Slide
Slide
Slide
previous arrow
next arrow

ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ: ಮಹಾಂತೇಶ ರೇವಡಿ

300x250 AD

ಅಂಕೋಲಾ: ಹಿರಿಯರನ್ನು, ತಂದೆ-ತಾಯಿಗಳನ್ನು, ಗುರುಗಳನ್ನು ದೇವರೆಂದೇ ತಿಳಿದ ದೇಶ ನಮ್ಮದು. ನಮ್ಮೆಲ್ಲರ ಬದುಕಿಗೆ ನೊಗ ಹೊತ್ತ ಹಿರಿಯ ನಾಗರಿಕರ ಸೇವೆಯನ್ನು ನೆನಪಿಸುವ ಜೊತೆಗೆ ಅವರು ನೆಮ್ಮದಿಯಿಂದ ಹಾಗೂ ಗೌರವದಿಂದ ಬದುಕಲು ಸಾಧ್ಯವಾಗುವಂತೆ ಮಾಡುವುದು ಯುವ ಜನಾಂಗದ ಕರ್ತವ್ಯವಾಗಿದೆ ಎಂದು ನಿವೃತ್ತ ಗ್ರಂಥಪಾಲಕ ಮಹಾಂತೇಶ ರೇವಡಿ ಹೇಳಿದರು.

ಅವರು ಲಯನ್ಸ್ ಕ್ಲಬ್ ಕರಾವಳಿ ಪುರಲಕ್ಕಿಬೇಣದ ರಾಘವೇಂದ್ರ ಮಠದಲ್ಲಿ ಏರ್ಪಡಿಸಿದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಜನಾಂಗ ಇಂದಲ್ಲ ನಾಳೆ ಹಿರಿಯ ನಾಗರಿಕರ ಸಾಲಿಗೆ ಸೇರಬೇಕಾಗಬಹುದು ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಲಯನ್ಸ್ ಕ್ಲಬ್ ಕರಾವಳಿ ಅಧ್ಯಕ್ಷ ಮಂಜುನಾಥ ಹರಿಕಾಂತ ಮಾತನಾಡಿ, ನಮ್ಮ ಕ್ಲಬ್ ಮಧುಮೇಹ ನಿಯಂತ್ರಣ, ಪರಿಸರ ರಕ್ಷಣೆ, ಮಕ್ಕಳ ಕ್ಯಾನ್ಸರ್ ತಡೆಗಟ್ಟುವಿಕೆ, ಉಚಿತ ಕಣ್ಣಿನ ಚಿಕಿತ್ಸೆ, ಯುವ ಜನಾಂಗಕ್ಕೆ ಮಾರ್ಗದರ್ಶನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ನಮ್ಮ ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲವೆಂದರು. ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಡಾ.ನರೇಂದ್ರ ನಾಯಕರ ನೇತೃತ್ವದಲ್ಲಿ ಪುರಲಕ್ಕಿಬೇಣದ ನಾಗರಿಕರಿಗೆ ರಕ್ತ ತಪಾಸಣೆ, ರಕ್ತದೊತ್ತಡ, ಜ್ವರ ತಪಾಸಣೆ, ಹೃದಯದ ಬಡಿತಗಳನ್ನು ಉಚಿತವಾಗಿ ಪರೀಕ್ಷಿಸಲಾಯಿತು. ಈ ಶಿಬಿರಕ್ಕೆ ಸುಚಿತ್ರಾ ಮೆಡಿಕಲ್ ಮಾಲಕ ಸುಧೀರ ನಾಯ್ಕ ಸಕ್ಕರೆ ಪ್ರಮಾಣ ಅಳೆಯುವ ಮಾಪನ, ರಕ್ತದೊತ್ತಡ ಪರೀಕ್ಷಿಸುವ ಪರಿಕರವನ್ನು ಲಯನ್ಸ್ಗೆ ದೇಣಿಗೆ ನೀಡಿದರು.

300x250 AD

ಈ ಸಂದರ್ಭದಲ್ಲಿ ಕಳೆದ ಸಾಲಿನ ಅಧ್ಯಕ್ಷ ಗಣೇಶ ಶೆಟ್ಟಿ ಅವರು ಬೆಸ್ಟ್ ಪ್ರೆಸಿಡೆಂಟ್ ಅವಾರ್ಡ್ ಹಾಗೂ ಬೆಸ್ಟ್ ಕ್ಲಬ್ ಅವಾರ್ಡ್ ತಂದುಕೊಟ್ಟಿದ್ದಕ್ಕೆ ಗೌರವಿಸಿ ಸನ್ಮಾನಿಸಲಾಯಿತು. ಹಿರಿಯ ಕವಿ ನಾಗೇಂದ್ರ ನಾಯಕ ಮಾತನಾಡಿ, ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ ಹಮ್ಮಿಕೊಂಡ ಸೇವಾ ಕಾರ್ಯಗಳು ಶ್ಲಾಘನೀಯವೆಂದರು. ಲಯನ್ಸ್ ಸದಸ್ಯರಾದ ಎಸ್.ಆರ್. ಉಡುಪಿ, ಗಣಪತಿ ನಾಯಕ, ದುರ್ಗಾನಂದ ದೇಸಾಯಿ, ದೇವಾನಂದ ಗಾಂವಕರ ಹಾಗೂ ಪುರಲಕ್ಕಿಬೇಣದ ಅಪಾರ ಸಂಖ್ಯೆಯ ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top