Slide
Slide
Slide
previous arrow
next arrow

ಮುಂಡಗನಮನೆ ಸೊಸೈಟಿ ಕುರಿತು ಅಪಪ್ರಚಾರ; ದೂರು ದಾಖಲು

300x250 AD

ಶಿರಸಿ: ಮುಂಡಗನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ.ವೆಂ.ವೈದ್ಯ ಹಾಗೂ ಮಾರುಕಟ್ಟೆ ಸಲಹೆಗಾರರ ಹೆಸರನ್ನು ಅವಹೇಳನಕಾರಿಯಾಗಿ ಬಳಸಿ ಮತ್ತು ಸಹಕಾರಿ ಸಂಘದ ವಿರುದ್ಧ ಇಲ್ಲಸಲ್ಲದ ಅಪಾದನೆಗಳನ್ನು ಮಾಡಿ ಕೆಲವರು ಕರಪತ್ರ ಹಂಚಿದ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆ.12ರಂದು ಬೆಳಿಗ್ಗೆ 8 ಘಂಟೆ ಸುಮಾರಿಗೆ ದೇವನಳ್ಳಿ ಬಸ್‌ಸ್ಟಾಪ್ ಬಳಿ ತಮ್ಮ ಸಂಘದ ಅಧ್ಯಕ್ಷರು ಹಾಗೂ ಮಾರುಕಟ್ಟೆ ಸಲಹೆಗಾರರ ಹೆಸ ರನ್ನು ನಮೂದಿಸಿ, ಸಂಘದ ಅಢಾವೆ ಪತ್ರಿಕೆಗಳ ಪ್ರಕಾರ ಸಂಘವು ಸುಸ್ಥಿ ರ ಅಲ್ಲವೆಂದು ಕರಪತ್ರ ಎಸೆದಿದ್ದು ಗಮನಕ್ಕೆ ಬಂದಾಗ ಕರಪತ್ರ ತರಿಸಿ ಕೊಂಡು ಓದಿದ್ದು, ಕರಪತ್ರದಲ್ಲಿ ಬರೆದ ಮಾಹಿತಿ ಸಂಪೂರ್ಣ ಸುಳ್ಳಿನಿಂದ ಕೂಡಿದ್ದು, ಸಂಘದ ಅಧ್ಯಕ್ಷರು ಆ.20ರಂದು ಶಿರಸಿಯ ಟಿಎಸ್ ಎಸ್ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಅವರ ಹಾಗೂ ಸಂಘದ – ವಿರುದ್ಧ ಅಪಪ್ರಚಾರ ಮಾಡಿ ತೇಜೋವಧೆಗೆ ಕೆಲವರು ಪ್ರಯತ್ನಿಸುತ್ತಿರುವುದು ತಿಳಿದುಬಂದಿದೆ. ಇಂತಹ ಕರಪತ್ರ ಹಂಚಿದವರ ಕುರಿತು ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘದ ಮುಖ್ಯಕಾರ್ಯನಿರ್ವಾಹಕ ನಾಗಪತಿ ವಿನಾಯಕ ಭಟ್ಟ ದೂರು ನೀಡಿದ್ದು,ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

300x250 AD
Share This
300x250 AD
300x250 AD
300x250 AD
Back to top