• Slide
    Slide
    Slide
    previous arrow
    next arrow
  • ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ: ಉತ್ಸವದ ಲಾಭ ರೈತರಿಗೆ ಎಂದ ಸುರೇಶ್ಚಂದ್ರ ಕೆಶಿನ್ಮನೆ

    300x250 AD

    ಶಿರಸಿ: ಹಾಲು ಹಾಗೂ ಹಾಲಿನ ಉತ್ಪನ್ನಗಳ ಮೂಲಕ ಜನಪ್ರಿಯವಾದ ನಂದಿನಿಯ ಒಂದು ತಿಂಗಳ ಸಿಹಿ ಉತ್ಸವಕ್ಕೆ ಇಲ್ಲಿಯ ಅಶ್ವಿನಿ ವೃತ್ತದಲ್ಲಿರುವ ಕೆಎಂಎಫ್ ನಂದಿನ ಪಾರ್ಲರ್‌ನಲ್ಲಿ ಸಹಾಯಕ ಆಯುಕ್ತ ದೇವರಾಜ್ ಆರ್ ಚಾಲನೆ ನೀಡಿದರು. ಈ ಸಿಹಿ ಉತ್ಸವದಲ್ಲಿ ಸುಮಾರು 80ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳನ್ನು ಶೇ.20ರಷ್ಟು ರಿಯಾಯಿತಿ ಮಾರಾಟ ಮಾಡಲಾಗುತ್ತದೆ.

    ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಆಯುಕ್ತ ದೇವರಾಜ್ ಆರ್., ನಂದಿನ ನೆನಪಾದಾಗಲೆಲ್ಲಾ ಪುನೀತ ರಾಜಕುಮಾರ ಅವರ ನೆನಪಾಗುತ್ತದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಈ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು ಎಂದ ಅವರು, ಯಾವುದೇ ಕಲಬೆರಕೆ ಇಲ್ಲದ ನಂದಿನ ಉತ್ಪನ್ನ ಬಳಸಿದರೆ ಆರೋಗ್ಯಕ್ಕೂ ಒಳ್ಳೆಯದು, ಸರಕಾರದ ಉದ್ಯಮದ ಬೆಳವಣಿಗೆಯು ಆಗುತ್ತದೆ. ಉದ್ಯೋಗವೂ ದೊರೆಯುತ್ತದೆ ಎಂದರು.

    ಧಾರವಾಡ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ನಂದಿನಿ ಸಿಹಿ ಉತ್ಸವ ಒಂದು ತಿಂಗಳು ಕಾಲ ನಡೆಯಲಿದೆ. ಈ ಸಿಹಿ ಉತ್ಸವದಲ್ಲಿ ಆಗುವ ವ್ಯಾಪಾರದ ಲಾಭವನ್ನು ರೈತರಿಗೆ ಹಸ್ತಾಂತರಿಸಲಾಗುತ್ತದೆ ಎಂದ ಅವರು ಜಿಲ್ಲೆಯಲ್ಲಿ ಸುಮಾರು 30ಲಕ್ಷ ರೂ.,ಮೊತ್ತದ ಹಾಲು ಹಾಗೂ ಹಾಲಿನ ಉತ್ಪನ್ನಗಳು ನಿತ್ಯ ವ್ಯಾಪಾರವಾಗುತ್ತದೆ ಎಂದರು.

    300x250 AD

    ಈ ವೇಳೆ ಡಿವೈಎಸ್‌ಪಿ ಗಣೆಶ ಕೆ.ಎಲ್, ತಹಸೀಲ್ದಾರ ಶ್ರೀಧರ ಮುಂದಲಮನಿ, ನಂದಿನ ಪಾರ್ಲರ್‌ನ ಪ್ರಮುಖ ಗಜಾನನ ಹೆಗಡೆ, ಧಾರವಾಡ ಹಾಲು ಒಕ್ಕೂಟದ ಬಿಜ್ಜೂರು, ಬಸವರಾಜ, ಶರಣು ಮೆಣಸಿನಕಾಯಿ, ಕೃಷ್ಣ ಇತರರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top