ಶಿರಸಿ: ಹಿಂದು ಜಾಗರಣಾ ವೇದಿಕೆ ವತಿಯಿಂದ ಆ.14, ಸೋಮವಾರ ರಾತ್ರಿ 10.30ಕ್ಕೆ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮವನ್ನು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ನಿವೃತ್ತ ಸೈನಿಕ ವಿನೋದ ವಿ.ನಾಯ್ಕ್ ಉಪಸ್ಥಿತರಿರಲಿದ್ದು, ಮುಖ್ಯ ಅತಿಥಿಗಳಾಗಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಆಗಮಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವ ದೇಶಭಕ್ತ ಬಂಧುಗಳು ಆಗಮಿಸಿ 1947ರ ಆ.14ರಂದು ನಡೆದ ನೈಜ ಇತಿಹಾಸ ತಿಳಿದುಕೊಂಡು ಕಾರ್ಯಕ್ರಮ ಚಂದಗಾಣಿಸಲು ಸಂಘಟಕರು ಕೋರಿದ್ದಾರೆ.