Slide
Slide
Slide
previous arrow
next arrow

ಸಂಧ್ಯಾ ಕಾಲದಲ್ಲಿ ಪೂಜೆ, ಸ್ತೋತ್ರ ಪಠಣ, ಯೋಗಾಸನ ಮಾಡಿ: ಸ್ವರ್ಣವಲ್ಲೀ ಶ್ರೀ ಆಶಯ

300x250 AD

ಶಿರಸಿ: ಪ್ರತಿಯೊಬ್ಬರು ದಿನವೂ ಸಂಧ್ಯಾ ಕಾಲದಲ್ಲಿ ಪೂಜೆ, ಸ್ತೋತ್ರ ಪಠಣ, ಪ್ರಾಣಾಯಾಮ, ಯೋಗಾಸನ ಮಾಡಬೇಕು. ಇದರಿಂದ ವ್ಯವಹಾರ, ಆರೋಗ್ಯ ಎಲ್ಲವೂ ಪ್ರಗತಿ ಸಾಧಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ, ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ನುಡಿದರು.

ಅವರು ಸ್ವರ್ಣವಲ್ಲೀಯಲ್ಲಿ ಶ್ರೀಗಳು ಚಾತುರ್ಮಾಸ್ಯ ವೃತಾಚರಣೆಯ ಹಿನ್ನಲೆಯಲ್ಲಿ ಚಿನ್ನಾಪುರ ಸೀಮೆಯ ಮೇಲ್ತರ್ಪು, ಕೆಳತರ್ಪಿನ ಶಿಷ್ಯ ಭಕ್ತರು ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು.

ಬಹಳಷ್ಟು ಜನರಿಗೆ ಅವರ ಆರೋಗ್ಯ ಹಾಳಾಗಲು ಸಂಧ್ಯಾ ಕಾಲದಲ್ಲಿ ದೇವರ ಪೂಜೆ, ಸ್ತೋತ್ರ ಪಠಣ, ಸಹಸ್ರನಾಮ, ಪ್ರಾಣಾಯಾಮ, ಯೋಗಾಸನ ಮಾಡದೇ ಇರುವದೇ ಕಾರಣ. ಪ್ರಾಣಾಯಾಮ, ಆಸನ, ಪೂಜೆ ದಿನದ ಎರಡೂ ಕಾಲದಲ್ಲಿ ಮಾಡಬೇಕು ಎಂದು ಹೇಳಿದರು.
ಬೆಳಗಿನ ಹಾಗೂ ಸಾಯಂಕಾಲ ವೇಳೆಯಲ್ಲಿ ಸೂರ‍್ಯೋದಯ, ಸೂರ‍್ಯಾಸ್ತದ ಕಾಲವೇ ಸಂಧ್ಯಾ ಕಾಲಗಳು. ಇವು ದೇವರ ಪೂಜೆ, ಜಪ, ಅನುಷ್ಠಾನಕ್ಕೆ ಪ್ರಶಸ್ತವಾದ ಕಾಲ. ಈ ವೇಳೆಯಲ್ಲಿ ಪೂಜೆ, ಸ್ತೋತ್ರ ಪಠಣ, ಪ್ರಾಣಾಯಾಮ, ಯೋಗಾಸನ ಮಾಡಿದರೆ ಹೆಚ್ಚು ಫಲ ಎಂದ ಶ್ರೀಗಳು, ಮನಸ್ಸು ದೇವರಲ್ಲಿ ಏಕಾಗೃತೆಗೊಳ್ಳುವದು ಸಂಧ್ಯಾ ಕಾಲದಲ್ಲಿ ಹೆಚ್ಚು. ಒಂದೊಂದು ಕಾಲವು ಈ ದೇಹದ ಮೇಲೆ ಬೇರೆ ಬೇರೆ ಪರಿಣಾಮ ಉಂಟು ಮಾಡುತ್ತದೆ. ಅದು ಮನಸ್ಸಿನ ವರ್ತನೆಗೂ ಕಾರಣವಾಗುತ್ತದೆ. ಸಂಧ್ಯಾ ಕಾಲದಲ್ಲಿ ಏಕಾಗೃತೆಗೆ ಅನುಕೂಲತೆಗೆ ಇರುತ್ತದೆ. ಆದ್ದರಿಂದಲೇ ಸಂಧ್ಯಾ ವಂದನೆ ಎಂಬುದು ಬಂದಿದೆ ಎಂದು ವಿವರಿಸಿದರು.

