Slide
Slide
Slide
previous arrow
next arrow

ನಿದ್ದೆಗೆಡಿಸಿದ್ದ ಬೈಕ್ ಕಳ್ಳ ಪೋಲೀಸರ ಬಲೆಗೆ

300x250 AD

ಅಂಕೋಲಾ :  ಸರಣಿ ಬೈಕ್ ಕಳ್ಳತನ ಮಾಡಿ ತಾಲೂಕಿನ ಜನತೆಯ  ನಿದ್ದೆಗೆಡಿಸಿದ್ದ ಆರೋಪಿಯನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸುವ ಮೂಲಕ ನಡೆಯುತ್ತಿದ್ದ  ಬೈಕ್ ಕಳ್ಳತನದ ಆತಂಕಕ್ಕೆ ತೆರೆ ಎಳೆದಿದ್ದಾರೆ.

ಬೈಕ್ ಕಳ್ಳತನ ನಡೆಸುತ್ತಿದ್ದ ಆರೋಪದ ಮೇಲೆ ಉಡುಪಿ ಜಿಲ್ಲೆಯ ಕಂಬದಕೋಣ, ಬೋಳಂಬಳ್ಳಿಯ ರಂಜೀತ ರಾಮಚಂದ್ರ ಪೂಜಾರಿ (23 ) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಜುಲೈ 30 ರಂದು ತಾಲೂಕಿನ ವಂದಿಗೆಯ ರಾಜೇಶ ಶಿವಾನಂದ ಶೆಟ್ಟಿ ಅವರ ಮನೆಯ ಮುಂದೆ ನಿಲ್ಲಿಸಿಟ್ಟ ಹೊಂಡಾ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಉಕ ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ವಿಷ್ಣುವರ್ಧನ ಅವರು ಪ್ರಕರಣವನ್ನು ಪತ್ತೆ ಮಾಡಲೆಬೇಕು ಎಂಬ ಉದ್ದೇಶದಿಂದ ವಿಶೇಷ ತಂಡವನ್ನು ರಚಿಸಿ ನಿರ್ದೇಶನ ನೀಡಿದ್ದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ ಟಿ, ಜಯಕುಮಾರ ಹಾಗೂ ಕಾರವಾರ ಉಪವಿಭಾಗದ ಪೊಲೀಸ ಉಪಾಧೀಕ್ಷಕ  ವೆಲೆಂಟಿನ ಡಿಸೋಜಾ ಅವರ ಮಾರ್ಗದರ್ಶನದಂತೆ, ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ ನಿರೀಕ್ಷಕ ಸಂತೋಷ ಶೆಟ್ಟಿ ಅವರ ನೇತೃತ್ವದದಲ್ಲಿ ಠಾಣೆಯ ಪಿಎಸೈಗಳಾದ   ಉದ್ದಪ್ಪ ಧರೆಪ್ಪನವರ ಮತ್ತು ಜಯಶ್ರೀ ಪ್ರಭಾಕರ, ಸಿಬ್ಬಂದಿಗಳಾದ ವೆಂಕಟ್ರಮಣ ನಾಯ್ಕ, ಶ್ರೀಕಾಂತ ಕಟಬರ, ಮನೋಜ್ ಡಿ. ಕಾರ್ಯಾಚರಣೆಯಲ್ಲಿದ್ದರು.

300x250 AD

ಆರೋಪಿತ ರಂಜೀತನು ಜುಲೈ 30  ರಂದು ತನ್ನ ಸ್ನೇಹಿತನೊಂದಿಗೆ ಸೇರಿ ಕಳ್ಳತನ ಮಾಡಿಕೊಂಡು ನಾಪತ್ತೆಯಾಗಿದ್ದನು. ಪೊಲೀಸರು ತಾಂತ್ರಿಕ ಹಾಗೂ ಇನ್ನಿತರ ದೃಷ್ಠಿಕೋನಗಳಲ್ಲಿ ಪ್ರಕರಣವನ್ನು ಪರಿಶೀಲನೆ ನಡೆಸಿ ಆರೋಪಿಯನ್ನು ಬಂದಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಈ ತಂಡವು ಈ ಬೈಕ್ ಕಳ್ಳತನ ಅಷ್ಟೇ ಅಲ್ಲದೆ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದ ಇತರೆ ಕಳ್ಳತನ ಪ್ರಕರಣಗಳಲ್ಲಿಯೂ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆಯು ತನಿಖೆ ನಡೆಸಲಾಗುತ್ತಿದೆ ಎಂದು ಸಿಪಿಐ ಸಂತೋಷ ಶೆಟ್ಟಿ ತಿಳಿಸಿದ್ದು ಆರೋಪಿತನಿಂದ ಕದ್ದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣವನ್ನು ತಮ್ಮ ಚಾಕಚಕ್ಯತೆಯಿಂದ ಪತ್ತೆ ಮಾಡಿದ ಅಂಕೋಲಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ  ವಿಷ್ಣುವರ್ಧನ, ಎನ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ. ಟಿ. ಜಯಕುಮಾರ ಅವರು ಆಭಿನಂದಿಸಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top