ಕಾರವಾರ: ನಗರದಲ್ಲಿ ನವೀಕರಣಗೊಂಡಿರುವ ಗೀತಾಂಜಲಿ ಚಿತ್ರಮಂದಿರದಲ್ಲಿ ಕನ್ನಡ ಸಿನೇಮಾಗಳನ್ನು ಹಾಕುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಸದಸ್ಯರು ಚಿತ್ರಮಂದಿರದ ಎದುರು ಜಮಾವಣೆಗೊಂಡು ಆಗ್ರಹಿಸಿದರು.
ಇತ್ತೀಚೆಗೆ ನವೀಕರಣಗೊಂಡಿರುವ ಗೀತಾಂಜಲಿ ಚಿತ್ರಮಂದಿರದಲ್ಲಿ ನಿತ್ಯ ನಾಲ್ಕು ಶೋ ನಡೆಸಲಾಗುತ್ತಿದೆ. ಆದರೆ ಈವರೆಗೂ ಕನ್ನಡ ಸಿನೇಮಾಗಳನ್ನು ಸರಿಯಾಗಿ ಹಾಕುತ್ತಿಲ್ಲ. ಹಾಸ್ಟಲ್ ಹುಡುಗರು ಸಿನೇಮಾ ಹಾಕಿದ್ರು ಕೂಡ ಮೂರೇ ದಿನದಲ್ಲಿ ತೆಗೆಯಲಾಗಿದೆ. ಆದರೆ ತೆಲಗು, ತಮಿಳು ಸಿನೇಮಾವನ್ನು ಇಲ್ಲಿ ಹಾಕುತ್ತಾರೆ. ಕನ್ನಡ ಸಿನೇಮಾವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದೀಗ ಜೈಲರ್ ಸಿನೇಮಾ ಹಾಕಲಾಗಿದೆ. ಸಿನೇಮಾ ಕನ್ನಡದಲ್ಲಿ ಇದ್ದರು ಕೂಡ ನಿರ್ಲಕ್ಷ್ಯ ಮಾಡಿ ತಮಿಳಿನಲ್ಲಿ ಹಾಕುತ್ತಿದ್ದಾರೆ. ಇಲ್ಲಿ ಯಾರಿಗೂ ತೆಲಗು ಬರುವುದಿಲ್ಲ. ಯಾವುದೋ ಭಾಷೆಯ ಸಿನೆಮಾ ಹಾಕುವ ಬದಲು ಕನ್ನಡ ಸಿನೇಮಾವನ್ನು ಹಾಕುವಂತೆ ಆಗ್ರಹಿಸಿದರು.
ಬಳಿಕ ಆಗಮಿಸಿದ ಪೊಲೀಸರು ಚಿತ್ರಮಂದಿರದ ಮಾಲಿಕರೊಂದಿಗೆ ಹಾಗೂ ಕರವೇ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು. ನಿತ್ಯ ಒಂದು ಶೋ ಆದರೂ ಹಾಕುವಂತೆ ಆಗ್ರಹಿಸಿದರು. ಕೊನೆಗೆ ಚಿತ್ರಮಂದಿರದ ಮಾಲಿಕರು ಒಪ್ಪಿಗೆ ಸೂಚಿಸಿದ ಬಳಿಕ ಪ್ರತಿಭಟನೆ ಹಿಂದೆ ಪಡೆಯಲಾಯಿತು.