Slide
Slide
Slide
previous arrow
next arrow

ಬಿಜಿಎಸ್ ಸೆಂಟ್ರಲ್ ಸ್ಕೂಲ್ ಶಾಲಾ ಸಂಸತ್ ಚುನಾವಣೆ: ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ

300x250 AD

ಕುಮಟಾ: ಸದ್ಗುರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಮಿರ್ಜಾನ್ ಶಾಖಾಮಠದ ಪೂಜ್ಯರಾದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥಾಜೀ ದಿವ್ಯ ಸಾನಿಧ್ಯದಲ್ಲಿ ಇತ್ತೀಚೆಗೆ ದೀವಗಿಯ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಸೆಂಟ್ರಲ್ ಸ್ಕೂಲ್’ನ ಶಾಲಾ ಸಂಸತ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣ ವಚನ ಬೋಧನೆ ಹಾಗೂ ತಾಲೂಕಾ ಮಟ್ಟದ ಅಂತರ್ ಪ್ರೌಢಶಾಲಾ ಚದುರಂಗ ಮತ್ತು ಜಾನಪದ ಗೀತೆ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭವು ನಡೆಯಿತು.

ನಾಡಗೀತೆ, ವೇದಘೋಷ ಮತ್ತು ಪ್ರಾರ್ಥನೆಯ ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿದ ಪೂಜ್ಯ ಸದ್ಗುರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಬಿಜಿಎಸ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳಿಗೆ ಚುನಾವಣೆ ನಡೆಸಿ, ಆ ಮೂಲಕ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿ, ಇಂದು ಶಾಲಾ ಸಂಸತ್ ಉದ್ಘಾಟಿಸುತ್ತಿರುವುದು ಶ್ಲಾಘನೀಯ. ಇದರಿಂದ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಬಗ್ಗೆ ಪ್ರಾಯೋಗಿಕ ಅರಿವು ಮೂಡುತ್ತದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಬಗ್ಗೆ ಮಕ್ಕಳಿಗೆ ಶಾಲಾ ಹಂತದಲ್ಲೇ ಪ್ರಾಯೋಗಿಕವಾಗಿ ಜ್ಞಾನ ನೀಡಿದಾಗ, ಮುಂದೆ ಆಡಳಿತಾತ್ಮಕವಾಗಿ, ಸ್ಪರ್ಧಾತ್ಮಕವಾಗಿ ಅನೇಕ ಪರೀಕ್ಷೆ ಎದುರಿಸಲು ಮತ್ತು ಉತ್ತಮ ಆಡಳಿತ ನೀಡಲು ಸಹಕಾರಿಯಾಗುತ್ತದೆ. ನಮ್ಮ ನೆರೆ ದೇಶ ಪಾಕಿಸ್ತಾನದಲ್ಲಿ ಇಂದು ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿರುವುದನ್ನು ನಾವಿಂದು ದಿನಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಕಾರಣ ಅಲ್ಲಿ ಪ್ರಜಾಪ್ರಭುತ್ವಕ್ಕಿಂತ ಮಿಲಿಟರಿ ಆಡಳಿತಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ತುಂಬಾ ಕಳವಳಕಾರಿ. ಆದರೆ ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವದ ಮೂಲಕ ದೇಶದಲ್ಲಿ ಪ್ರಜೆಗಳೇ ಪ್ರಭುಗಳು. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳುವ ಮೂಲಕ ಮುಂದೆ ಒಳ್ಳೆಯ ಪ್ರಜೆಗಳಾಗಿ ಎಂದು ಆಶೀರ್ವಚನ ನೀಡಿದರು.

