Slide
Slide
Slide
previous arrow
next arrow

ಗಿಡ ನೆಟ್ಟರಾಗದು,ಪೋಷಿಸಬೇಕು: ರವೀಂದ್ರ ನಾಯ್ಕ

300x250 AD

ಮುಂಡಗೋಡ: ಜಿಲ್ಲಾದ್ಯಂತ ಅರಣ್ಯವಾಸಿಗಳಿಂದ ಪರಿಸರ ಜಾಗೃತ ಅಂಗವಾಗಿ ಗಿಡ ನೆಡುವ ಕಾರ್ಯವು ಜರುಗುತ್ತಿದ್ದು, ಅರಣ್ಯವಾಸಿಗಳು ಗಿಡ ನೆಡುವುದಕ್ಕೆ ಮಾತ್ರ ಸೀಮಿತರಾಗದೇ, ಗಿಡಗಳನ್ನು ಪೋಷಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಅರಣ್ಯವಾಸಿಗಳು ಗಿಡಗಳನ್ನು ಪೋಷಿಸದಿದ್ದಲ್ಲಿ, ಗಿಡ ನೆಡುವ ಅಭಿಯಾನವು ವಿಫಲವಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

 ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ, ಮುಂಡಗೋಡ ತಾಲೂಕಿನ, ಚೌಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ, ಮಲವಳ್ಳಿಯಲ್ಲಿ ಗಿಡ ನೆಡುವ ಕಾರ್ಯಕ್ರಮದ ಸಂದರ್ಭದಲ್ಲಿ ಮೇಲಿನಂತೆ ಹೇಳಿದರು.

 ಅರಣ್ಯ ಸಾಂದ್ರತೆ ಹೆಚ್ಚಿಸುವ ಜವಬ್ದಾರಿಯಿಂದ ಗಿಡ ನೆಡುವುದೊಂದಿಗೆ, ನೆಟ್ಟಂತಹ ಗಿಡಗಳನ್ನು ರಕ್ಷಿಸುವ ಜವಬ್ದಾರಿ ಅರಣ್ಯವಾಸಿಗಳದ್ದಾಗಿದೆ. ಅರಣ್ಯ ಭೂಮಿ ಹಕ್ಕಿನ ಹೋರಾಟದೊಂದಿಗೆ ಅರಣ್ಯ ಭೂಮಿ ರಕ್ಷಿಸಿ, ಅರಣ್ಯ ಸಾಂದ್ರತೆ ಹೆಚ್ಚಿಸುವುದು ಅರಣ್ಯವಾಸಿಗಳ ಕರ್ತವ್ಯವಾಗಿದೆ. ಈ ದಿಶೆಯಲ್ಲಿ ಸಕ್ರಿಯವಾಗಿ ಅರಣ್ಯವಾಸಿಗಳು ಗಿಡ ನೆಡುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಅವರು ಹೇಳಿದರು.

300x250 AD

 ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಶಿವಾನಂದ ಜೋಗಿ, ಜಗದೀಶ್ ಶೆಟ್ಟರ್, ಸುರೇಶ ಯಲ್ಲಪ್ಪ ಕಟಗಿ, ಶಿವಪುತ್ರ ನಾಗೇಂದ್ರಪ್ಪ ಹಾರೆಗೊಪ್ಪ, ದಿವಾನ್‌ಸಾಬ್ ಸಂಶೂನ್ ಅಗಡಿ, ಮೌಲಾಲಿ ಮಾಬುಸಾಬ ದುಂಡಸಿ, ರುಸ್ತುಂಸಾಬ ಮಗರಸಾಬ ಅಗಡಿ, ಪುಟ್ಟಪ್ಪ ರಾಮಚಂದ್ರ ನಾಡೇಕರ್, ಅಬ್ದುಲ್‌ಸಾಬ ನೇಮಸಾಬ ದುಂಡಸಿ, ಮೌಲಾಲಿ ರಜೇಕಸಾಬ ಡುಂಮಕಿ, ಜಗದೀಶ್ ಹೇರೂರು ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top