• Slide
  Slide
  Slide
  previous arrow
  next arrow
 • ಆ.13ಕ್ಕೆ ಸ್ವರ್ಣವಲ್ಲೀಯಲ್ಲಿ ಸ್ವಸಹಾಯ ಸಂಘಗಳ ಸಮಾವೇಶ

  300x250 AD

  ಶಿರಸಿ: ಶ್ರೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳವರ 33 ನೇ ಚಾತುರ್ಮಾಸದ ಪುಣ್ಯ ಕಾಲದಲ್ಲಿ ಶ್ರೀ ಮಠದ ಅಂಗ ಸಂಸ್ಥೆಯಾದ ಗ್ರಾಮಾಭ್ಯುದಯ ಸ್ವ ಸಹಾಯ ಸಂಘಗಳ ಸಮಾವೇಶವನ್ನು ಆ.13, ರವಿವಾರದಂದು ಬೆಳಿಗ್ಗೆ 10 ಗಂಟೆಗೆ ಸುಧರ್ಮಾ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದಲ್ಲಿ ಶ್ರೀಗಳವರು ಸಾನಿಧ್ಯ ವಹಿಸಲಿದ್ದಾರೆ.

  ಗ್ರಾಮಾಭ್ಯುದಯದ ಎಂ.ಸಿ. ಹೆಗಡೆ ಶಿರಸಿಮಕ್ಕಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ಕಾರವಾರ ಕ್ಷೇತ್ರೀಯ ವ್ಯವಸ್ಥಾಪಕ ಮಧುಕೇಶ್ವರ ಹೆಗಡೆ ಆಗಮಿಸಲಿದ್ದಾರೆ.
  ನಂತರ ಹೈನೊದ್ಯಮ, ಗೋ ಉತ್ಪನ್ನಗಳ ತಯಾರಿಕೆ, ಸ್ವ ಸಹಾಯ ಸಂಘಗಳಿಗೆ ಬ್ಯಾಂಕಿನಿಂದ ಸಿಗುವ ಸವಲತ್ತುಗಳು ಹಾಗೂ ಸಂಘಗಳ ಲೆಕ್ಕ ನಿರ್ವಹಣೆ ಕುರಿತು ಮಾರ್ಗದರ್ಶನ ನಡೆಯಲಿದೆ. ಮಧ್ಯಾಹ್ನ 4 ಘಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಪರಮಪೂಜ್ಯ ಶ್ರೀಗಳವರ ದಿವ್ಯ ಸಾನಿಧ್ಯ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕ ಭೀಮಣ್ಣ ನಾಯ್ಕ ಆಗಮಿಸಲಿದ್ದು, ಅಲ್ಲದೇ ಶ್ರೀಮಠದ ಕಾರ್ಯಾಧ್ಯಕ್ಷರಾದ ವಿ.ಎನ್. ಹೆಗಡೆ ಬೊಮ್ಮಳ್ಳಿ ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸ್ವ ಸಹಾಯ ಸಂಘಗಳು ಭಾಗವಹಿಸಬೇಕಾಗಿ ವ್ಯವಸ್ಥಾಪಕರು ವಿನಂತಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top