ಆಡಳಿತಾಧಿಕಾರಿ ಜಿ. ಮಂಜುನಾಥ ವಿದ್ಯಾರ್ಥಿಗಳ ಶಾಲಾ ವಿಭಾಗದ, ಕ್ರೀಡಾ ವಿಭಾಗದ, ಶಿಸ್ತುಪಾಲನಾ ವಿಭಾಗದ ಹಾಗೂ ಸಾಂಸ್ಕೃತಿಕ ವಿಭಾಗದ ನಾಯಕ /ನಾಯಕಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲ ಗುರುರಾಜ್, ಭದ್ರಾವತಿಯ ಆಡಳಿತಾಧಿಕಾರಿ ಜಗದೀಶ್, ಶಿವಮೊಗ್ಗದ ವ್ಯವಸ್ಥಾಪಕರಾದ ಅಮೀಶ್, ಆಡಳಿತ ಮಂಡಳಿ ಸದಸ್ಯರಾದ ಎಂ. ಟಿ. ಗೌಡ, ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲೆ ಶ್ರೀಮತಿ ಲೀನಾ ಎಂ ಗೊನೇಹಳ್ಳಿ, ಶ್ರೀಧರ ಗೌಡ ಉಪ್ಪಿನ ಗಣಪತಿ, ಮಂಜುನಾಥ ಪಟಗಾರ, ಭಾಸ್ಕರ ಪಟಗಾರ, ಬೊಮ್ಮಯ್ಯ ಗೌಡರು, ಹಿರಿಯ ಶಿಕ್ಷಕ ಎಂ. ಜಿ. ಹಿರೇಕುಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

300x250 AD

ತಾಲೂಕಾ ಮಟ್ಟದ ಅಂತರ್ ಪ್ರೌಢಶಾಲಾ ಚದುರಂಗ ಸ್ಪರ್ಧೆಯಲ್ಲಿ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಸಿಂಚನಾ ಜಿ. ಭಟ್ ಪ್ರಥಮ, ಪ್ರಣೀತ್ ವಿ. ಶೆಟ್ಟಿ ದ್ವಿತೀಯ,ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಕೌಶಿಕ್ ಜಿ. ಹೆಗಡೆ ತೃತೀಯ ಸ್ಥಾನ ಹಾಗೂ ಜಾನಪದ ಗೀತೆ ಸ್ಪರ್ಧೆಯಲ್ಲಿ ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಲಚಿತಾ ಗಾವಡಿ ಪ್ರಥಮ, ಸಿ.ವಿ.ಎಸ್.ಕೆ ಪ್ರೌಢಶಾಲೆಯ ಶ್ರೇಯಾ ಜಿ. ಹೆಬ್ಬಾರ್ ದ್ವಿತೀಯ, ಜನತಾ ವಿದ್ಯಾಲಯದ ಜ್ಯೋತಿ ನಾಯ್ಕ ಮತ್ತು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯ ಶಿರೀನ್ ತಾಜ್, ತೃತೀಯ ಸ್ಥಾನ ಪಡೆದಿದ್ದು, ಎಲ್ಲಾ ವಿಜೇತರಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು ಹಾಗೂ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕುಮಟಾ ತಾಲೂಕಿನ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಅಲ್ಲದೇ ಇದೇ ಸಮಾರಂಭದಲ್ಲಿ ಪೂಜ್ಯರು ವಿದ್ಯಾರ್ಥಿಗಳು ರಚಿಸಿದ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳ ಬರಹಗಳನ್ನೊಳಗೊಂಡ “ಸ್ಪೆಕ್ಟ್ರಂ” ಸಂಚಿಕೆ ಬಿಡುಗಡೆ ಮಾಡಿದರು. ಕಿರಿಯ ವಿದ್ಯಾರ್ಥಿಗಳ ವಿವಿಧ ವೇಷಭೂಷಣಗಳು ಮತ್ತು ಅವರ ನೃತ್ಯ, ಹಿರಿಯ ವಿದ್ಯಾರ್ಥಿಗಳ ಭಜನೆ, ಭರತನಾಟ್ಯ ಜನಮನಸೂರೆಗೊಂಡಿತ್ತು. ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಪಾಲಕರು ಕಾರ್ಯಕ್ರಮದ ಅಭೂತಪೂರ್ವ ಯಶಸ್ವಿಗೆ ಕಾರಣರಾದರು.

Share This
300x250 AD
300x250 AD
300x250 AD
Back to top