ಶಿರಸಿ: 77ನೇ ಸ್ವಾತಂತ್ರ‍್ಯೋತ್ಸವದ ನಿಮಿತ್ತ ಶಿರಸಿಯ ಅರವಿಂದ ಅಭ್ಯಾಸ ಮಂಡಳಿ ಹಮ್ಮಿಕೊಂಡ ಮಹರ್ಷಿ ಅರವಿಂದರ ಜನ್ಮದಿನೋತ್ಸವ ಪ್ರಯುಕ್ತ ಶ್ರೀ ಮಾಧವ ಪಂಡಿತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕು. ನಿಧಿಪ್ ಹೆಗಡೆ, ಕು. ದಿಗಂತ್ ಭಟ್,ಕು. ಭಾರ್ಗವ್ ಹೆಗಡೆ, ಕು.ದರ್ಶನ್ ವಿ. ಎನ್. ಹಾಗೂ ಕು. ಚಿನ್ಮಯ್ ಹೆಗಡೆ ಕೆರೆಗದ್ದೆ ಇವರು ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎಚ್ ಆರ್ ಅಮರನಾಥ್ ಬರೆದ ‘ಶ್ರೀಮತಿ ಸ್ವಯಂವರ’ ಎಂಬ ಕಿರು ನಾಟಕವನ್ನು ಅಭಿನಯಿಸಿದರು. ಮಾಧವ ದರ್ಶನದ ಹೂರಣ ಒಳಗೊಂಡ ಈ ಕಿರುನಾಟಕ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಮುಕ್ತಾ ನಾಯ್ಕ್ ನಿರ್ದೇಶಿಸಿದ ಈ ಕಿರು ನಾಟಕದ ಪಾತ್ರಧಾರಿಗಳಿಗೆ ಶ್ರೀಮತಿ ಲಕ್ಷ್ಮಿ ಪ್ರದೀಪ್ ವಸ್ತ್ರಾಲಂಕಾರ ಮಾಡಿದರು.
ಲಯನ್ಸ ಶಾಲಾ ಮಕ್ಕಳಿಂದ ನಾಟಕ ಪ್ರದರ್ಶನ
