• Slide
    Slide
    Slide
    previous arrow
    next arrow
  • ಆ.13ಕ್ಕೆ ಸ್ವರ ಸಮ್ಮಿಲನ ಸಂಗೀತ ಕಾರ್ಯಕ್ರಮ

    300x250 AD


    ಸಿದ್ದಾಪುರ;ತಾಲೂಕಿನ ಹಿರೇಹದ್ದದ ಆಧಾರ ಷಡ್ಜ ಗುರುಕುಲ ಇವರಿಂದ  ‘ಸ್ವರ ಸಮ್ಮಿಲನ’ ಸಂಗೀತ ಕಾರ್ಯಕ್ರಮ ಹೆಗ್ಗರಣಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಗಸ್ಟ್ 13ರಂದು ನಡೆಯಲಿದೆ.

    ಬೆಳಗ್ಗೆ 10ರಿಂದ ಆಧಾರ ಷಡ್ಜ ಗುರುಕುಲದ ಹಿರಿ-ಕಿರಿಯ ವಿದ್ಯಾರ್ಥಿಗಳಿಂದ ಗಾಯನ ನಡೆಯಲಿದೆ. ತಬಲಾದಲ್ಲಿ ಶಂಕರ ಹೆಗಡೆ ಹಿರೇಮಕ್ಕಿ ಹಾಗೂ ಗಣೇಶ ಹೆಗಡೆ ಬಿಳೆಕಲ್ ಸಹಕರಿಸಲಿದ್ದಾರೆ. ಸಂಜೆ 5ಕ್ಕೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಹೆಗ್ಗರಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್.ಭಟ್ಟ ಉಂಚಳ್ಳಿ, ನಿವೃತ್ತ ಮುಖ್ಯಾಧ್ಯಾಪಕ ಜಿ.ಆರ್.ಭಾಗ್ವತ್ ತ್ಯಾರಗಲ್, ಹೆಗ್ಗರಣಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಗುರುಶಾಂತ ಸಿ.ಎಂ, ವೇ.ವಿನಾಯಕ  ಭಟ್ಟ ಹೆಗ್ಗಾರಬೈಲ್ ಉಪಸ್ಥಿತರಿರುತ್ತಾರೆ.

    300x250 AD

    ನಂತರ ನಡೆಯಲಿರುವ ಸಂಗೀತ ಕಾರ್ಯಕ್ರಮದಲ್ಲಿ ವಿನಾಯಕ ಹೆಗಡೆ ಹಿರೇಹದ್ದ ಅವರ ಗಾಯನಕ್ಕೆ ಅನಂತ ಹೆಗಡೆ ವಾಜಗಾರ ತಬಲಾದಲ್ಲಿ ಹಾಗೂ ಅಜಯ್ ಹೆಗಡೆ ಬೆಣ್ಣೆಮನೆ ಸಂವಾದಿನಿಯಲ್ಲಿ ಸಹಕರಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top