Slide
Slide
Slide
previous arrow
next arrow

ಮಾಸ್ಕೇರಿ ನಾಯಕರ ಸಾಹಿತ್ಯ, ಸಾಂಸ್ಕೃತಿಕ ಸೇವೆ ಅಭಿನಂದನೀಯ: ಕಾವ್ಯ ಭಟ್

300x250 AD

ದಾಂಡೇಲಿ: ಕನ್ನಡ ಸಾರಸ್ವತ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಮಾಸ್ಕೇರಿ ಎಂ.ಕೆ.ನಾಯಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆ ಅಭಿನಂದನೀಯ. ಕನ್ನಡ ಸಾರಸ್ವತ ಲೋಕಕ್ಕೆ ಅನೇಕ ಸಾಹಿತ್ಯ ಕೃತಿಗಳನ್ನು ನೀಡುವುದರ ಜೊತೆಯಲ್ಲಿ ಇನ್ನೊಬ್ಬರಲ್ಲಿಯೂ ಸಾಹಿತ್ಯದ ಅಭಿರುಚಿಯನ್ನು ಮೂಡಿಸಿ ಅವರನ್ನು ಲೇಖಕರನ್ನಾಗಿ, ಬರಹಗಾರರನ್ನಾಗಿ, ಕವಿಗಳನ್ನಾಗಿ ಬೆಳೆಸುವ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕರು ನಿಜವಾದ ನಾಡು ಕಟ್ಟುವ ಕಾಯಕಯೋಗಿದ್ದಾರೆ ಎಂದು ಲೇಖಕಿ ಹಾಗೂ ಗಾಯಕಿ ಕಾವ್ಯಾ ಭಟ್ ಅವರು ಹೇಳಿದರು.

ಅವರು ಮಾಸ್ಕೇರಿ ಸಾಹಿತ್ಯ ಸಂಸ್ಥೆಯ ಆಶ್ರಯದಡಿ ನಗರದ ಮಾಸ್ಕೇರಿ ಸಾಹಿತ್ಯ ಸಂಸ್ಥೆಯ ಸಭಾಭವನದಲ್ಲಿ ನಡೆದ ಮಾಸ್ಕೇರಿ ಸಾಹಿತ್ಯ ಸಂಸ್ಥೆಯ 108ನೇ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು. ನನ್ನಂತಹ ವಿದ್ಯಾರ್ಥಿನಿಯ ಕಿರು ಕಾದಂಬರಿಯನ್ನು ಉಚಿತವಾಗಿ ಪ್ರಕಟಿಸಿ ನನ್ನನ್ನು ಪ್ರೋತ್ಸಾಹಿಸಿ ಮತ್ತಷ್ಟು ಸಾಹಿತ್ಯದ ಸೇವೆ ಮಾಡಲು ಪ್ರೇರಣೆಯಾಗಿರುವ ಮಾಸ್ಕೇರಿ ನಾಯಕರ ಜೀವನ ವ್ಯಕ್ತಿತ್ವ ನಮಗೆಲ್ಲರಿಗೂ ಆದರ್ಶ ಎಂದರು.
ಕೆನರಾ ವೆಲ್ಫೇರ್ ಟ್ರಸ್ಟಿನ ಬಿಇಡಿ ಕಾಲೇಜಿನ ಪ್ರಾಚಾರ್ಯರಾದ ಸಹನಾ ಸರ‍್ಯವಂಶಿ, ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳಲು ಪುಣ್ಯ ಮಾಡಿರಬೇಕು. ಈ ಪ್ರಪಂಚದಲ್ಲಿ ನಾವು ನೀವೆಲ್ಲರೂ ಒಂದಲ್ಲ ಒಂದು ದಿನ ಸಾಯುತ್ತೇವೆ. ಆದರೆ ಸಾಹಿತ್ಯ ಕೃತಿಗಳು ನಿತ್ಯನಿರಂತರವಾಗಿ ಸಮಾಜಕ್ಕೆ ಬೆಳಕು ನೀಡುವ ಮೂಲಕ ಕೃತಿಕಾರರ ಹೆಸರನ್ನು ಸದಾ ಅಮರಗೊಳಿಸುತ್ತದೆ ಎಂದರು.
ಮಾಸ್ಕೇರಿ ಎಂ.ಕೆ.ನಾಯಕರವರು ಸಮಾಜದಿಂದ ಎಲ್ಲವನ್ನು ಪಡೆದ ನಾವು ಸಮಾಜಕ್ಕೆ ಕಿಂಚಿತ್ತಾದರೂ ಕೊಡಬೇಕಾಗಿರುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಎಂದರು.

300x250 AD

ಲೇಖಕಿ ಸಾಕ್ಷಿ ಸಾಮಂತ್ ಅವರು ರೇಣುಕಾ ಭಟ್ ಅವರ ಸೌಗಂಧಿಕಾ ಕವನಗಳನ್ನು ವಾಚಿಸಿ, ವಿಶ್ಲೇಷಿಸಿದರು. ಕ್ರೀಡಾಪಟು ಸಂಜನಾ ಮಾಶಾಲ್ ಅವರು ಕಾರ‍್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆನರಾ ವೆಲ್ಪೇರ್ ಟ್ರಸ್ಟಿನ ಬಿ.ಎಡ್ ಕಾಲೇಜಿನ ಉಪನ್ಯಾಸಕ ನಾಗೇಶ್ ನಾಯ್ಕ, ನ್ಯಾಯವಾದಿ ಆರ್.ವಿ.ಗಡೆಪ್ಪನವರ್, ದಯಾನಂದ ದೇಸಾಯಿಯವರು ಸಂದರ್ಭೋಚಿತವಾಗಿ ಮಾತನಾಡಿದರು. ಐಶ್ವರ್ಯ ಗುರುರಾಜ ನಾಯಕ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಯೊಬ್ಬರಲ್ಲಿ ಜೀವನೋತ್ಸವನ್ನು ತಂದುಕೊಡುವಲ್ಲಿ ಪರಿಣಾಮಕಾರಿಯಾಗಿದೆ ಎಂದರು.
ಕಾರ‍್ಯಕ್ರಮದಲ್ಲಿ ಸಮಾಜ ಸೇವಕರಾದ ಜಿ.ಪಿ.ಪೆರುಮಾಳ ಮತ್ತು ಮುಜಾಫರ್ ಅವರನ್ನು ಮಾಸ್ಕೇರಿ ಸಾಹಿತ್ಯ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯ್ತು. ಗುರುರಾಜ ನಾಯಕ ಸ್ವಾಗತಿಸಿದ ಕಾರ‍್ಯಕ್ರಮಕ್ಕೆ ಶ್ರದ್ಧಾ ಸಾಮಂತ್ ವಂದಿಸಿದರು. ಶಿಕ್ಷಕಿ ನಂದಿನಿ ನಾಯ್ಕ ನಿರೂಪಿಸಿದರು. ಭಾರತಿ ಕವರಿ ಸಹಕರಿಸಿದರು.

Share This
300x250 AD
300x250 AD
300x250 AD
Back to top