300x250 AD

ಬೆಳಗಿನ ಪೂಜೆ ಇಡೀ ದಿನದ ವ್ಯವಹಾರದ ಮೇಲೆ ಒಳ್ಳೆಯ ಪರಿಣಾಮ ಆಗುತ್ತದೆ. ನಮ್ಮ ಮನಸ್ಥಿಯತಿ ಉತ್ತಮ ಆಗಿರುತ್ತದೆ. ವ್ಯವಹಾರ ಮಾಡಲು ಚುರುಕು ತನ ಬರುತ್ತದೆ. ನೀವು ಹೇಳುವಂತೆ ಒಳ್ಳೆಯ ಮೂಡ್ ಬಂದಿರುತ್ತದೆ. ಸಾಯಂಕಾಲ ಮಾಡಿದರೆ ಏನು ಪ್ರಯೋಜನ? ಎಂದು ಕೇಳಬಹುದು. ವ್ಯವಹಾರ, ಓಡಾಟ ಇಲ್ಲ ಎಂದು ಹೇಳಬಹುದು. ಆದರೂ ಸಾಯಂಕಾಲವೂ ಜಪ, ಅನುಷ್ಠಾನ ಮಾಡಬೇಕು. ಹಗಲಿನ ಪ್ರಯೋಜನಕ್ಕಿಂತ ಅಮೂಲ್ಯ ಪ್ರಯೋಜನ ಸಾಯಂಕಾಲದ ಸಂಧ್ಯಾ ಕಾಲದಲ್ಲಿ ಉತ್ತಮ ಪ್ರಯೋಜನ ಇದೆ. ಸಂಜೆ ಮಾಡಿದರೆ ಉತ್ತಮವಾದ ನಿದ್ದೆ ಬರುತ್ತದೆ. ನಿದ್ದೆ ಸಮರ್ಪಕವಾಗಿ ಬಾರದೇ ಇದ್ದರೆ ಮಾನಸಿಕ, ದೈಹಿಕ ಸಮಸ್ಯೆಗಳು ಆಗುತ್ತದೆ. ನಿದ್ರಾ ಹೀನತೆ ತಪ್ಪಲು ಸಂಜೆಯ ಸಂಧ್ಯಾ ಕಾಲದ ಜಪಾನುಷ್ಠಾನ ನೆರವಾಗುತ್ತದೆ. ಇದು ನಿದ್ದೆ ಮೇಲೆ ಪರಿಣಾಮ ಬೀಳುತ್ತದೆ ಎಂದರು.

ಪ್ರತಿಯೊಂದು ಜೀವಿಗಳ ಮನಸ್ಸೂ ಗಾಢ ನಿದ್ರೆಯಲ್ಲಿ ಪರಮಾತ್ಮನ ಸಾನ್ನಿಧ್ಯಕ್ಕೆ ಹೋಗುತ್ತವೆ. ಗಾಢ ನಿದ್ದೆಗೆ ಸಂಧ್ಯಾ ಕಾಲಪದ ದೇವರ ಧ್ಯಾನ ನೆರವಾಗುತ್ತದೆ. ದಿನದ 24ಗಂಟೆಯಲ್ಲಿ 6 ಗಂಟೆ ನಿದ್ದೆ ಬಂದರೆ ಸಾಕು. ಅದರಲ್ಲಿ 2 ತಾಸಾದರೂ ಗಾಢವಾದ ನಿದ್ದೆ ಬೇಕು. ಆ ನಿದ್ದೆಗೆ ಹೋಗದೇ ಇದ್ದರೆ ಮಾನಸಿಕ ದೈಹಿಕ ಆರೋಗ್ಯ ಹದಗೆಡುತ್ತದೆ. ಗಾಢ ನಿದ್ದೆಗೆ ಹೋಗಲು ಸಂಧ್ಯಾ ಕಾಲದ ದೇವರ ಧ್ಯಾನ, ಸ್ಮರಣೆ ಮಾಡಬೇಕು ಎಂದ ಶ್ರೀಗಳು, ಈ ಪ್ರಯೋಜನದ ಅನುಭವ ಎಲ್ಲರಿಗೂ ಬರಬೇಕು. ಆರೋಗ್ಯ, ವ್ಯವಹಾರದ ಉನ್ನತಿ ಎಲ್ಲರಲ್ಲೂ ಆಗಬೇಕು ಎಂದು ಆಶಿಸಿದರು.
ಈ ವೇಳೆ ದತ್ತಾತ್ರೇಯ ಹೆಗಡೆ ಕಣ್ಣಿಪಾಲ್, ನಾರಾಯಣ ಹೆಗಡೆ ಬೀಗಾರ, ತಿಮ್ಮಣ್ಣ ಭಟ್ಟ ನಡಿಗೆಮನೆ, ರವೀಂದ್ರ ಕೋಮಾರ್ ಸೂತ್ರೆಮನೆ, ಶ್ರೀಪಾದ ಭಟ್ಟ ಕಳಚೆ, ಆರ್.ಎಸ್.ಹೆಗಡೆ ಭೈರುಂಬೆ ಇತರರು ಇದ್ದರು.

Share This
300x250 AD
300x250 AD
300x250 AD
Back to top