• Slide
    Slide
    Slide
    previous arrow
    next arrow
  • ‘ಯೋಗ’ ಚಿಕಿತ್ಸಕದ ಜೊತೆ ಜೀವನ ಪದ್ಧತಿಯೂ ಹೌದು: ವಿನಾಯಕ ಗುಡಿಗಾರ

    300x250 AD

    ಅಂಕೋಲಾ: ಯೋಗ ಒಂದು ಚಿಕಿತ್ಸಕ ಪದ್ಧತಿ ಅಷ್ಟೇ ಅಲ್ಲದೆ, ಅದೊಂದು ಜೀವನ ಪದ್ಧತಿಯೂ ಆಗಿದೆ. ಯೋಗಕ್ಕೆ ಒಂದು ಪರಂಪರೆ ಇದ್ದು, ಅದರಲ್ಲಿ ವಿಜ್ಞಾನವೂ ಇದೆ. ಕೆಲವೊಬ್ಬರಿಗೆ ಯೋಗದ ಕುರಿತಾಗಿ ತಪ್ಪು ಕಲ್ಪನೆ ಇದ್ದು, ಯೋಗಕ್ಕೆ ಜಾತಿ ಧರ್ಮ ಅಥವಾ ವಯಸ್ಸಿನ ನಿರ್ಬಂಧವಿಲ್ಲ. ಅಲ್ಲದೆ ಇದು ಕೇವಲ ವ್ಯಾಯಾಮವೂ ಅಲ್ಲ. ಇದನ್ನು ಸರಿಯಾಗಿ ಪಾಲಿಸಿದಲ್ಲಿ ಮಾತ್ರ ಯೋಗ ಕಲಿಸಿದ ಶಿಕ್ಷಕರಿಗೆ ಗೌರವ ನೀಡಿದಂತಾಗುತ್ತದೆ ಎಂದು ಪತಂಜಲಿ ಯೋಗ ಪೀಠದ ಪ್ರಭಾರಿ ವಿನಾಯಕ ಗುಡಿಗಾರ ಹೇಳಿದರು.

    ಅವರು ಕೆಎಲ್‌ಇ ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ್ದ ಯೋಗ ಪಾಕ್ಷಿಕ ಕಾರ್ಯಕ್ರಮದ ಸಮಾರೋಪ ಹಾಗೂ ಗುರುಗೌರವ ಸ್ವೀಕರಿಸಿ ಮಾತನಾಡಿ, ಶಿಕ್ಷಕನು ತನ್ನ ವಿದ್ಯಾರ್ಥಿಗಳಲ್ಲಾಗುವ ಬದಲಾವಣೆಯನ್ನು ಅವಲೋಕಿಸುವ ಗುಣ ಬೆಳೆಸಿಕೊಂಡು ಸರ್ವತೋಮುಖ ಪ್ರಗತಿಯ ಕಡೆ ಸೆಳೆಯಬೇಕು ಎಂದರು.

    300x250 AD

    ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಜಿ.ಹೆಗಡೆ, ಯೋಗ ಮನಸ್ಸಿನ ಮೂಲೆಯಲ್ಲಿರುವ ಚಿಂತನೆಯನ್ನು ದೂರಮಾಡಿ ಸಮೃದ್ದ ಶಾಂತಿಯುತ ಮನಸ್ಸನ್ನು ಸೃಷ್ಠಿಸುತ್ತದೆ. ಯೋಗವನ್ನು ಪ್ರತಿನಿತ್ಯ ಯಜ್ಞದಂತೆ ಮಾಡಬೇಕು ಎಂದರು.
    ಕಾರ್ಯಕ್ರಮದಲ್ಲಿ ಸುಷ್ಮಾ ಸಂಗಡಿಗರು ಪ್ರಾರ್ಥಿಸಿದರು. ಕಾವ್ಯ ಗಾಂವಕರ ಸ್ವಾಗತಿಸಿದರು. ಯೋಗ ಪಾಕ್ಷಿಕದ ಕುರಿತು ವಿದ್ಯಾರ್ಥಿಗಳಾದ ಚೈತ್ರಾ ಆಚಾರಿ ಹಾಗೂ ಹರ್ಷಾ ಎಂ.ಎಚ್. ಮಾತನಾಡಿದರು. ವೀಣಾ ಗೌಡ ವಂದಿಸಿದರು. ಎಸ್.ಸಂಪ್ರಿಯಾ ನಿರೂಪಿಸಿದರು. ವೇದಿಕೆಯಲ್ಲಿ ಎನ್‌ಎಸ್‌ಎಸ್ ಅಧಿಕಾರಿ ರಾಘವೇಂದ್ರ ಅಂಕೋಲೆಕರ ಉಪಸ್ಥಿತರಿದ್ದರು. ಸಮಸ್ತ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಸಹಕರಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top