಥಾನ, ಕು. ಪ್ರಾಪ್ತಿ ನಾಯಕ ಮತ್ತು ಕು. ಶ್ರೀನಂದಾ ದಿಂಡೆ ದ್ವಿತೀಯ ಸ್ಥಾನ, ಕು. ಶ್ರೀಜನಿ ಭಟ್ ತೃತೀಯ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಕು. ಶ್ರೀಲಕ್ಷ್ಮಿ ಶೆಟ್ಟಿ ರಾಜ್ಯಕ್ಕೆ 10 ನೇ ಸ್ಥಾನ ಮತ್ತು ತಾಲ್ಲೂಕಿಗೆ ಪ್ರಥಮ ಸ್ಥಾನ, ಕು. ಮೆಹರ್ ನಿಯಾಜ್ ಸಯ್ಯದ್ ದ್ವಿತೀಯ ಸ್ಥಾನ, ಕು. ರೋಶನಿ ನಾಯಕ ತೃತೀಯ ಸ್ಥಾನ ಗಳಿಸಿ ಕುಮಟಾ ತಾಲ್ಲೂಕಿಗೆ ಹಾಗೂ ಕಾಲೇಜಿಗೆ ಕೀರ್ತಿಯನ್ನು ತಂದಿರುವುದಕ್ಕಾಗಿ ತಾಲ್ಲೂಕಾ ಆಡಳಿತದಿಂದ ಸನ್ಮಾನ ಸ್ವೀಕರಿಸಿದರು.
ವಿದ್ಯಾರ್ಥಿಗಳ ಈ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದಕ್ಕಾಗಿ ಸಂಸ್ಥೆಯ ಪರವಾಗಿ ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಗುರುರಾಜ ಶೆಟ್ಟಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಕಿರಣ ಭಟ್ಟ ಮತ್ತು ಎಲ್ಲಾ ಉಪನ್ಯಾಸಕ ವೃಂದದವರು ಕುಮಟಾ ತಾಲ್ಲೂಕಾ ಆಡಳಿತ ಮಂಡಳಿಗೆ ಮತ್ತು ಎಲ್ಲಾ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.