ಶಿರಸಿ: ಇಲ್ಲಿನ ಪ್ರತಿಷ್ಠಿತ (ಟಿಎಸ್ಎಸ್) ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯ 2023-24 ರಿಂದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಆಯ್ಕೆಗೆ ಆ.20 ರಂದು ನಡೆಯಲಿರುವ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶನಿವಾರ ಮುಕ್ತಾಯವಾಗಿದ್ದು, ಒಟ್ಟೂ ಕಣದಲ್ಲಿ 74 ನಾಮಪತ್ರಗಳು ಸಲ್ಲಿಕೆಯಾಗಿವೆ.
ಆ.12, ಶನಿವಾರದಂದು ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಆ.12ರಂದು ಸಹಕಾರಿ ಸಂಘ ವರ್ಗದಿಂದ ವ್ಯವಸಾಯ ಸೇವಾ ಸಹಕಾರಿ ಸಂಘ ನಿ, ಕೊರ್ಲಕಟ್ಟಾ ಇಂದ ಸುರೇಶ ರಾಮಾ ನಾಯ್ಕ, ಕಾಳಂಗಿ ಸೇವಾ ಸಹಕಾರ ಸಂಘ ನಿ., ದಾಸನಕೊಪ್ಪದಿಂದ ರಾಜಶೇಖರ ಬಂಗಾರೆಪ್ಪ ಗೌಡ್ರು, ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘ ರಾಮನಗುಳಿಯಿಂದ ಗೋಪಾಲಕೃಷ್ಣ ರಾಮಕೃಷ್ಣ ವೈದ್ಯ, ಹಾರುಗಾರ ಗ್ರುಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಗೋಳಿಯಿಂದ ಗುರುಪಾದ ಮಂಜುನಾಥ ಹೆಗಡೆ, ಕೃಷಿ ಮತ್ತು ಕೃಷಿ ಕೈಗಾರಿಕಾ ಉತ್ಪಾದಕರ ವಿವಿಧೋದ್ಧೇಶಗಳ ಸಹಕಾರಿ ಸಂಘ ಬಕ್ಕಳದಿಂದ ಗಜಾನನ ನರಸಿಂಹ ಭಟ್ ನಾಮಪತ್ರ ಸಲ್ಲಿಸಿದ್ದಾರೆ.
ಸಾಮಾನ್ಯ ವರ್ಗದಿಂದ ಲೋಕೇಶ ಗುರುನಾಥ ಹೆಗಡೆ ಹುಲೇಮಳಗಿ, ವಿನಾಯಕ ದತ್ತಾತ್ರೇಯ ಭಟ್ಟ ಗೋಳಿಕೊಪ್ಪ, ಮಂಜುನಾಥ ವೆಂಕಟ್ರಮಣ ಹೆಗಡೆ ಹಿರೇಕೈ, ಸುಬ್ರಾಯ ವೆಂಕಟ್ರಮಣ ಭಟ್ಟ ಬಕ್ಕಳ, ಗಣಪತಿ ಅನಂತ ಭಟ್ಟ ಕೊಪ್ಪಲತೋಟ, ದಿವಾಕರ ಮಹಾಬಲೇಶ್ವರ ಹೆಗಡೆ ಕಡವೆ, ನಾರಾಯಣ ಕೃಷ್ಣ ಭಟ್ ಮೆಣಸುಪಾಲ, ಶಿವರಾಮ ಮಹಾಬಲೇಶ್ವರ ಭಟ್ಟ ಜಾಂಬಳಿಬೇಣ (ಇಡಗುಂದಿ), ವಸಂತ ತಿಮ್ಮಪ್ಪ ಹೆಗಡೆ ಶಿರಿಕುಳಿ, ಶ್ರೀಧರ ಮಂಜುನಾಥ ಹೆಗಡೆ ಕೂಗ್ತೆಮನೆ, ಶ್ರೀಕಾಂತ ಚಂದ್ರಶೇಖರ ಭಟ್ಟ ಊರಮುಂದೆ, ತಿರುಮಲೇಶ್ವರ ಮಹಾಬಲೇಶ್ವರ ಹೆಗಡೆ ಶೀಗೇಹಳ್ಳಿ ಬಿಳಿಯಾನೆ, ಮಹಾಬಲೇಶ್ವರ ನರಸಿಂಹ ಭಟ್ಟ ತೋಟಿಮನೆ, ರವೀಂದ್ರ ಗಣಪತಿ ಭಟ್ಟ ಜುಮ್ನಕಾನು, ರವೀಂದ್ರ ಸತ್ಯನಾರಾಯಣ ಹೆಗಡೆ ಹಳದೋಟ, ಗಣೇಶ ಗೋಪಾಲಕೃಷ್ಣ ಹೆಗಡೆ ಹೊಸಗದ್ದೆ, ಶ್ರೀಧರ ಗಣಪತಿ ಹೆಗಡೆ ಡೊಂಬೆಕೈ ನಾಮಪತ್ರ ಸಲ್ಲಿಸಿದ್ದಾರೆ.
ಹಿಂದುಳಿದ ‘ಅ’ ವರ್ಗದಿಂದ ನಾರಾಯಣ ಈರಾ ನಾಯ್ಕ ಮೆಣಸಿ, ಲಕ್ಷ್ಮಣ ಕೆರಿಯಾ ನಾಯ್ಕ ಹಲಸಿನಕೈ ನಾಮಪತ್ರ ಸಲ್ಲಿಸಿದ್ದಾರೆ. ಭಾನುವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಸೋಮವಾರ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶವಿದೆ.