ಯಲ್ಲಾಪುರ: ಸಾರಾಯಿ ಜೊತೆ ಕಳೆನಾಶಕ ಸೇವಿಸಿ ರೋಗಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಹೊಸಳ್ಳಿಯಲ್ಲಿ ನಡೆದಿದೆ.
ಗ್ರಾಮದ ಲೂಯಿಸ್ ಬಸ್ತ್ಯಾಂವ್ ಫರ್ನಾಂಡಿಸ್ (80) ಎನ್ನುವಾತ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮೃತ ವ್ಯಕ್ತಿ ಸಾರಾಯಿ ಜೊತೆ ಕಳೆನಾಶಕ ಸೇವಿಸಿದ್ದು ಮೃತಪಟ್ಟಿದ್ದಾನೆ. 6 ತಿಂಗಳ ಹಿಂದೆ ಅವರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಆರೋಗ್ಯ ಸುಧಾರಿಸಿರಲಿಲ್ಲ. ಇದಲ್ಲದೇ ಜೊತೆಗೆ ವಿಪರೀತ ಸಾರಾಯಿ ಕುಡಿಯುತ್ತಿದ್ದು, ಅದರ ಜೊತೆ ಕಳೆನಾಶಕ ಸೇವಿಸಿದ್ದರಿಂದ ಅಸ್ವಸ್ಥನಾಗಿದ್ದ ಲೂಯಿಸ್ ನನ್ನಆಸ್ವತ್ರೆಗೆ ಸೇರಿಸಲಾದರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