ಜೊಯಿಡಾ: ತಾಲೂಕಿನ ಉಳವಿ ಗ್ರಾಮ ಪಂಚಾಯತದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಂಜುನಾಥ ಮೋಕಾಶಿ ಮತ್ತು ಉಪಾಧ್ಯಕ್ಷರಾಗಿ ಮಂಗಲಾ ಮಿರಾಶಿ ಆಯ್ಕೆಯಾಗಿದ್ದಾರೆ.
ಎರಡನೇ ಅವಧಿಯ ಅಧ್ಯಕ್ಷ ,ಉಪಾಧ್ಯಕ್ಷ ಆಯ್ಕೆಯಲ್ಲಿ ಮಂಜುನಾಥ ಮೋಕಾಶಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ಹಿಂದೆ 5 ವರ್ಷಗಳ ಕಾಲ ಉಳವಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈಗ ಮತ್ತೆ ಅಧ್ಯಕ್ಷರಾಗಿದ್ದು, ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಕೆಲಸಗಳ ಮೂಲಕ ಹೆಸರುವಾಸಿಯಾದ ಇವರು ಪುನಃ ಮತ್ತೊಮ್ಮೆ ಅಧ್ಯಕ್ಷರಾಗಿದ್ದಾರೆ.
ಸಂದರ್ಭದಲ್ಲಿ ಉಳವಿ ಗ್ರಾ.ಪಂ.ಸದಸ್ಯರಾದ ಜುಬೇರ ಶೇಖ್, ದಾಮೋದರ ಗೌಡ, ಮಂಜುಳಾ ವಸ್ತ್ರದ,ಸಂಜೀವಿನಿ ಹರಿಜನ್ ವಿಷ್ಣು ಬಿರಂಗತ್, ಉಳವಿ ದೇವಸ್ಥಾನದ ಮುಖ್ಯ ಅರ್ಚಕರಾದ ಶಂಕರಯ್ಯ ಕಲ್ಮಠ ಇತರರು ಉಪಸ್ಥಿತರಿದ್ದರು.