• Slide
    Slide
    Slide
    previous arrow
    next arrow
  • ಸ್ವಾತಂತ್ರ್ಯೋತ್ಸವ: ಲಯನ್ಸ ಶಾಲೆಯಲ್ಲಿ ವಿಶೇಷ ಅಂಚೆ ಚೀಟಿ ಪ್ರದರ್ಶನ

    300x250 AD

    ಶಿರಸಿ: 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟ ಸೈನ್ಯ ಸೇವೆ ಹಾಗೂ ಸಾಧನೆಗಳ ವಿವರ ಹೊಂದಿದ ವಿಶೇಷ ಅಂಚೇಚೀಟಿ ಪ್ರದರ್ಶನವನ್ನು ಶಿರಸಿ ಲಯನ್ಸ ಕ್ಲಬ್, ಲಿಯೋಕ್ಲಬ್ ಶಿರಸಿ, ಶಿರಸಿ ಲಯನ್ಸ ಎಜುಕೆಷನ್ ಸೊಸೈಟಿ ಶಿರಸಿ ಲಯನ್ಸ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.

    ಶಿರಸಿಯ ಪ್ರಖ್ಯಾತ ಅಂಚೇಚೀಟಿ ಸಂಗ್ರಾಹಕರಾದ ಪ್ರೊ. ನರಸಿಂಹ ಮೂರ್ತಿ ಮತ್ತು ಸುಬೇದಾರ್ ರಾಮು.ಇ ಅವರಿಂದ ಸಂಗ್ರಹಣೆ, ವಿವರಣೆ ಮತ್ತು ಮಾರ್ಗದರ್ಶನವನ್ನು ಆಯೋಜಿಸಲಾಗಿದೆ. ಶಿರಸಿ ಲಯನ್ಸ ಶಾಲೆಯ ಫಿಲೆಟಲಿ ಕ್ಲಬ್ ವಿದ್ಯಾರ್ಥಿಗಳು ಮಾರ್ಗದರ್ಶಿ ಶಿಕ್ಷಕರಾದ ಶ್ರೀಮತಿ ಮುಕ್ತಾ ನಾಯ್ಕ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದ್ದು, ಆ. 15ರ ಬೆಳಿಗ್ಗೆ 7.30ಕ್ಕೆ ಶಿರಸಿ ಲಯನ್ಸ ಕ್ಲಬ್ ಅಧ್ಯಕ್ಷರಾದ ಎಂ.ಜೆ.ಎಫ್. ಲಯನ್‌ ಅಶೊಕ ಹೆಗಡೆ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಆಸಕ್ತ ಶಿರಸಿಯ ನಾಗರೀಕರು, ವಿದ್ಯಾರ್ಥಿಗಳು ಈ ಪ್ರದರ್ಶನದ ಪ್ರಯೋಜನ ಪಡೆಯಬಹುದು ಎಂದು ಲಯನ್ಸ್ ಸಮೂಹ ಶಾಲೆ ಹಾಗೂ ಕಾಲೇಜುಗಳ ಪ್ರಾಂಶುಪಾಲ ಶಶಾಂಕ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top